ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಲಂಡನ್ ನಲ್ಲಿ ಯಶಸ್ವಿ ಬೆನ್ನು ಶಸ್ತ್ರಚಿಕಿತ್ಸೆ

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಲಂಡನ್‌ನಲ್ಲಿ ತೀವ್ರವಾದ ಕೆಳ ಬೆನ್ನಿನ ಗಾಯದಿಂದಾಗಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಈಗ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.

Last Updated : Oct 5, 2019, 02:38 PM IST
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಲಂಡನ್ ನಲ್ಲಿ ಯಶಸ್ವಿ ಬೆನ್ನು ಶಸ್ತ್ರಚಿಕಿತ್ಸೆ  title=
Photo courtesy: Instagram

ನವದೆಹಲಿ: ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಲಂಡನ್‌ನಲ್ಲಿ ತೀವ್ರವಾದ ಕೆಳ ಬೆನ್ನಿನ ಗಾಯದಿಂದಾಗಿ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಈಗ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ.

ಶನಿವಾರದಂದು ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶಸ್ತ್ರ ಚಿಕಿತ್ಸೆಯಾದ ನಂತರ ಪೋಸ್ಟ್ ಮಾಡಿ 'ನಿಮ್ಮೆಲ್ಲರ ಶುಭಾಶಯಗಳಿಗಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನಿಶ್ಚಿತ ಸಮಯದಲ್ಲಿ ನಾನು ಸದ್ಯ ಬರುವುದಿಲ್ಲ, ಅಲ್ಲಿಯವರೆಗೆ ಮಿಸ್ ಆಗುವುದಾಗಿ ಪೋಸ್ಟ್ ಮಾಡಿದ್ದಾರೆ. ಈಗ ಹಾರ್ದಿಕ್ ಐದು ತಿಂಗಳ ಕಾಲ ಆಟದಿಂದ ಹೊರಗುಳಿಯುವ ನಿರೀಕ್ಷೆಯಿದೆ.

ಪ್ರೀಮಿಯರ್ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಅವರ ನಂತರ ಬರೋಡಾ ಆಲ್ರೌಂಡರ್ ಭಾರತದ ಎರಡನೇ ಪ್ರಮುಖ ಸದಸ್ಯರಾಗಿದ್ದಾರೆ, ದಕ್ಷಿಣ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಿಂದ ಕೆಳ ಬೆನ್ನಿನಲ್ಲಿ ಒತ್ತಡ ಮುರಿತದಿಂದಾಗಿ ಅವರು ಹೊರಗೆ ಉಳಿದಿದ್ದರು.ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಐ ಸರಣಿಯನ್ನು ಆಡಿದ್ದರು. ಈಗ ಅವರು ಬಾಂಗ್ಲಾದೇಶ ವಿರುದ್ಧದ ಟಿ 20 ಪಂದ್ಯಕ್ಕೆ ಗೈರಾಗಲಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಹಾರ್ದಿಕ್ ಮೊದಲ ಬಾರಿಗೆ ಗಾಯಗೊಂಡಿದ್ದರು. ಅದಾದ ನಂತರ ವಿಶ್ವಕಪ್ ವೇಳೆಗೆ ಅವರು ಚೇತರಿಸಿಕೊಂಡಿದ್ದರು.

Trending News