Rohit Sharma: ರೋಹಿತ್ ಶರ್ಮಾ ಈಗ ಭಾರತ ಟೆಸ್ಟ್, ಏಕದಿನ ಮತ್ತು ಟಿ20 ಎಲ್ಲಾ ಮೂರು ಮಾದರಿಗಳ ನಾಯಕರಾಗಿದ್ದಾರೆ. ರೋಹಿತ್ ಶರ್ಮಾ (Rohit Sharma) ನಾಯಕರಾದ ತಕ್ಷಣ, ಭಾರತದ 3 ಕ್ರಿಕೆಟಿಗರ ಅದೃಷ್ಟ ಇದ್ದಕ್ಕಿದ್ದಂತೆ ತೆರೆದುಕೊಂಡಿದೆ. ರೋಹಿತ್ ಶರ್ಮಾ ನಾಯಕನಾದ ನಂತರ ಟೀಂ ಇಂಡಿಯಾದಲ್ಲಿ ಈ 3 ಆಟಗಾರರ ಸ್ಥಾನ ಖಚಿತವಾಗಿದೆ. ಅಷ್ಟೇ ಅಲ್ಲ, ಈಗ ಈ 3 ಆಟಗಾರರನ್ನು ಟೀಂ ಇಂಡಿಯಾದಿಂದ ಕೈಬಿಡುವುದು ಅಸಾಧ್ಯದ ಮಾತು. ಆ 3 ಆಟಗಾರರು ಯಾರೆಂದು ತಿಳಿಯೋಣ.
1. ಸೂರ್ಯಕುಮಾರ್ ಯಾದವ್ :
ಸೂರ್ಯಕುಮಾರ್ ಯಾದವ್ 2021 ರಲ್ಲಿ ತಮ್ಮ ODI ಮತ್ತು T20 ಗೆ ಪದಾರ್ಪಣೆ ಮಾಡಿದರು, ಆದರೆ ಅವರು ಇನ್ನೂ ಟೆಸ್ಟ್ ಕ್ರಿಕೆಟ್ಗೆ (Test Cricket) ಪದಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ (Virat Kohli) ನಾಯಕತ್ವದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಕಡೆಗಣಿಸಲಾಗಿತ್ತು. ಕಳೆದ ವರ್ಷ ಇಂಗ್ಲೆಂಡ್ ಪ್ರವಾಸದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ಟೆಸ್ಟ್ ತಂಡದಲ್ಲಿ ಸೇರಿಸಿಕೊಳ್ಳಲಾಗಿತ್ತು, ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. ನವೆಂಬರ್ 2021 ರಲ್ಲಿ, ಗಾಯಗೊಂಡ ಕೆಎಲ್ ರಾಹುಲ್ ಬದಲಿಗೆ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಸೇರಿಸಲಾಯಿತು. ಆದರೆ ಆಗಲೂ ಸೂರ್ಯಕುಮಾರ್ ಯಾದವ್ಗೆ ಚೊಚ್ಚಲ ಟೆಸ್ಟ್ ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಸೂರ್ಯಕುಮಾರ್ ಯಾದವ್ (Suryakumar Yadav) ರೋಹಿತ್ ಶರ್ಮಾ (Rohit Sharma) ಅವರ ನೆಚ್ಚಿನ ಆಟಗಾರರಲ್ಲಿ ಒಬ್ಬರು. ಸೂರ್ಯಕುಮಾರ್ ಯಾದವ್ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಸೂರ್ಯಕುಮಾರ್ ಯಾದವ್ ಐಪಿಎಲ್ನಲ್ಲಿ ಹಲವು ರನ್ಗಳನ್ನು ತಮ್ಮ ಖಾತೆಯಲ್ಲಿ ಸೇರಿಸಿಕೊಂಡಿದ್ದಾರೆ.
ಇದನ್ನೂ ಓದಿ- Rohit Sharma : ಟೀಂ ಇಂಡಿಯಾದ ಹಣೆಬರಹವನ್ನೇ ಬದಲಿಸಿದ ಕ್ಯಾಪ್ಟನ್ ರೋಹಿತ್ ಶರ್ಮಾ!
2. ಇಶಾನ್ ಕಿಶನ್:
ಯಾವುದೇ ಕ್ರಮಾಂಕದಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿದ 23ರ ಹರೆಯದ ಇಶಾನ್ ಕಿಶನ್ (Ishan Kishan)ಗೆ ಇದುವರೆಗೂ ಟೆಸ್ಟ್ ಪದಾರ್ಪಣೆ ಮಾಡಲು ಸಾಧ್ಯವಾಗಿಲ್ಲ. ಇಶಾನ್ ಕಿಶನ್ ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕ್ರಿಕೆಟ್ ಪಂಡಿತರ ಪ್ರಕಾರ ಇಶಾನ್ ಕಿಶನ್ ಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಅವಕಾಶ ಸಿಕ್ಕರೆ ಬಹುದೂರ ಸಾಗಬಹುದು. ರಿಷಬ್ ಪಂತ್ ಬದಲಿಗೆ ಇಶಾನ್ ಕಿಶನ್ ಗೆ ಅವಕಾಶ ಸಿಕ್ಕಾಗಲೆಲ್ಲ ಅದರ ಸಂಪೂರ್ಣ ಲಾಭ ಪಡೆದಿದ್ದಾರೆ. ಇಶಾನ್ ಕಿಶನ್ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಖಾತೆಯಲ್ಲಿ ಹಲವು ರನ್ ದಾಖಲಿಸಿದ್ದಾರೆ. 2016ರಲ್ಲಿ ಇಶಾನ್ ಕಿಶನ್ ಅಂಡರ್-19 ತಂಡದ ನಾಯಕರಾಗಿದ್ದರೆ, ರಿಷಬ್ ಪಂತ್ ಅದೇ ತಂಡದ ಉಪನಾಯಕರಾಗಿದ್ದರು. ವಿರಾಟ್ ಪಂತ್ ಗೆ ಟೆಸ್ಟ್ ಪಂದ್ಯದಲ್ಲಿ ಆಡಲು ಸಾಕಷ್ಟು ಅವಕಾಶಗಳನ್ನು ನೀಡಿದ್ದು, ಈ ಕಾರಣದಿಂದ ಇದೀಗ ಟೀಂ ಇಂಡಿಯಾದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿದ್ದಾರೆ. ಇಶಾನ್ ಕಿಶನ್ ಅವರ ವಿಕೆಟ್ ಕೀಪಿಂಗ್ ರಿಷಬ್ ಪಂತ್ ಗಿಂತ ಕಡಿಮೆಯಿಲ್ಲ. ಈ ಆಟಗಾರನಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅವಕಾಶ ನೀಡಿದರೆ, ಅವರು ತಮ್ಮ ಸಾಮರ್ಥ್ಯದ ಆಧಾರದ ಮೇಲೆ ಭಾರತೀಯ ಟೆಸ್ಟ್ ತಂಡದಲ್ಲಿ ಅದ್ಭುತಗಳನ್ನು ಮಾಡಬಹುದು.
ಇದನ್ನೂ ಓದಿ- Ishant Sharma : ಅಂತ್ಯದಲ್ಲಿದೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರನ ವೃತ್ತಿಜೀವನ!
3. ಕುಲದೀಪ್ ಯಾದವ್:
ಕುಲದೀಪ್ ಯಾದವ್ (Kuldeep Yadav) ಭಾರತದ ಸ್ಟಾರ್ ಚೈನಾಮನ್ ಬೌಲರ್ಗಳಲ್ಲಿ ಒಬ್ಬರು. ಕುಲದೀಪ್ ಯಾದವ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಆಡಿದ ನಂತರ ಕಳೆದ ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಭಾರತದ ಮಾಜಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಕುಲದೀಪ್ ಯಾದವ್ ಅವರನ್ನು ಟೆಸ್ಟ್ ತಂಡಕ್ಕೆ ಮರಳಲು ಎಂದಿಗೂ ಅನುಮತಿಸಲಿಲ್ಲ ಮತ್ತು ನಿರಂತರವಾಗಿ ಅವರನ್ನು ನಿರ್ಲಕ್ಷಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಹಲವು ಬಾರಿ ಜಯಂತ್ ಯಾದವ್ಗೆ ಅವಕಾಶಗಳನ್ನು ನೀಡಿದ್ದರು ಮತ್ತು ಕುಲದೀಪ್ ಯಾದವ್ ಅವರನ್ನು ಕಡೆಗಣಿಸಿದ್ದಾರೆ. ಚೈನಾಮನ್ ಕುಲದೀಪ್ ಯಾದವ್ ಎಸೆತಕ್ಕೆ ಪ್ರತಿ ಬ್ಯಾಟ್ಸ್ ಮನ್ ಉತ್ತರ ನೀಡಲು ಸಾಧ್ಯವಿಲ್ಲ. ಕುಲದೀಪ್ ಯಾದವ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಇದುವರೆಗೆ ಒಟ್ಟು 176 ವಿಕೆಟ್ ಪಡೆದಿದ್ದಾರೆ. ಮಾರ್ಚ್ 4ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಕುಲದೀಪ್ ಯಾದವ್ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದಿದ್ದಾರೆ. ಭಾರತವು ತನ್ನ ತವರು ನೆಲದಲ್ಲಿ ಹೆಚ್ಚಿನ ಟೆಸ್ಟ್ ಸರಣಿಗಳನ್ನು ಆಡಬೇಕಾಗಿದೆ. ಹೀಗಾಗಿ ಈಗ ಕುಲದೀಪ್ ಯಾದವ್ ಅವರನ್ನು ಕೈಬಿಡುವುದು ಅಸಾಧ್ಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.