'ಭಾರತೀಯ ಕ್ರಿಕೆಟ್ ನ ಇತಿಹಾಸದಲ್ಲಿ ರಹಾನೆ ಶತಕ ಮಹತ್ವದ್ದಾಗಿದೆ'

ಸದ್ಯ ಬಾಕ್ಸಿಂಗ್ ದಿನದ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಅವರ ಶತಕ ಗಳಿಸಿದ ಮೊತ್ತವು ಭಾರತೀಯ ಕ್ರಿಕೆಟ್ ಇತಿಹಾಸದ ಪ್ರಮುಖ ಶತಕಗಳಲ್ಲಿ ಒಂದಾಗಿದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Last Updated : Dec 28, 2020, 04:42 PM IST
'ಭಾರತೀಯ ಕ್ರಿಕೆಟ್ ನ ಇತಿಹಾಸದಲ್ಲಿ ರಹಾನೆ ಶತಕ ಮಹತ್ವದ್ದಾಗಿದೆ' title=
Photo Courtesy: Twitter

ನವದೆಹಲಿ: ಸದ್ಯ ಬಾಕ್ಸಿಂಗ್ ದಿನದ ಟೆಸ್ಟ್‌ನಲ್ಲಿ ಅಜಿಂಕ್ಯ ರಹಾನೆ ಅವರ ಶತಕ ಗಳಿಸಿದ ಮೊತ್ತವು ಭಾರತೀಯ ಕ್ರಿಕೆಟ್ ಇತಿಹಾಸದ ಪ್ರಮುಖ ಶತಕಗಳಲ್ಲಿ ಒಂದಾಗಿದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

'ಆಸಿಸ್ ಮೈಂಡ್ ಗೇಮ್ ಆಡುತ್ತಿರಲಿ, ನಾವು ನಮ್ಮ ಆಟದತ್ತ ಗಮನ ಹರಿಸುತ್ತೇವೆ'

ರಹಾನೆ ಅವರ 12ನೇ ಟೆಸ್ಟ್ ಶತಕ ಮತ್ತು ರವೀಂದ್ರ ಜಡೇಜಾ ಅವರ ಅರ್ಧಶತಕ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸುವಂತೆ ಮಾಡಿತು.ಮೊದಲ ಟೆಸ್ಟ್ ನಲ್ಲಿ ಹೀನಾಯ ಸೋಲಿನ ನಂತರ ನಡೆಯುತ್ತಿರುವ ನಂತರ ಈ ಪಂದ್ಯ ಬಂದಿದೆ.

ಅಡಿಲೇಡ್ ಓವಲ್‌ನಲ್ಲಿ ನಡೆದ ಗುಲಾಬಿ-ಚೆಂಡು ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಕೇವಲ 36/9 ಪತನ ಗೊಂಡಿತ್ತು, ಇದಕ್ಕೂ ಮುನ್ನ 1974 ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು ಅತಿ ಕನಿಷ್ಠ ಟೆಸ್ಟ್ ಸ್ಕೋರ್ 42 ಆಗಿತ್ತು.ಈಗ ರಹಾನೆ ಅವರ ಶತಕವು ಹೀನಾಯ ಸೋಲಿನ ನಂತರ ಭಾರತ ತಂಡದ ಮತ್ತೆ ಎಂದಿನ ಫಾರ್ಮ್ ಗೆ ಮರಳುವಂತೆ ಮಾಡಿದೆ.

ಏಕದಿನ ಕ್ರಿಕೆಟ್ ನಲ್ಲಿ ಅವಕಾಶ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲ, ಆದರೆ ನಾನು ಸಿದ್ಧ-: ಅಜಿಂಕ್ಯ ರಹಾನೆ

ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುನಿಲ್ ಗವಾಸ್ಕರ್ 'ಈ ಶತಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಪ್ರಮುಖ ಶತಕಗಳಲ್ಲಿ ಒಂದಾಗಿದೆ ಎಂದು ನಾನು ನಂಬುತ್ತೇನೆ.ಈ ರೀತಿ ಪ್ರದರ್ಶನ ನೀಡಿರುವುದು ವಿರೋಧಿ ತಂಡಕ್ಕೆ ಭಾರತ ತಂಡವು ಹಾಗೆ ಹೋಗುವುದಿಲ್ಲ, ಅದು ತನ್ನ ಛಾಪನ್ನು ಮೂಡಿಸಲಿದೆ ಎಂದು ಅವರು ಹೇಳಿದರು.
 

Trending News