ಹಾರ್ದಿಕ್ ಪಾಂಡ್ಯ, ಹಾರ್ಡ್ಯುಸ್ ವಿಲ್ಜೊಯೆನ್ ನಡುವೆ ದೃಷ್ಟಿಯುದ್ದ....! ವೀಡಿಯೋ ವೈರಲ್

ಮುಂಬೈ ಇಂಡಿಯನ್ಸ್ ನ ಹಾರ್ದಿಕ್ ಪಾಂಡ್ಯ ಹಾಗೂ ಕಿಂಗ್ಸ್ ಇಲೆವನ್  ಪಂಜಾಬ್ ನ ಹಾರ್ಡುಸ್ ವಿಲ್ಜೊಯೆನ್ ನಡುವೆ ದೃಷ್ಟಿಯುದ್ದ ನಡೆದಿದೆ.

Last Updated : Apr 11, 2019, 03:02 PM IST
ಹಾರ್ದಿಕ್ ಪಾಂಡ್ಯ, ಹಾರ್ಡ್ಯುಸ್ ವಿಲ್ಜೊಯೆನ್ ನಡುವೆ ದೃಷ್ಟಿಯುದ್ದ....! ವೀಡಿಯೋ ವೈರಲ್  title=
Photo courtesy: Twitter

ನವದೆಹಲಿ: ಮುಂಬೈ ಇಂಡಿಯನ್ಸ್ ನ ಹಾರ್ದಿಕ್ ಪಾಂಡ್ಯ ಹಾಗೂ ಕಿಂಗ್ಸ್ ಇಲೆವನ್  ಪಂಜಾಬ್ ನ ಹಾರ್ಡುಸ್ ವಿಲ್ಜೊಯೆನ್ ನಡುವೆ ದೃಷ್ಟಿಯುದ್ದ ನಡೆದಿದೆ.

ವಾಂಖೆಡ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನ ಇಶಾನ್ ಕಿಶನ್ ಅವರು 12 ಓವರ್ ನಲ್ಲಿ ಔಟಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. 94 ರನ್ ಗಳಿಸಿ ನಾಲ್ಕು ವಿಕೆಟ್ ಕಳೆದು ಕೊಂಡಿದ್ದ ಮುಂಬೈ ತಂಡವು ಇನ್ನು ಕೇವಲ 12 ಓವರ್ ಗಳಲ್ಲಿ ಗೆಲುವಿನ ದಡ ಸೇರಬೇಕಾಗಿತ್ತು.ಈ ಸಂದರ್ಭದಲ್ಲಿ ಹಾರ್ಡುಸ್ ವಿಲ್ಜೊಯೆನ್ ನೇರವಾಗಿ ಹಾರ್ದಿಕ್ ಪಾಂಡ್ಯ ಬಳಿ ತೆರಳಿ ಗುರಾಯಿಸಿದರು.ಇದಕ್ಕೆ ಹಾರ್ದಿಕ್ ಉತ್ತರವೂ ಕೂಡ ಅಷ್ಟೇ ತೀಕ್ಷ್ಣವಾಗಿತ್ತು.ಇದಾದ ಬಳಿಕ ನಗುತ್ತಾ ಹಾರ್ಡುಸ್ ವಾಪಾಸ್ ನಡೆದರು.

ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 19 ರನ್ ಗಳಿಸಿ ನಂತರ ಮೊಹಮ್ಮದ್ ಶಮಿ ಅವರಿಗೆ 16ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು.ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊನೆಯ ಓವರ್ ನಲ್ಲಿ ಗೆಲ್ಲಲ್ಲು 15 ರನ್ ಗಳ ಅವಶ್ಯಕತೆ ಇತ್ತು ಇದನ್ನು ತಂಡವು ಸುಲಭವಾಗಿ ಗುರಿ ತಲುಪಿತು.

Trending News