ಅಸ್ಸಾಂ: ಫಿನ್'ಲ್ಯಾಂಡ್ ನಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಶಿಪ್'ನಲ್ಲಿ ಚಿನ್ನದ ಪದಕ ಗಳಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ಹಿಮಾ ದಾಸ್ ಅವರನ್ನು ಅಸ್ಸಾಂ ರಾಜ್ಯ ಕ್ರೀಡಾ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.
ಭಾರತದ ಪರ ಮೊದಲ ಚಿನ್ನದ ಪದಕ ಗೆದ್ದು ಜಗತ್ತಿನಾದ್ಯಂತ ದೇಶದ ಕೀರ್ತಿ ಪತಾಕೆ ಹಾರಿಸಿದ ಹಿಮಾದಾಸ್'ಗೆ ಅಭಿನಂದಿಸಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಆಕೆಯನ್ನು ರಾಜ್ಯದ ಕ್ರೀಡಾ ರಾಯಭಾರಿಯಾಗಿ ಆಯ್ಕೆ ಮಾಡಿರುವುದಾಗಿ ಹೇಳಿದ್ದಾರೆ.
ಫಿನ್ಲೆಂಡ್ ಫಿನ್ಲೆಂಡ್ನಲ್ಲಿ ಇತ್ತೀಚಿಗೆ ನಡೆದ IAAF ವಿಶ್ವ ಅಂಡರ್ -20 ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ 400 ಮೀಟರ್ ಫೈನಲ್ ನಲ್ಲಿ ಚಿನ್ನದ ಪದಕವನ್ನು ಹಿಮಾದಾಸ್ ಗಳಿಸಿದ್ದರು.