ಬೆಂಕಿ ಎಸೆತಗಳೊಂದಿಗೆ ಮತ್ತೆ ಬರಲಿದ್ದಾರೆ ಶೋಯಬ್ ಅಖ್ತರ್ !

ಪಾಕಿಸ್ತಾನದ ವೇಗದ ಬೌಲರ್ ಶೋಯಬ್ ಅಖ್ತರ್ 2011ರ ವಿಶ್ವಕಪ್ ನಂತರ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.ಈಗ ಮತ್ತೆ ಕ್ರಿಕೆಟ್ ಗೆ ಮರಳುವ ಕುರಿತಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

Last Updated : Feb 14, 2019, 02:18 PM IST
ಬೆಂಕಿ ಎಸೆತಗಳೊಂದಿಗೆ ಮತ್ತೆ ಬರಲಿದ್ದಾರೆ ಶೋಯಬ್ ಅಖ್ತರ್ ! title=

ನವದೆಹಲಿ: ಪಾಕಿಸ್ತಾನದ ವೇಗದ ಬೌಲರ್ ಶೋಯಬ್ ಅಖ್ತರ್ 2011ರ ವಿಶ್ವಕಪ್ ನಂತರ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.ಈಗ ಮತ್ತೆ ಕ್ರಿಕೆಟ್ ಗೆ ಮರಳುವ ಕುರಿತಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

 ತಮ್ಮ ಬೆಂಕಿಯುಗುಳುವ ಎಸೆತಗಳಿಗೆ ಖ್ಯಾತಿಯನ್ನು ಪಡೆದಿದ್ದ ಶೋಯಬ್ ಅಖ್ತರ್, ಈಗ ಮತ್ತೆ ಕ್ರಿಕೆಟ್ ಗೆ ವಾಪಾಸ್ಸಾಗುತ್ತಿರುವುದರಿಂದ ಅಭಿಮಾನಿಗಳಿಗೆ ನಿಜಕ್ಕೂ ಸಂತಸಕ್ಕೆ ಕಾರಣವಾಗಿದೆ.ಕಾರಣವಿಷ್ಟೇ ಅವರ ವೇಗದ ಬೌಲಿಂಗ್ ನೋಡಿ ಹಲವು ವರ್ಷಗಳೇ ಆಗಿದ್ದವು, ಈಗ ಮತ್ತೆ ಅಂತಹ ನೋಡುವ ಸೌಭಾಗ್ಯ ಕ್ರಿಕೆಟ್ ಪ್ರಿಯರಿಗೆ ಲಭಿಸಲಿದೆ.

"ಹಲೋ ಫೆ.14 ನ್ನು ನಿಮ್ಮ ಕ್ಯಾಲೆಂಡರ್ ನಲ್ಲಿ ಮಾರ್ಕ್ ಮಾಡಿ.ಇಂದಿನ ಮಕ್ಕಳು ಕ್ರಿಕೆಟ್ ಬಗ್ಗೆ ಸಾಕಷ್ಟು ತಿಳಿದಿರುತ್ತಾರೆ. ಆದ್ದರಿಂದ ನನ್ನ ವೇಗದ ಬೌಲಿಂಗ್ ಬಗ್ಗೆಯೂ ಕೂಡ ಅವರು ಸವಾಲ್ ಹಾಕಲಿ. ಆದ್ದರಿಂದ ಮಕ್ಕಳೇ ನಾನು ಮತ್ತೆ ಆಟವಾಡಲು ಬರುತ್ತಿದ್ದೇನೆ.ನಾನು ನಿಮಗೆ ವೇಗವೆಂದರೆ ಏನು ಎನ್ನುವುದನ್ನು ತಿಳಿಸುತ್ತೇನೆ. ನಾನು ಲೀಗ್ ಕ್ರಿಕೆಟ್ ನಲ್ಲಿ ಆಡುತ್ತಿದ್ದೇನೆ ಆದ್ದರಿಂದ ಗಮನವಿರಲಿ ಎಂದು ಅಖ್ತರ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಾಸಿಂ ಅಕ್ರಂ " ಶಬಿ..ಇದು ನಿಜವಾದಲೂ ನಡೆಯುತ್ತಿದೆಯೇ ? ನೀನು ನಿಜವಾಗಲೂ ವಾಪಸ್ ಬರುತ್ತಿದ್ದಿಯಾ? ಇಂದಿನ ಮಕ್ಕಳು ನಿನ್ನ ಬೌಲಿಂಗ್ ವೇಗವನ್ನು ನೋಡಲಿದ್ದಾರೆ ಎಂದು ಅಕ್ರಂ ತಿಳಿಸಿದ್ದಾರೆ.
 

Trending News