ನವದೆಹಲಿ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಸನತ್ ಜಯಸೂರ್ಯ ಅವರನ್ನು ಕ್ರಿಕೆಟ್ನ ಎಲ್ಲ ಪ್ರಕಾರಗಳಿಂದಲೂ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಎರಡು ವರ್ಷಗಳ ಕಾಲ ನಿಷೇಧಿಸಿದೆ.
ಈ ಬಗ್ಗೆ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ಸನತ್ ಜಯಸೂರ್ಯ ಅವರು ಎರಡು ವಿಭಾಗಗಳಲ್ಲಿ ಭ್ರಷ್ಟಾಚಾರ ವಿರೋಧಿ ಕಾನೂನು(ACU)ಗಳನ್ನು ಉಲ್ಲಂಘಿಸಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಎಲ್ಲಾ ಪ್ರಕಾರದ ಕ್ರಿಕೆಟ್ ನಿಂದ ಎರಡು ವರ್ಷಗಳ ಕಾಲ ನಿಷೇಧಿಸಲಾಗಿದೆ" ಎಂದು ತಿಳಿಸಿದೆ.
BREAKING: Sanath Jayasuriya has been banned from all cricket for two years after admitting breaching two counts of the ICC Anti-Corruption Code.https://t.co/6VdTP6I2jL
— ICC (@ICC) February 26, 2019
ಜಯಸೂರ್ಯ ಭ್ರಷ್ಟಾಚಾರ ವಿರೋಧಿ ಕಾಯ್ದೆಯ ಆರ್ಟಿಕಲ್ 2.4.6 ಹಾಗೂ 2.4.7 ಉಲ್ಲಂಘಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಹಾಗೂ ಜಯಸೂರ್ಯ ದಾಖಲೆಗಳನ್ನು ನಾಶಪಡಿಸುವ ಮೂಲಕ ತನಿಖೆಗೆ ಅಡೆತಡೆ ಉಂಟು ಮಾಡಿದ ಕಾರಣ ಐಸಿಸಿ ಈ ಶಿಕ್ಷೆ ವಿಧಿಸಿದೆ.
ಸಾಮಾನ್ಯವಾಗಿ ಆರ್ಟಿಕಲ್ 2.4.6 ನಿಯಮ ಉಲ್ಲಂಘನೆಗೆ ಕನಿಷ್ಠ 6 ತಿಂಗಳ ಹಾಗೂ ಗರಿಷ್ಠ 5 ವರ್ಷದ ನಿಷೇಧದ ಶಿಕ್ಷೆ ವಿಧಿಸಲಾಗುತ್ತದೆ.