Gautam Gambhir on Suryakumar Yadav: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಸದ್ಯ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಪ್ರಸಕ್ತ ವರ್ಷದಲ್ಲಿ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದು, ಟಿ 20 ಅಂತರರಾಷ್ಟ್ರೀಯ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಹಲವು ದಿಗ್ಗಜರು ಟೆಸ್ಟ್ ಕ್ರಿಕೆಟ್ ನಲ್ಲಿ ಆಡುವಂತೆ ಸಲಹೆ ನೀಡಿದ್ದಾರೆ. ಕ್ರಿಕೆಟ್‌ನ ದೀರ್ಘ ಸ್ವರೂಪದಲ್ಲಿ ಆಡಲು ಟೀಂ ಇಂಡಿಯಾದ ಮಿಸ್ಟರ್ 360ಗೆ ಆಹ್ವಾನ ಬಂದಿದೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಟೀಂ ಇಂಡಿಯಾದ ಮಾಜಿ ಓಪನರ್ ಗೌತಮ್ ಗಂಭೀರ್ ಕೂಡ ಒಂದು ಗುಣಮಟ್ಟದ ಕಾರಣದಿಂದ ಸೂರ್ಯ ಟೆಸ್ಟ್‌ನಲ್ಲಿ ಅವಕಾಶ ಪಡೆಯಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: Ind Vs NZ 2nd ODI : ಎರಡನೇ ಏಕದಿನ ಪಂದ್ಯಕ್ಕೆ ಹೀಗಿದೆ ಟೀಂ ಇಂಡಿಯಾ ಪ್ಲೇಯಿಂಗ್ 11
ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಅವರ ಬ್ಯಾಟ್ ಕೆಲಸ ಮಾಡಲಿಲ್ಲ. ಆತಿಥೇಯದಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಸಾಧಿಸಿದೆ. ಆಕ್ಲೆಂಡ್‌ನಲ್ಲಿ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಭಾರತ 7 ವಿಕೆಟ್‌ಗೆ 306 ರನ್ ಗಳಿಸಿತು, ನಂತರ ನ್ಯೂಜಿಲೆಂಡ್ 3 ವಿಕೆಟ್ ಕಳೆದುಕೊಂಡು 47.1 ಓವರ್‌ಗಳಲ್ಲಿ ಗುರಿ ಸಾಧಿಸಿತು. ಟಾಮ್ ಲ್ಯಾಥಮ್ 104 ಎಸೆತಗಳಲ್ಲಿ ಅಜೇಯ 145 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಬ್ಯಾಟ್ ಕೆಲಸ ಮಾಡದೇ ಕೇವಲ 4 ರನ್ ಗಳಿಸಲಷ್ಟೇ ಶಕ್ತವಾಯಿತು.
'ಟೆಸ್ಟ್‌ಗೆ ಸೂರ್ಯನಂತಹ ಆಟಗಾರರ ಅಗತ್ಯವಿದೆ'
ಮಾಜಿ ಅನುಭವಿ ಆರಂಭಿಕ ಆಟಗಾರ ಗೌತಮ್ ಗಂಭೀರ್‌ಗೆ ಸೂರ್ಯ ಟೆಸ್ಟ್ ಕ್ರಿಕೆಟ್ ಆಡಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಸಂದರ್ಭದಲ್ಲಿ. "ಯಾಕೆ ಆಡಬಾರದು... ಅವರು ಟೆಸ್ಟ್‌ನಲ್ಲಿ ಏಕೆ ಆಡಬೇಕು ಎಂದು ನಾನು ಹೇಳುತ್ತೇನೆ" ಎಂದು ಹೇಳಿದರು. ಕ್ರಿಕೆಟ್‌ಗೆ ಅಸಾಂಪ್ರದಾಯಿಕ ಆಟಗಾರರು ಮೊದಲ ಆಯ್ಕೆ ಎಂದು ನಾನು ನಂಬುತ್ತೇನೆ. ಇದು ಸೂರ್ಯನ ಗುಣ. ಅದಕ್ಕಾಗಿಯೇ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಲು ಅವಕಾಶ ನೀಡಬೇಕು. ವಿಶ್ವಕಪ್ ಸಂದರ್ಭದಲ್ಲಿ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಕೂಡ ಸೂರ್ಯಕುಮಾರ್ ಅವರನ್ನು ಎಲ್ಲಾ ಮೂರು ಫಾರ್ಮ್ಯಾಟ್‌ಗಳ ಆಟಗಾರ ಎಂದು ಬಣ್ಣಿಸಿದ್ದಾರೆ.
ಇದನ್ನೂ ಓದಿ: Team India : ಟಿ20 ವಿಶ್ವಕಪ್ ಸೋಲಿನ ನಂತರ ಎಚ್ಚೆತ್ತಗೊಂಡ ಬಿಸಿಸಿಐ, ಈ ಅನುಭವಿ ಟೀಂನಿಂದ ಔಟ್!
ಮಿಸ್ಟರ್ 360ಯ ಉತ್ತಮ ದಾಖಲೆ:
32 ವರ್ಷದ ಸೂರ್ಯಕುಮಾರ್ ಯಾದವ್ ಭಾರತ ಪರ ಇದುವರೆಗೆ 14 ಏಕದಿನ ಹಾಗೂ 42 ಟಿ20 ಪಂದ್ಯಗಳನ್ನು ಆಡಿದ್ದಾರೆ. ಎರಡು ಶತಕ ಹಾಗೂ 12 ಅರ್ಧಶತಕಗಳ ನೆರವಿನಿಂದ ಟಿ20ಯಲ್ಲಿ ಒಟ್ಟು 1408 ರನ್ ಗಳಿಸಿದ್ದಾರೆ. ODI ಸ್ವರೂಪದಲ್ಲಿ, 2 ಅರ್ಧಶತಕಗಳಿಂದಾಗಿ 344 ರನ್‌ಗಳು ಕಲೆ ಹಾಕಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.