Free Hit Rules: ಫ್ರೀ ಹಿಟ್ ನಿಯಮದಲ್ಲಿ ಐತಿಹಾಸಿಕ ಬದಲಾವಣೆ! ಹೇಗಿರಲಿದೆ ಗೊತ್ತಾ ಹೊಸ ರೂಲ್ಸ್?

Cricket-Free Hit Rules: ಈಗ ಬಾಲ್ ಫ್ರೀ ಹಿಟ್‌ ನಲ್ಲಿ ಸ್ಟಂಪ್‌ ಗೆ ಬಡಿದರೆ ಮತ್ತು ಬ್ಯಾಟ್ಸ್‌ಮನ್ ಅದರ ಮೇಲೆ ರನ್ ಗಳಿಸಿದರೆ, ಅದನ್ನು ಸ್ಕೋರ್‌ ಗೆ ಸೇರಿಸಲಾಗುತ್ತದೆ. ಇದರರ್ಥ ಬ್ಯಾಟ್ಸ್‌ಮನ್ ಫ್ರೀ ಹಿಟ್‌ ನಲ್ಲಿ ಬೌಲ್ಡ್ ಮಾಡಿದರೂ ರನ್ ಗಳಿಸಬಹುದು. ಈಗ ಎಲ್ಲಾ ರನ್‌ಗಳು ಬ್ಯಾಟ್ಸ್‌ಮನ್‌ ಗಳ ಖಾತೆಗೆ ಸೇರುತ್ತವೆ.

Written by - Bhavishya Shetty | Last Updated : May 16, 2023, 08:31 AM IST
    • ಫ್ರೀ ಹಿಟ್ ನಿಯಮಗಳಲ್ಲಿ ಐತಿಹಾಸಿಕ ಬದಲಾವಣೆಯಾಗಿದೆ
    • ಅಪಾಯಕಾರಿ ಸಂದರ್ಭಗಳಲ್ಲಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಎರಡನೇ ದೊಡ್ಡ ಘೋಷಣೆ
    • ವಿವಾದಾತ್ಮಕ 'ಸಾಫ್ಟ್ ಸಿಗ್ನಲ್' ನಿಯಮವನ್ನು ತೆಗೆದುಹಾಕಲು ಐಸಿಸಿ ನಿರ್ಧರಿಸಿದೆ
Free Hit Rules: ಫ್ರೀ ಹಿಟ್ ನಿಯಮದಲ್ಲಿ ಐತಿಹಾಸಿಕ ಬದಲಾವಣೆ! ಹೇಗಿರಲಿದೆ ಗೊತ್ತಾ ಹೊಸ ರೂಲ್ಸ್? title=
Free Hit Rules

Cricket-Free Hit Rules: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಿಕೆಟ್ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದೆ. ವಿಶೇಷವಾಗಿ ಫ್ರೀ ಹಿಟ್ ನಿಯಮಗಳಲ್ಲಿ ಐತಿಹಾಸಿಕ ಬದಲಾವಣೆಯಾಗಿದೆ. ಇದರಿಂದಾಗಿ ಬ್ಯಾಟ್ಸ್‌ಮನ್‌’ಗಳಿಗೆ ಮತ್ತಷ್ಟು ಪ್ರಯೋಜನವಾಲಿದೆ. ಫ್ರೀ ಹಿಟ್‌ನ ಹೊಸ ನಿಯಮದ ಪ್ರಕಾರ, ಚೆಂಡು ಫ್ರೀ ಹಿಟ್‌ ನಲ್ಲಿ ಸ್ಟಂಪ್‌ ಗೆ ಬಡಿದು ಬ್ಯಾಟ್ಸ್‌ಮನ್ ರನ್ ತೆಗೆದುಕೊಂಡರೆ, ಆ ರನ್‌ ಗಳನ್ನು ಬ್ಯಾಟ್ಸ್‌ಮನ್ ಖಾತೆಯಲ್ಲಿ ಸೇರಿಸಲಾಗುತ್ತದೆ. ಈಗ ಹೆಚ್ಚುವರಿ ರನ್‌ ಗಳ ಖಾತೆಗೆ ಫ್ರೀ ಹಿಟ್‌ ನ ರನ್‌ ಗಳನ್ನು ಸೇರಿಸಲಾಗುವುದಿಲ್ಲ.

ಇದನ್ನೂ ಓದಿ: ಜಡೇಜಾ ರೀತಿಯೇ Team Indiaದ ಸರ್ವಶ್ರೇಷ್ಠ ಆಟಗಾರನೀತ! ಆದ್ರೆ ವೃತ್ತಿಜೀವನ ಅಂತ್ಯಗೊಳಿಸಿದ್ದು ಅಕ್ಷರ್ ಪಟೇಲ್!

ಈಗ ಬಾಲ್ ಫ್ರೀ ಹಿಟ್‌ ನಲ್ಲಿ ಸ್ಟಂಪ್‌ ಗೆ ಬಡಿದರೆ ಮತ್ತು ಬ್ಯಾಟ್ಸ್‌ಮನ್ ಅದರ ಮೇಲೆ ರನ್ ಗಳಿಸಿದರೆ, ಅದನ್ನು ಸ್ಕೋರ್‌ ಗೆ ಸೇರಿಸಲಾಗುತ್ತದೆ. ಇದರರ್ಥ ಬ್ಯಾಟ್ಸ್‌ಮನ್ ಫ್ರೀ ಹಿಟ್‌ ನಲ್ಲಿ ಬೌಲ್ಡ್ ಮಾಡಿದರೂ ರನ್ ಗಳಿಸಬಹುದು. ಈಗ ಎಲ್ಲಾ ರನ್‌ಗಳು ಬ್ಯಾಟ್ಸ್‌ಮನ್‌ ಗಳ ಖಾತೆಗೆ ಸೇರುತ್ತವೆ.

ಅಪಾಯಕಾರಿ ಸಂದರ್ಭಗಳಲ್ಲಿ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದು ಎರಡನೇ ದೊಡ್ಡ ಘೋಷಣೆಯಾಗಿದೆ. ಬ್ಯಾಟ್ಸ್‌ಮನ್ ವೇಗದ ಬೌಲರ್‌ ಗಳನ್ನು ಎದುರಿಸುತ್ತಿರುವಾಗ, ವಿಕೆಟ್ ಕೀಪರ್ ಸ್ಟಂಪ್ ಬಳಿ ನಿಂತಾಗ ಮತ್ತು ಫೀಲ್ಡರ್ ಬ್ಯಾಟ್ಸ್‌ಮನ್‌ನ ಹತ್ತಿರ ನಿಂತಾಗ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಈ ಎಲ್ಲಾ ನಿಯಮಗಳು ಜೂನ್ 1, 2023 ರಿಂದ ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವೆ ಲಾರ್ಡ್ಸ್‌ ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಿಂದ ಅನ್ವಯವಾಗುತ್ತವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜೂನ್ 7 ರಂದು ಪ್ರಾರಂಭವಾಗುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಅಂತಿಮ ಪಂದ್ಯವು ಹೊಸ ನಿಯಮಗಳ ಅಡಿಯಲ್ಲಿ ನಡೆಯಲಿದೆ.

ಇದರ ಜೊತೆಗೆ, ಆನ್-ಫೀಲ್ಡ್ ಅಂಪೈರ್‌ ಗಳು ನೀಡಿದ ವಿವಾದಾತ್ಮಕ 'ಸಾಫ್ಟ್ ಸಿಗ್ನಲ್' ನಿಯಮವನ್ನು ತೆಗೆದುಹಾಕಲು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿರ್ಧರಿಸಿದೆ.

ಇದನ್ನೂ ಓದಿ: Asia Cup 2023: ಏಷ್ಯಾಕಪ್’ಗೂ ಮುನ್ನ ಮಹತ್ವದ ಘೋಷಣೆ: ಮುಖ್ಯ ಕೋಚ್ ಆಗಿ ಈ ಅನುಭವಿ ನೇಮಕ!

ನೆಲದಿಂದ ಕೆಲವು ಇಂಚುಗಳಷ್ಟು ಎತ್ತರದಲ್ಲಿ ಪಡೆದ ಕ್ಯಾಚ್‌ ನ ಐಡೆಂಟಿಯನ್ನು ನಿರ್ಧರಿಸಲು 'ಸಾಫ್ಟ್ ಸಿಗ್ನಲ್' ಅನ್ನು ಬಳಸಲಾಗುತ್ತದೆ. ಅಂತಹ ಕ್ಯಾಚ್ ಅನ್ನು ಬರಿಗಣ್ಣಿನಿಂದ ನಿಖರವಾಗಿ ನಿರ್ಣಯಿಸಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಆನ್-ಫೀಲ್ಡ್ ಅಂಪೈರ್‌ ಗಳು ತಮ್ಮ ಅಂದಾಜಿನ ಆಧಾರದ ಮೇಲೆ 'ಔಟ್' ಅಥವಾ 'ನಾಟ್ ಔಟ್' ಎಂದು ಸೂಚಿಸುತ್ತಿದ್ದರು, ಇದನ್ನು 'ಸಾಫ್ಟ್ ಸಿಗ್ನಲ್' ಎಂದು ಕರೆಯಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಟಿವಿ ಫೂಟೇಜ್‌ ನಿಂದ ಕ್ಯಾಚ್ ಅನ್ನು ಸರಿಯಾಗಿ ಅಂದಾಜು ಮಾಡುವುದು ಕಷ್ಟಕರವಾಗಿತ್ತು. ಹೀಗಾಗಿ ಮೂರನೇ ಅಂಪೈರ್ 'ಸಾಫ್ಟ್ ಸಿಗ್ನಲ್' ಆಧಾರದ ಮೇಲೆ ತನ್ನ ನಿರ್ಧಾರವನ್ನು ನೀಡುತ್ತಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News