ಉತ್ತಮ ಪಿಚ್ ಗಳು ಟೆಸ್ಟ್ ಕ್ರಿಕೆಟ್ ನ್ನು ಪುನಶ್ಚೇತನಗೊಳಿಸುತ್ತವೆ-ಸಚಿನ್ ತೆಂಡೂಲ್ಕರ್

ಟೆಸ್ಟ್ ಕ್ರಿಕೆಟ್ ನ್ನು ಉತ್ತಮ ಪಿಚ್‌ಗಳಲ್ಲಿ ಆಡಿದರೆ ಅದು ಕಣ್ಣಿಗೆ ಆಹ್ಲಾದಕರವಾಗಿರುತ್ತದೆ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

Last Updated : Aug 25, 2019, 05:58 PM IST
ಉತ್ತಮ ಪಿಚ್ ಗಳು ಟೆಸ್ಟ್ ಕ್ರಿಕೆಟ್ ನ್ನು ಪುನಶ್ಚೇತನಗೊಳಿಸುತ್ತವೆ-ಸಚಿನ್ ತೆಂಡೂಲ್ಕರ್ title=

ನವದೆಹಲಿ: ಟೆಸ್ಟ್ ಕ್ರಿಕೆಟ್ ನ್ನು ಉತ್ತಮ ಪಿಚ್‌ಗಳಲ್ಲಿ ಆಡಿದರೆ ಅದು ಕಣ್ಣಿಗೆ ಆಹ್ಲಾದಕರವಾಗಿರುತ್ತದೆ ಎಂದು ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಐಡಿಬಿಐ ಫೆಡರಲ್ ಲೈಫ್ ಇನ್ಶುರೆನ್ಸ್ ಮುಂಬೈ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಮಾತನಾಡಿದ ಸಚಿನ್ ತೆಂಡೂಲ್ಕರ್ 'ಟೆಸ್ಟ್ ಕ್ರಿಕೆಟಿನ ಹೃದಯವು ನೀವು ಆಡುವ ಮೇಲ್ಮೈಯಾಗಿದೆ. ನೀವು ಉತ್ತಮ ಪಿಚ್‌ಗಳನ್ನು ಒದಗಿಸಿದರೆ, ಕ್ರಿಕೆಟ್ ನೀರಸವಾಗಲು ಸಾಧ್ಯವಿಲ್ಲ, ಮತ್ತು ಆ ರೋಚಕ ಕ್ಷಣಗಳು, ಅತ್ಯಾಕರ್ಷಕ ಬೌಲಿಂಗ್, ಉತ್ತಮ ಬ್ಯಾಟಿಂಗ್ ನ್ನು ಜನರು ನೋಡಲು ಬಯಸುತ್ತಾರೆ ” ಎಂದು ಸಚಿನ್ ಹೇಳಿದರು.

ಏಕದಿನ ವಿಶ್ವಕಪ್ ನಂತರ ತಂಡಗಳು ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಳತ್ತ ಗಮನ ಹರಿಸಿದ್ದು, ಆಸ್ಟ್ರೇಲಿಯಾವು ಆಶಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುವುದರೊಂದಿಗೆ ಪ್ರಾರಂಭವಾಯಿತು. 'ನಾಲ್ಕು-ಐದು ವಾರಗಳ ಹಿಂದೆ, ಇಂಗ್ಲೆಂಡ್ನಲ್ಲಿ ವಿಶ್ವಕಪ್ ಕ್ರಿಕೆಟ್ ನಡೆದಿದೆ ಎನ್ನುವುದನ್ನೇ  ಜನರು ಬಹುತೇಕ ಮರೆತಿದ್ದಾರೆ, ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲ, ಎಲ್ಲರೂ ಟೆಸ್ಟ್ ಕ್ರಿಕೆಟ್ ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ಸಚಿನ್ ಹೇಳಿದರು.

ಅಲ್ಲದೆ ಟೆಸ್ಟ್ ಕ್ರಿಕೆಟ್ ನ್ನು ಪುನರುಜ್ಜೀವನಗೊಳಿಸುವುದಕ್ಕೆ ಉತ್ತಮ ಪಿಚ್ ಗಳ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.'ನಾವು ಉತ್ತಮ ಪಿಚ್ ಗಳನ್ನು ನಿರ್ಮಿಸಿದರೆ ಟೆಸ್ಟ್ ಕ್ರಿಕೆಟ್ ನ್ನು ಪುನರುಜ್ಜೀವನಗೊಳ್ಳಲಿದೆ ಎಂದು ಭಾವಿಸುತ್ತೇನೆ, ಆದರೆ ಪಿಚ್ ಗಳು ಸಮತಟ್ಟಾಗಿದ್ದರೆ ಮತ್ತು ಅಥವಾ ಜೀವ ಸತ್ವ ಇಲ್ಲದೆ ಹೋದಲ್ಲಿ ಟೆಸ್ಟ್ ಕ್ರಿಕೆಟ್ ಸವಾಲುಗಳನ್ನು ಎದುರಿಸಲಿದೆ' ಎಂದು ಅವರು ಅಭಿಪ್ರಾಯಪಟ್ಟರು.  

"ಈ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಘೋಷಿಸಲ್ಪಟ್ಟಿದೆ ಎಂದು ನನಗೆ ತಿಳಿದಿದೆ. ಆದರೆ ಈ ವಿಶ್ವ ಚಾಂಪಿಯನ್‌ಶಿಪ್ ಹೊಂದಲು ಸಹ, ನೀವು ಕ್ರಿಕೆಟ್ ಅನ್ನು ಆಸಕ್ತಿದಾಯಕವಾಗಿಸಬೇಕಾಗಿದೆ, ಮತ್ತೊಂದು ಚಾಂಪಿಯನ್‌ಶಿಪ್ ಹೊಂದುವ ಮೂಲಕ, ಕ್ರಿಕೆಟ್ ಆಸಕ್ತಿದಾಯಕವಾಗುವುದಿಲ್ಲ" ಎಂದು ಅವರು ಹೇಳಿದರು.

Trending News