Hardik Pandya: ಹಾರ್ದಿಕ್ ಪಾಂಡ್ಯ ಐಪಿಎಲ್‌ ಪಯಣ! MI ತಂಡಕ್ಕೆ ಮರಳಿದ ಕ್ರಿಕೇಟಿಗನ ಸಂಭಾವನೆ ಎಷ್ಟು ಗೊತ್ತೇ?

Hardik Pandya IPL Journey: ಭಾರತದ ಕ್ರಿಕೇಟಿಗ ಹಾರ್ದಿಕ್ ಪಾಂಡ್ಯ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಎರಡು ವರ್ಷಗಳ ಬಳಿಕ ಮುಂಬೈ ಇಂಡಿಯನ್‌ ತಂಡಕ್ಕೆ ಮರಳಿದ ಕ್ರಿಕೇಟಿಗನ ಸಂಭಾವನೆ ಎಷ್ಟು ಹೆಚ್ಚಾಗಿದೆಯೇ ತಿಳಿದಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Apr 2, 2024, 01:47 PM IST
  • ಹಾರ್ದಿಕ್ ಪಾಂಡ್ಯ ಎರಡು ವರ್ಷಗಳ ಅವಧಿಯ ನಂತರ ಗುಜರಾತ್ ಟೈಟಾನ್ಸ್ ನಾಯಕ ಮುಂಬೈ ಇಂಡಿಯನ್ಸ್‌ಗೆ ಮರಳುತ್ತಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು.
  • ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡಕ್ಕಾಗಿ ಆಡಲಿದ್ದಾರೆ ಮತ್ತು ಹೊಸ ಸೀಸನ್‌ಗಾಗಿ ದೊಡ್ಡ ಮೊತ್ತವನ್ನು ಸಂಬಳವಾಗಿ ಪಡೆದುಕೊಳ್ಳುತ್ತಿದ್ದಾರೆ.
  • ಕ್ರಿಕೇಟಿಗ ಹಾರ್ದಿಕ್ ಪಾಂಡ್ಯ ತನ್ನ ಐಪಿಎಲ್ ಪ್ರಯಾಣದ ಉದ್ದಕ್ಕೂ, ಐದು ಐಪಿಎಲ್ ಪ್ರಶಸ್ತಿಗಳಲ್ಲಿ ನಾಲ್ಕು ಬಾರಿ ಗೆದ್ದಿದ್ದಾರೆ.
Hardik Pandya: ಹಾರ್ದಿಕ್ ಪಾಂಡ್ಯ ಐಪಿಎಲ್‌ ಪಯಣ! MI ತಂಡಕ್ಕೆ ಮರಳಿದ ಕ್ರಿಕೇಟಿಗನ ಸಂಭಾವನೆ ಎಷ್ಟು ಗೊತ್ತೇ? title=

Hardik Pandya IPL Salary Journey From GT To MI: ಭಾರತದ ಕ್ರಿಕೇಟಿಗ ಹಾರ್ದಿಕ್ ಪಾಂಡ್ಯ ಕಳೆದ ವಾರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಎರಡು ವರ್ಷಗಳ ಅವಧಿಯ ನಂತರ ಗುಜರಾತ್ ಟೈಟಾನ್ಸ್ ನಾಯಕ ಮುಂಬೈ ಇಂಡಿಯನ್ಸ್‌ಗೆ ಮರಳುತ್ತಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಮಾಧ್ಯಮಗಳಲ್ಲಿ ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇಂತಹ ಸಂದರ್ಭದಲ್ಲಿ ಸ್ವತಃ ಈ ಕ್ರಿಕೆಟಿಗನೇ ಸುದ್ದಿಯನ್ನು ಖಚಿತಪಡಿಸಿದಾಗ ನಿರೀಕ್ಷೆಗೆ ಕೊನೆಗಳಿಸಲಾಯಿತು. 

ಹೌದು..  2024 ರ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ  ಮುಂಬೈ ಇಂಡಿಯನ್ಸ್‌ ತಂಡಕ್ಕಾಗಿ ಆಡಲಿದ್ದಾರೆ ಮತ್ತು ಹೊಸ ಸೀಸನ್‌ಗಾಗಿ  ದೊಡ್ಡ ಮೊತ್ತವನ್ನು ಸಂಬಳವಾಗಿ ಪಡೆದುಕೊಳ್ಳುತ್ತಿದ್ದಾರೆ.ಹಾರ್ದಿಕ್ ಪಾಂಡ್ಯ ಮೊದಲು 2015 ರಲ್ಲಿ ನೀತಾ ಅಂಬಾನಿಯವರ ಮುಂಬೈ ಇಂಡಿಯನ್ಸ್‌ನೊಂದಿಗೆ ತಮ್ಮ IPL ಪ್ರಯಾಣವನ್ನು ಪ್ರಾರಂಭಿಸಿದರು. ತದನಂತರ ಈ ತಂಡದ ಜೊತೆಗೆ 2022 ರವರೆಗೆ ಭಾಗವಾಗಿದ್ದರು. ಬಳಿಕ ಹಾರ್ದಿಕ್‌ ಪಾಂಡ್ಯ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರಿದರು ಮತ್ತು ತಂಡದ ನಾಯಕರಾಗಿ ಅತ್ಯಂತ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದರು. 

ಇದನ್ನೂ ಓದಿ: ಐ‌ಪಿ‌ಎಲ್ ಈ ಋತುವಿನಲ್ಲಿ ಎರಡನೇ ಬಾರಿಗೆ ಭದ್ರತಾ ಲೋಪ: ಮೈದಾನಕ್ಕೆ ನುಗ್ಗಿದ ರೋಹಿತ್ ಶರ್ಮಾ ಅಭಿಮಾನಿ

ಕ್ರಿಕೇಟಿಗ ಹಾರ್ದಿಕ್ ಪಾಂಡ್ಯ ತನ್ನ ಐಪಿಎಲ್ ಪ್ರಯಾಣದ ಉದ್ದಕ್ಕೂ, ಐದು ಐಪಿಎಲ್ ಪ್ರಶಸ್ತಿಗಳಲ್ಲಿ ನಾಲ್ಕು ಬಾರಿ ಗೆದ್ದಿದ್ದಾರೆ. ಹೀಗೆ ಈ ರೀತಿ ಗೆಲ್ಲುವುದರ ಮುಖಾಂತರ  ಹಲವು ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಇದೀಗ ಹಾರ್ದಿಕ್‌ ಪಾಂಡ್ಯ ಪ್ರದರ್ಶನವು ಹರಾಜು ಬೆಲೆ ಮತ್ತು ಅವರ ಐಪಿಎಲ್ ಸಂಬಳದ ಮೇಲೆ ಧನಾತ್ಮಕ ಪರಿಣಾಮ ಬೀರಿದೆ. ಸದ್ಯ ಈ ಕ್ರಿಕೆಟಿಗ ಕ್ರಮೇಣ ತನ್ನ IPL ಗಳಿಕೆಯಲ್ಲಿ ಲಾಭವನ್ನು ಕಂಡಿದ್ದಾರೆ ಮತ್ತು ಪ್ರಸ್ತುತ ಪಟ್ಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾನೆ. 

ಹಾರ್ದಿಕ್ ಪಾಂಡ್ಯ ಅವರ ಬ್ರ್ಯಾಂಡ್ ಮೌಲ್ಯವು ತುಂಬಾ ಹೆಚ್ಚಾಗಿದೆ ಮತ್ತು ಜಗತ್ತಿನಾದ್ಯಂತ ಅತ್ಯಂತ ಗೌರವಾನ್ವಿತ ಆಟಗಾರರಾಗಿದ್ದಾರೆ. ಡಿಎನ್‌ಎ ವರದಿಯ ಪ್ರಕಾರ , ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್ ಪಾಂಡ್ಯಗೆ ಅವರ ಸೇವೆಗಳಿಗಾಗಿ ವಾರ್ಷಿಕ ಐಪಿಎಲ್ ಶುಲ್ಕವಾಗಿ 15 ಕೋಟಿ ರೂಪಾಯಿಗಳನ್ನು ಪಾವತಿಸಲಿದೆ. ಇದಲ್ಲದೆ, ಭಾರತೀಯ ಕ್ರಿಕೆಟಿಗರು ಬಹಿರಂಗಪಡಿಸದ ವರ್ಗಾವಣೆ ಶುಲ್ಕದ ಶೇಕಡಾವಾರು ಮೊತ್ತವನ್ನು ಸಹ ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News