Hanuma Vihari: ಬ್ಯಾಟಿಂಗ್ ವೇಳೆ ಎಡಗೈ ಮುರಿದರೂ ಒಂದೇ ಕೈಯಲ್ಲಿ 2 ಬೌಂಡರಿ ಸಿಡಿಸಿದ ಸ್ಟಾರ್ ಕ್ರಿಕೆಟಿಗ: ವಿಡಿಯೋ ನೋಡಿ

Hanuma Vihari: ರಣಜಿ ಟ್ರೋಫಿ ಎಲೈಟ್ ಕ್ವಾರ್ಟರ್‌ಫೈನಲ್‌ನ ಆರಂಭಿಕ ದಿನದಂದು ವಿಹಾರಿಗೆ ಗಾಯವಾಗಿದೆ. ಮಧ್ಯ ಪ್ರದೇಶ ನಡುವೆ ನಡೆಯುತ್ತಿದ್ದ ರಣಜಿ ಪಂದ್ಯದಲ್ಲಿ ಈ ಗಾಯವಾಗಿದೆ. ಬಳಿಕ 37 ಎಸೆತದಲ್ಲಿ 16 ರನ್ ಗಳಿಸಿ ಅವರು ಔಟ್ ಆಗಿದ್ದಾರೆ. ನಂತರ ನಡೆಸಿದ ಸ್ಕ್ಯಾನಿಂಗ್ ನಲ್ಲಿ ಅವರ ಕೈ ಮೂಳೆ ಮುರಿತಗೊಂಡಿದೆ ಎಂದು ತಿಳಿದುಬಂದಿದೆ.

Written by - Bhavishya Shetty | Last Updated : Feb 2, 2023, 12:55 AM IST
    • ರಣಜಿ ಟ್ರೋಫಿ ಪಂದ್ಯದ ವೇಳೆ ಆಂಧ್ರ ಪ್ರದೇಶ ತಂಡದ ನಾಯಕ ಹನುಮ ವಿಹಾರಿಗೆ ಗಾಯ
    • ಬಲಗೈ ಮೂಲಕ ಬ್ಯಾಟಿಂಗ್ ನಡೆಸಿದ ವಿಹಾರಿ ಎರಡು ಬೌಂಡರಿ ಸಿಡಿಸಿ ಪರಾಕ್ರಮ ಮೆರೆದಿದ್ದಾರೆ
    • ರಣಜಿ ಟ್ರೋಫಿ ಎಲೈಟ್ ಕ್ವಾರ್ಟರ್‌ಫೈನಲ್‌ನ ಆರಂಭಿಕ ದಿನದಂದು ವಿಹಾರಿಗೆ ಗಾಯವಾಗಿದೆ
Hanuma Vihari: ಬ್ಯಾಟಿಂಗ್ ವೇಳೆ ಎಡಗೈ ಮುರಿದರೂ ಒಂದೇ ಕೈಯಲ್ಲಿ 2 ಬೌಂಡರಿ ಸಿಡಿಸಿದ ಸ್ಟಾರ್ ಕ್ರಿಕೆಟಿಗ: ವಿಡಿಯೋ ನೋಡಿ title=
Hanuma Vihari

Hanuma Vihari: ರಣಜಿ ಟ್ರೋಫಿ ಪಂದ್ಯದ ವೇಳೆ ಆಂಧ್ರ ಪ್ರದೇಶ ತಂಡದ ನಾಯಕ ಹನುಮ ವಿಹಾರಿ ಎಡಗೈ ಮುರಿತಕ್ಕೊಳಗಾಗಿದೆ. ಸೀಮರ್ ಅವೇಶ್ ಖಾನ್ ಬೌಲಿಂಗ್ ಎದುರಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆದರೆ ಬಲಗೈ ಮೂಲಕ ಬ್ಯಾಟಿಂಗ್ ನಡೆಸಿದ ವಿಹಾರಿ ಎರಡು ಬೌಂಡರಿ ಸಿಡಿಸಿ ಪರಾಕ್ರಮ ಮೆರೆದಿದ್ದಾರೆ.

ಇದನ್ನೂ ಓದಿ: Shubman Gill Record: ಬಿರುಸಿನ ಶತಕದ ಮೂಲಕ 13 ವರ್ಷಗಳ ಹಳೆಯ ದಾಖಲೆ ಮುರಿದ ಶುಭ್ಮನ್ ಗಿಲ್

ರಣಜಿ ಟ್ರೋಫಿ ಎಲೈಟ್ ಕ್ವಾರ್ಟರ್‌ಫೈನಲ್‌ನ ಆರಂಭಿಕ ದಿನದಂದು ವಿಹಾರಿಗೆ ಗಾಯವಾಗಿದೆ. ಮಧ್ಯ ಪ್ರದೇಶ ನಡುವೆ ನಡೆಯುತ್ತಿದ್ದ ರಣಜಿ ಪಂದ್ಯದಲ್ಲಿ ಈ ಗಾಯವಾಗಿದೆ. ಬಳಿಕ 37 ಎಸೆತದಲ್ಲಿ 16 ರನ್ ಗಳಿಸಿ ಅವರು ಔಟ್ ಆಗಿದ್ದಾರೆ. ನಂತರ ನಡೆಸಿದ ಸ್ಕ್ಯಾನಿಂಗ್ ನಲ್ಲಿ ಅವರ ಕೈ ಮೂಳೆ ಮುರಿತಗೊಂಡಿದೆ ಎಂದು ತಿಳಿದುಬಂದಿದೆ. ಜೊತೆಗೆ ನಾಲ್ಕರಿಂದ ಐದು ವಾರಗಳವರೆಗೆ ಕಾಲ ವಿಶ್ರಾಂತಿ ಪಡೆಯಬೇಕಿದೆ ಎಂದು ಹೇಳಿದ್ದಾರೆ.

 
 
 
 

 
 
 
 
 
 
 
 
 
 
 

A post shared by Hanuma vihari (@viharigh)

 

29 ವರ್ಷ ವಯಸ್ಸಿನ ಬಲಗೈ ಬ್ಯಾಟರ್ ತನ್ನ ಮುರಿದ ಮಣಿಕಟ್ಟನ್ನು ರಕ್ಷಿಸಲು ವಿಶಿಷ್ಟವಾದ ಮಾರ್ಕರ್ನೊಂದಿಗೆ ಕ್ರೀಸ್ ಗೆ ಇಳಿದಿದ್ದರು. ಇದು ಅವರ ಬದ್ಧತೆ, ಶ್ರಮವನ್ನು ಪ್ರತಿಬಿಂಬಿಸುತ್ತದೆ ಎನ್ನಬಹುದು. ಇನ್ನು ವಿಹಾರಿಯ ಇಂತಹ ನಿದರ್ಶನ ಇದೇ ಮೊದಲಲ್ಲ. ಗಾಯಗೊಂಡ ಮಂಡಿರಜ್ಜು ಜೊತೆ ಹೋರಾಡುತ್ತಾ, ಅವರು 2021 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಿದ್ದರು. ಅಷ್ಟೇ ಅಲ್ಲದೆ, ಪಂದ್ಯ ಡ್ರಾ ಆಗಲು ರವಿಚಂದ್ರನ್ ಅಶ್ವಿನ್ ಜೊತೆ ಕೈ ಜೋಡಿಸಿದ್ದರು.

ಇದನ್ನೂ ಓದಿ: IND vs NZ: 2019ರಲ್ಲಿ ಟೀಂ ಇಂಡಿಯಾ, 2023ರಲ್ಲಿ ಕೀವೀಸ್: ಅನುಭವಿಸಿದ್ದು ಒಂದೇ ನೋವು, ವರ್ಷ ಮಾತ್ರ ಬೇರೆ!

ಟಿ20 ಸರಣಿಯಲ್ಲಿ ಟೀಂ ಇಂಡಿಯಾಗೆ ಗೆಲುವು:

ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಕೊನೆಯ ಟಿ20 ಪಂದ್ಯಾಟದಲ್ಲಿ ಕೀವೀಸ್ ತಂಡಕ್ಕೆ ಸೋಲುಣಿಸಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಅಬ್ಬರಿಸಿತ್ತು. ಅಷ್ಟೇ ಅಲ್ಲದೆ, ನ್ಯೂಜಿಲೆಂಡ್ ತಂಡವನ್ನು ಸಂಪೂರ್ಣವಾಗಿ ನಲುಗಿಹೋಗುವಂತೆ ಮಾಡಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News