Nita Ambani fitness secret: ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಅಂದಕ್ಕೆ ಮರುಳಾಗದವರಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Nita Ambani Beauty Secret: 60 ವರ್ಷ ವಯಸ್ಸಿನಲ್ಲೂ ನೀತಾ ಅಂಬಾನಿ ಅವರ ಫಿಟ್ನೆಸ್ ಯುವಕರಿಗೆ ಮಾದರಿಯಂತಿದೆ. ನೀತಾ ಅಂಬಾನಿ ಸೌಂದರ್ಯ ಜನರ ಗಮನ ಸೆಳೆಯುತ್ತಿದೆ.
ಇಷ್ಟೊಂದು ಫಿಟ್ ಮತ್ತು ಸುಂದರವಾಗಿ ಕಾಣಲು ನೀತಾ ಅಂಬಾನಿ ಅನುಸರಿಸುವ ಫಿಟ್ನೆಸ್ ದಿನಚರಿ ಮತ್ತು ಡಯೆಟ್ ಪ್ಲ್ಯಾನ್ ಇಲ್ಲಿದೆ ನೋಡಿ...
ನೀತಾ ಅಂಬಾನಿ ಅವರನ್ನು ನೋಡಿದಾಗ 60 ವರ್ಷ ವಯಸ್ಸು ಎಂದು ಅಂದುಕೊಳ್ಳಲು ಆಗದಂಥ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಇದಕ್ಕೆ ಕಾರಣ ನೀತಾ ಫಿಟ್ನೆಸ್ ಮತ್ತು ಡಯೆಟ್ ಗೆ ಹೆಚ್ಚು ಮಹತ್ವ ನೀಡುವುದು.
ನೀತಾ ಅಂಬಾನಿ ತನ್ನನ್ನು ತಾನು ಫಿಟ್ ಆಗಿರಿಸಲು ಒಂದಷ್ಟು ದಿನಚರಿಯನ್ನು ಚಾಚು ತಪ್ಪದೇ ಪಾಲಿಸುತ್ತಾರೆ. ಬೆಳಗ್ಗೆ ಎದ್ದು ಕುಡಿಯುವ ಪಾನೀಯದಿಂದ ಮಲಗುವ ಸಮಯದ ವರೆಗೆ ಸ್ಟ್ರಿಕ್ಟ್ ದಿನಚರಿ ಅನುಸರಿಸುತ್ತಾರೆ.
ಇನ್ನೂ ನೀತಾ ಅಂಬಾನಿ ಚರ್ಮದ ಆರೈಕೆಗೆ ವಿಶೇಷ ಮಹತ್ವ ನೀಡುತ್ತಾರೆ. ವರದಿಗಳ ಪ್ರಕಾರ, ನೀತಾ ಅಂಬಾನಿ ಜಿಮ್ ವರ್ಕೌಟ್ ಜೊತೆಗೆ ಯೋಗ ಮಾಡುವುದನ್ನು ಎಂದಿಗೂ ತಪ್ಪಿಸಲ್ಲ.
ಈ ವಯಸ್ಸಿನಲ್ಲೂ ಅವರ ದೇಹ ಟೋನ್ ಮತ್ತು ಸ್ಲಿಮ್ ಆಗಿ ಕಾಣಲು ಯೋಗವೇ ಪ್ರಮುಖ ಕಾರಣ. ವಾಕ್, ಕಾರ್ಡಿಯೋ, ಸ್ಕ್ವಾಟ್ಗಳು, ಪುಲ್ಅಪ್ಗಳು, ಪುಷ್ಅಪ್ಗಳು ಸೇರಿದಂತೆ ಇಡೀ ದೇಹವನ್ನು ನೀತಾ ಅಂಬಾನಿ ಪ್ರತಿಬಿತ್ಯ ದಂಡಿಸುತ್ತಾರೆ.
ಡಯೆಟ್ ವಿಚಾರದಲ್ಲಿಯೂ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಹೊರಗಿನ ಆಹಾರವನ್ನು ತಿನ್ನುವುದಿಲ್ಲ. ಸೂಪ್, ಹಸಿರು ತರಕಾರಿ ಮತ್ತು ಗುಜರಾತಿ ಭಕ್ಷ್ಯಗಳನ್ನು ತಿನ್ನುತ್ತಾರೆ.
ನೀತಾ ಅಂಬಾನಿ ಡಯೆಟ್ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತದೆ. ಬೀಟ್ರೂಟ್, ಕಾಳುಗಳು, ಮೊಟ್ಟೆ, ಆಮ್ಲೆಟ್ ಮತ್ತು ಪೀನಟ್ ಬಟರ್ ಇತ್ಯಾದಿಗಳನ್ನು ತಿನ್ನುತ್ತಾರೆ.
ನೀತಾ ಅಂಬಾನಿ ಪ್ರತಿನಿತ್ಯ ಬೆಳಗಿನ ಉಪಹಾರದ ವೇಳೆ ಬೀಟ್ರೂಟ್ ಜ್ಯೂಸ್ ಕುಡಿಯುತ್ತಾರೆ ಎನ್ನಲಾಗಿದೆ. ಇದು ಅವರ ಚರ್ಮದ ಆರೈಕೆಗೆ ಸಹಕಾರಿಯಾಗಿದೆ. ಈ ಮೂಲಕ 60 ರ ವಯಸ್ಸಲ್ಲೂ ನೀತಾ ಅಂಬಾನಿ ಸಿಕ್ಕಾಪಟ್ಟೆ ಯಂಗ್ ಆಗಿ ಕಾಣುತ್ತಾರೆ.