Mohammed Shami: ಕ್ರಿಕೆಟಿಗ 'ಶಮಿ ಮರ್ಡರ್ ಪ್ಲಾನ್..'! ಬಿಜೆಪಿ ಸರ್ಕಾರ ಮತ್ತು ಯುಪಿ ಪೊಲೀಸರ ಸಹಾಯ

Mohammed Shami murder plan : ಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರನ್ನು ಮಾಡಿದರೂ ಸಹ, ತಮ್ಮ ವೈಯಕ್ತಿಕ ಜೀವನದಲ್ಲಿ ಏಳುಬೀಳುಗಳಿಂದ ಯಾವಾಗಲೂ ಸುದ್ದಿಯಲ್ಲಿದ್ದಾರೆ. ಶಮಿ 2018 ರಲ್ಲಿ ಪತ್ನಿ ಹಸಿನ್ ಜಹಾನ್‌ನಿಂದ ಬೇರ್ಪಟ್ಟಿದ್ದರೂ ಸಹ ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಲೇ ಇವೆ. ಇದೀಗ 6 ವರ್ಷಗಳ ನಂತರ ಹಸಿನ್‌ ನೀಡಿರುವ ಸ್ಪೋಟಕ ಹೇಳಿಕೆ ಮತ್ತೇ ಚರ್ಚೆಗೆ ಗ್ರಾಸವಾಗಿದೆ.

Written by - Krishna N K | Last Updated : Mar 22, 2024, 04:18 PM IST
    • ಮೊಹಮ್ಮದ್ ಶಮಿ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರು
    • ಶಮಿ ವೈಯಕ್ತಿಕ ಜೀವನದ ಏಳುಬೀಳುಗಳಿಂದ ಯಾವಾಗಲೂ ಸುದ್ದಿಯಲ್ಲಿದ್ದಾರೆ.
    • ಶಮಿ ಪತ್ನಿ ಹಸಿನ್‌ ನೀಡಿರುವ ಸ್ಪೋಟಕ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
Mohammed Shami: ಕ್ರಿಕೆಟಿಗ 'ಶಮಿ ಮರ್ಡರ್ ಪ್ಲಾನ್..'! ಬಿಜೆಪಿ ಸರ್ಕಾರ ಮತ್ತು ಯುಪಿ ಪೊಲೀಸರ ಸಹಾಯ title=
Mohammed Shami

Mohammed Shami wife post : ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ. ಆದರೆ ವೈಯಕ್ತಿಕ ಜೀವನದಲ್ಲಿ ತುಂಬಾ ನೋವು ಅನುಭವಿಸಿದ್ದಾರೆ. 2018 ರಲ್ಲಿ ಶಮಿ ತಮ್ಮ ಪತ್ನಿ ಹಸಿ ಜಹಾನ್‌ನಿಂದ ವಿಚ್ಛೇದನ ಪಡೆದರೂ ಸಹ ಆಗಾಗ ಇಬ್ಬರ ವಿಚಾರ ಚರ್ಚೆಯಲ್ಲಿರುತ್ತದೆ. ಇದೀಗ ಹಸಿನ್‌ ನೀಡಿರುವ ಹೇಳಿಕೆ ಬಿಜೆಪಿ ಸರ್ಕಾರ ಮತ್ತು ಯುಪಿ ಪೊಲೀಸ್‌ ಪಡೆಯನ್ನು ಕಳಂಕ ತರುವಂತಿದೆ..

ಹೌದು.. ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಸಿನ್ ಜಹಾನ್, 'ನನ್ನ ಸ್ಟಾರ್ ಪತಿ ಮತ್ತು ಅವರ ಕುಟುಂಬದಿಂದ ನನಗೆ ಸಾಕಷ್ಟು ಅನ್ಯಾಯವಾಗಿದೆ. ನಾನು ಅಸಹಾಯಕಳಾಗಿದ್ದೆ, ನ್ಯಾಯಾಲಯದ ಸಹಾಯವನ್ನು ಪಡೆಯಬೇಕಾಯಿತು. ಆದರೆ ನನಗೆ ಸಿಗಬೇಕಾದ ಸಹಾಯ ಸಿಗಲಿಲ್ಲ. ಅಮರೋಹ ಪೊಲೀಸರು ನನ್ನ ಮತ್ತು ನನ್ನ 3 ವರ್ಷದ ಮಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 

ಇದನ್ನೂ ಓದಿ:CSK IPL ಇತಿಹಾಸ..! ಇದುವೆರೆಗೆ ಧೋನಿ ಪಡೆ ಗೆದ್ದ ಕಪ್‌ ಎಷ್ಟು ಗೊತ್ತೆ..? 

ಅಲ್ಲದೆ, ಸರ್ಕಾರ ನನಗೆ ಆಗುತ್ತಿರುವ ಅವಮಾನ ಮತ್ತು ಅನ್ಯಾಯವನ್ನು ನೋಡುತ್ತಲೇ ಇದೆ. ಜನರಿಗೆ ಸತ್ಯ ಗೊತ್ತಿದ್ದರೂ... ಕೋಲ್ಕತ್ತಾದ ಕೆಳ ನ್ಯಾಯಾಲಯ ನನಗೆ ಅನ್ಯಾಯ ಮಾಡುತ್ತಿದೆ. 06.03.24 ರಂದು ನಾನು ಎಸ್ಪಿ ಅಮ್ರೋಹಾ ಅವರನ್ನು ಭೇಟಿ ಮಾಡಿದ್ದೆ. ಶುಧೀರ್ ಕುಮಾರ್ ಜಿ ದೂರು ನೀಡಿ ಸಾರ್ವಜನಿಕರ ಸಹಕಾರದಿಂದ ನಿಮ್ಮ ತನಿಖೆ ನಡೆಯುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದೆ, ಚಿಂತಿಸಬೇಡಿ, ಯಾರೂ ನಿಮ್ಮನ್ನು ಒತ್ತಾಯಿಸುವುದಿಲ್ಲ ಎಂದು ಭರವಸೆ ನೀಡಿದರು. ಕೆಲ ದಿನಗಳ ನಂತರ ಎಫ್‌ಐಆರ್‌ ದಾಖಲಿಸಲಾಗಿತ್ತು. ನಕಲು ಪ್ರತಿ ಸಿಗದ ಕಾರಣ ಮತ್ತೆ ಎಸ್ಪಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ, ಅದರೆ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ನಾನು ಮತ್ತೆ 18.03.24 ರಂದು ಎಸ್‌ಪಿ ಅಮ್ರೋಹಾ ಅವರನ್ನು ಭೇಟಿ ಮಾಡಲು ಅಪಾಯಿಂಟ್‌ಮೆಂಟ್ ತೆಗೆದುಕೊಂಡೆ. ನನಗೆ ಬೆಳಿಗ್ಗೆ 11 ಗಂಟೆಗೆ ಸಮಯ ನೀಡಲಾಯಿತು. ಅದೇ ಸಮಯಕ್ಕೆ ನಾನು ಎಸ್‌ಪಿ ಕಚೇರಿ ತಲುಪಿದೆ. ಆದರೆ ಎಸ್‌ಪಿಜಿ ಪಿಆರ್‌ಒ ಸುನೀಲ್ ಕುಮಾರ್ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ಭೇಟಿ ಮಾಡಲು ನನಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು ಎಂದು ಹಸೀನ್‌ ದೂರಿದ್ದಾರೆ.

ಇದನ್ನೂ ಓದಿ:RCB vs CSK: ಆರ್‌ಸಿಬಿಯಲ್ಲಿರುವ ಧೋನಿ ಸ್ನೇಹಿತನಿಂದಲೇ CSKಕೆಗೆ ಸೋಲು ಪಕ್ಕಾ! 

ಆಗ ನಾನು ತುಂಬಾ ಅಳುತ್ತಿದ್ದೆ. ದೇವರ ಮುಂದೆ ಕಣ್ಣೀರಿಟ್ಟು, ಧೈರ್ಯವಾಗಿ ಹಿಂತಿರುಗಿದೆ. ಆ ನಂತರ ನಿಮ್ಮ ಪಿಆರ್‌ಒ ನನ್ನೊಂದಿಗೆ ಜಗಳವಾಡಿ, ನಿಮ್ಮನ್ನು ಭೇಟಿಯಾಗಲು ಬಿಡಲಿಲ್ಲ ಎಂದು ಎಸ್‌ಪಿ ಅಮ್ರೋಹಾ ಅವರಿಗೆ ಸಂದೇಶ ಕಳುಹಿಸಿದ್ದೆ. ಅದಕ್ಕೆ ಅವರು ನನಗೆ ಇನ್ನೂ ಉತ್ತರ ನೀಡಿಲ್ಲ. ಇದೆಲ್ಲವನ್ನೂ ನಾನು ಮುಸ್ಲಿಂ ಮಹಿಳೆಯಾಗಿ ಮಾತ್ರ ಅನುಭವಿಸಬೇಕಾಗಿದೆ. ನಾನು ಹಿಂದೂ ಆಗಿದ್ದರೆ ಇಷ್ಟೊತ್ತಿಗಾಗಲೇ ನ್ಯಾಯ ದೊರಕಿರಬಹುದಿತ್ತು ಎಂದು ಹೇಳಿದ್ದಾರೆ.

ಮಾತನ್ನು ಮುಂದುವರೆಸಿದರುವ ಹಸೀನ್‌, ಸುಪ್ರೀಂ ಕೋರ್ಟ್‌ನಿಂದ ಮಾತ್ರ ನನಗೆ ಸರಿಯಾದ ನ್ಯಾಯ ಸಿಗುತ್ತದೆ ಎಂದು ನನಗೆ ತಿಳಿದಿದೆ. ಆದರೆ ನನಗೆ ನ್ಯಾಯ ಸಿಗದಂತೆ ನ್ಯಾಯಾಲಯ ದಿನಾಂಕಗಳ ನಂತರ ದಿನಾಂಕಗಳನ್ನು ನೀಡುತ್ತಿದೆ. ಹೈಕೋರ್ಟ್ ನನ್ನ ಮಾತು ಕೇಳಲು ಬಯಸುತ್ತಿಲ್ಲ. ಭಾರತೀಯ ಮಾಧ್ಯಮಗಳು ಮಾರಾಟವಾಗದಿದ್ದರೆ ದೇಶದ ಜನತೆಗೆ ಸತ್ಯ ಗೊತ್ತಾಗುತ್ತಿತ್ತು. ನೀವು ಈಗ ಶಮಿ ಅಹ್ಮದ್ ಅನ್ನು ನೋಡುತ್ತೀರಿ... ಬಿಜೆಪಿ ಸರ್ಕಾರ ಮತ್ತು ಯು.ಪಿ. ಪೊಲೀಸರ ಸಹಾಯದಿಂದ ನನ್ನನ್ನು ಕೊಲ್ಲಲು ಯೋಜನೆ ರೂಪಿಸುತ್ತಾನೆ ಅಂತ ಗಂಭೀರ ಆರೋಪ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News