ICC T20 World Cup 2021: ಗವಾಸ್ಕರ್, ಕಪಿಲ್ ದೇವ್ ಗೆ ಮಸಾಜ್ ಮಾಡಿದ ಶೋಯಬ್ ಅಖ್ತರ್..!

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು ಭಾನುವಾರದಂದು ಐಸಿಸಿ ಟಿ 20 ವಿಶ್ವಕಪ್ 2021 ರಲ್ಲಿ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಭಾರತೀಯ ದಂತಕಥೆಗಳಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರೊಂದಿಗೆ ಚಿಲ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Written by - Zee Kannada News Desk | Last Updated : Oct 17, 2021, 03:57 PM IST
  • ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು ಭಾನುವಾರದಂದು ಐಸಿಸಿ ಟಿ 20 ವಿಶ್ವಕಪ್ 2021 ರಲ್ಲಿ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಭಾರತೀಯ ದಂತಕಥೆಗಳಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರೊಂದಿಗೆ ಚಿಲ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ICC T20 World Cup 2021: ಗವಾಸ್ಕರ್, ಕಪಿಲ್ ದೇವ್ ಗೆ ಮಸಾಜ್ ಮಾಡಿದ ಶೋಯಬ್ ಅಖ್ತರ್..! title=
Photo Courtesy: Twitter

ನವದೆಹಲಿ: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅವರು ಭಾನುವಾರದಂದು ಐಸಿಸಿ ಟಿ 20 ವಿಶ್ವಕಪ್ 2021 ರಲ್ಲಿ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಭಾರತೀಯ ದಂತಕಥೆಗಳಾದ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಅವರೊಂದಿಗೆ ಚಿಲ್ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅಖ್ತರ್ (Shoaib Akhtar) ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಅವರು ಅತ್ಯುತ್ತಮ ಆಟಗಾರರೊಂದಿಗೆ ಚಿಲ್ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಪಾಕಿಸ್ತಾನದ ಮಾಜಿ ಬ್ಯಾಟ್ಸ್ಮನ್ ಜಹೀರ್ ಅಬ್ಬಾಸ್ ಮತ್ತು ಭಾರತೀಯ ಕ್ರಿಕೆಟಿಗ ಅತುಲ್ ವಾಸನ್ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ :'ಗಾಯದ ನಡುವೆಯೂ ಭಾರತ ಕ್ರಿಕೆಟ್ ತಂಡ ತನ್ನ ನಿಜ ಸಾಮರ್ಥ್ಯ ತೋರಿಸಿದೆ'

ಪಾಕಿಸ್ತಾನವು ಐಸಿಸಿ ಟೂರ್ನಮೆಂಟ್‌ಗಳಲ್ಲಿ ಭಾರತದ ವಿರುದ್ಧ ನೀರಸ ದಾಖಲೆಯನ್ನು ಹೊಂದಿದೆ, 17 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದೆ, ಮತ್ತು ಎಲ್ಲಾ ಮೂರು ಗೆಲುವುಗಳು ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಬಂದಿವೆ.ಪಾಕಿಸ್ತಾನವು 2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತವನ್ನು ಸೋಲಿಸಿದ್ದು ಗಮನಾರ್ಹವಾಗಿದೆ.

ಇದನ್ನೂ ಓದಿ : Chief Ministers Salary in India: ದೇಶದ ಯಾವ ರಾಜ್ಯದ ಮುಖ್ಯಮಂತ್ರಿ ವೇತನ ಎಷ್ಟು? ಕರ್ನಾಟಕದ ಮುಖ್ಯಮಂತ್ರಿಗಳ ವೇತನ?

ಏತನ್ಮಧ್ಯೆ, ನಾಯಕ ವಿರಾಟ್ ಕೊಹ್ಲಿ ಶನಿವಾರ ಭಾರತೀಯ ತಂಡದ ಮಾರ್ಗದರ್ಶಕ ಮಹೇಂದ್ರ ಸಿಂಗ್ ಧೋನಿ ಅವರ 'ಸಂಕೀರ್ಣ ವಿವರಗಳಿಗೆ ಅವರಿಗಿರುವ ನೋಟ' ಮತ್ತು 'ಪ್ರಾಯೋಗಿಕ ಸಲಹೆ' ಟಿ 20 ವಿಶ್ವಕಪ್‌ನಲ್ಲಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಬಿಸಿಸಿಐ ಕಳೆದ ತಿಂಗಳು ಧೋನಿಯನ್ನು ಭಾರತದ 15 ಸದಸ್ಯರ ಟಿ 20 ವಿಶ್ವಕಪ್ ತಂಡದ ಮಾರ್ಗದರ್ಶಕರಾಗಿ ಕರೆತಂದಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿತು.

'ಅವರು ಬೃಹತ್ ಅನುಭವವನ್ನು ಪಡೆದಿದ್ದಾರೆ.ಆ ವಾತಾವರಣಕ್ಕೆ ಮರಳಲು ಅವರು ತುಂಬಾ ಉತ್ಸುಕರಾಗಿದ್ದಾರೆ.ನಾವು ತಂಡದೊಂದಿಗೆ ಇರುವವರೆಗೂ ನಾವು ನಮ್ಮ ವೃತ್ತಿಜೀವನವನ್ನು ಆರಂಭಿಸಿದಾಗ ಅವರು ಯಾವಾಗಲೂ ನಮಗೆ ಮಾರ್ಗದರ್ಶಕರಾಗಿದ್ದರು" ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ :ನ್ಯೂಜಿಲೆಂಡ್ ಪಾಕಿಸ್ತಾನದ ಕ್ರಿಕೆಟ್ ನ್ನು ಕೊಲೆಗೈದಿದೆ- ಶೋಯಬ್ ಅಖ್ತರ್

ಹಿಂದಿನ ಶನಿವಾರ, ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಮತ್ತು ಬೌಲಿಂಗ್ ತರಬೇತುದಾರ ಅಜರ್ ಮಹಮೂದ್, ಸಾಂಪ್ರದಾಯಿಕ ಎದುರಾಳಿಗಳ ಯುದ್ಧದಲ್ಲಿ, ಭಾರತವು ಐಸಿಸಿ ಟಿ 20 ವಿಶ್ವಕಪ್ 2021 ರಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದ್ದರು. ಏಕೆಂದರೆ ಅವರ ಆಟಗಾರರು ಐಪಿಎಲ್ 2021 ಅನ್ನು ಆಡುತ್ತಿದ್ದಾರೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News