ಪಾಕ್ ವಿರುದ್ಧ ಇತಿಹಾಸ ಸೃಷ್ಟಿಸುವ ತವಕ.. ಕ್ಯಾಪ್ಟನ್ ರೋಹಿತ್ ಶರ್ಮಾ ಅಬ್ಬರಿಸಿದ್ರೆ ಈ ದಾಖಲೆ ನಿರ್ಮಾಣ ಖಚಿತ

Rohit Sharma Runs vs Pakistan in T20I: ರೋಹಿತ್ ಶರ್ಮಾ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ವಿಷಯದಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.

Written by - Bhavishya Shetty | Last Updated : Jun 9, 2024, 06:33 PM IST
    • ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯ
    • ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಗಳಿಸಿದವರ ವಿಷಯದಲ್ಲಿ ಏಳನೇ ಸ್ಥಾನದಲ್ಲಿದ್ದಾರೆ
    • ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಕೊಹ್ಲಿ
ಪಾಕ್ ವಿರುದ್ಧ ಇತಿಹಾಸ ಸೃಷ್ಟಿಸುವ ತವಕ.. ಕ್ಯಾಪ್ಟನ್ ರೋಹಿತ್ ಶರ್ಮಾ ಅಬ್ಬರಿಸಿದ್ರೆ ಈ ದಾಖಲೆ ನಿರ್ಮಾಣ ಖಚಿತ title=
Rohit Sharma

Rohit Sharma Runs vs Pakistan in T20I: ಪಾಕಿಸ್ತಾನದ ವಿರುದ್ಧ T20 ವಿಶ್ವಕಪ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್‌’ಗೆ ಎಂಟ್ರಿ ಕೊಡುತ್ತಿಂದ್ದಂತೆ ಒಂದು ವಿಷಯದಲ್ಲಿ ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್‌’ರನ್ನು ಹಿಂದಿಕ್ಕಲಿದ್ದಾರೆ.

ನ್ಯೂಯಾರ್ಕ್’ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ಇದನ್ನೂ ಓದಿ: ವಿಚ್ಛೇದಿತೆಯನ್ನ ಪ್ರೀತಿಸಿ ಮದ್ವೆಯಾದ ಟೀಂ ಇಂಡಿಯಾದ ಈ ಸ್ಪಿನ್ ಮಾಂತ್ರಿಕ ಓದಿದ್ದು ಇಂಜಿನಿಯರಿಂಗ್, ಆಗಿದ್ದು ಕ್ರಿಕೆಟರ್! ಯಾರೆಂದು ತಿಳಿಯಿತೇ?

ರೋಹಿತ್ ಶರ್ಮಾ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ವಿಷಯದಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. 114 ರನ್ ಗಳಿಸಿರುವ ರೋಹಿತ್, 42 ರನ್ ಗಳಿಸಿದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಯುವರಾಜ್ ಸಿಂಗ್ (155 ರನ್) ಮತ್ತು ಗೌತಮ್ ಗಂಭೀರ್ (139 ರನ್) ಅವರನ್ನು ಹಿಂದಿಕ್ಕಲಿದ್ದಾರೆ. ಇಷ್ಟೇ ಅಲ್ಲ, ರೋಹಿತ್ 51 ರನ್ ಗಳಿಸಿದರೆ, ಮೊಹಮ್ಮದ್ ಹಫೀಜ್ (156 ರನ್), ಶೋಯೆಬ್ ಮಲಿಕ್ (164 ರನ್) ಅವರನ್ನು ಸಹ ಹಿಂದಿಕ್ಕಿ ಹೆಚ್ಚು ರನ್‌’ಗಳ ವಿಷಯದಲ್ಲಿ ಮೂರನೇ ಸ್ಥಾನಕ್ಕೆ ಏರಲಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಕೊಹ್ಲಿ. ಇವರ ಹೆಸರಿನಲ್ಲಿ 488 ರನ್ ದಾಖಲಾಗಿವೆ. ಈ ರನ್‌ಗಳನ್ನು 81.33 ಸರಾಸರಿಯಲ್ಲಿ ಗಳಿಸಿದ್ದು, ಇದರಲ್ಲಿ ಐದು ಅರ್ಧ ಶತಕಗಳೂ ಸೇರಿವೆ. ಅಂದಹಾಗೆ ನಾಲ್ಕು ಅರ್ಧಶತಕಗಳನ್ನು ಒಳಗೊಂಡಿರುವ ಟಿ20 ವಿಶ್ವಕಪ್‌’ನ ಐದು ಪಂದ್ಯಗಳಲ್ಲಿ 308 ರನ್‌’ಗಳು ಪೇರಿಸಿದ್ದಾರೆ. ಮುಂಬರುವ ಪಂದ್ಯದಲ್ಲಿ 12 ರನ್ ಗಳಿಸಿದರೆ ಕೊಹ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 500 ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಆಗಲಿದ್ದಾರೆ.

ಭಾರತ-ಪಾಕಿಸ್ತಾನ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್

  • ವಿರಾಟ್ ಕೊಹ್ಲಿ - 488 ರನ್
  • ಮೊಹಮ್ಮದ್ ರಿಜ್ವಾನ್ - 197 ರನ್
  • ಶೋಯೆಬ್ ಮಲಿಕ್ - 164 ರನ್
  • ಮೊಹಮ್ಮದ್ ಹಫೀಜ್ - 156 ರನ್
  • ಯುವರಾಜ್ ಸಿಂಗ್ - 155 ರನ್
  • ಗೌತಮ್ ಗಂಭೀರ್ - 139 ರನ್

 

ಭಾರತ-ಪಾಕಿಸ್ತಾನ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್‌

  • ಹಾರ್ದಿಕ್ ಪಾಂಡ್ಯ (ಭಾರತ) - 11 ವಿಕೆಟ್
  • ಭುವನೇಶ್ವರ್ ಕುಮಾರ್ (ಭಾರತ) - 11 ವಿಕೆಟ್
  • ಉಮರ್ ಗುಲ್ (ಪಾಕಿಸ್ತಾನ) - 6 ವಿಕೆಟ್
  • ಇರ್ಫಾನ್ ಪಠಾಣ್ (ಭಾರತ) - 6 ವಿಕೆಟ್
  • ಅರ್ಷದೀಪ್ ಸಿಂಗ್ (ಭಾರತ) - 6 ವಿಕೆಟ್

ಇದನ್ನೂ ಓದಿ: ಕಿಡ್ನಿಸ್ಟೋನ್’ಗೆ ಸಂಜೀವಿನಿ ಇದ್ದಂತೆ ಈ ಗಿಡದಲ್ಲಿ ಶೇಖರಣೆಯಾದ ನೀರು! ಸೇವಿಸಿದ ತಕ್ಷಣ ಕಲ್ಲು ಪುಡಿಯಾಗಿ ಮೂತ್ರಕೋಶದಿಂದ ಹೊರಬರುತ್ತೆ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News