ನವದೆಹಲಿ: ಸೂರ್ಯಕುಮಾರ್ ಯಾದವ್ ಸ್ಫೋಟಕ ಶತಕ ಭಾರಿಸಿದರೂ ಟಿ20 ಸರಣಿಯ 3ನೇ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ರೋಚಕ ಗೆಲವು ಸಾಧಿಸಿದೆ. ಕೊನೆ ಓವರ್ವರೆಗೂ ಗೆಲುವಿಗಾಗಿ ನಡೆದ ಹೋರಾಟದಲ್ಲಿ ಆಂಗ್ಲರು ಗೆದ್ದು ಬೀಗಿದ್ದಲ್ಲದೆ ಕ್ಲೀನ್ ಸ್ವೀಪ್ ಸೋಲಿನಿಂದ ಪಾರಾಗಿದೆ. ಇಂಗ್ಲೆಂಡ್ ನೀಡಿದ್ದ 216 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಕೊನೆ ಓವರ್ ವರೆಗೂ ಹೋರಾಟ ನಡೆಸಿ 17 ರನ್ ಗಳಿಂದ ಸೋಲೊಪ್ಪಿಕೊಂಡಿತು.
ಬೃಹತ್ ಮೊತ್ತ ಪೇರಿಸಿದ ಇಂಗ್ಲೆಂಡ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇಂಗ್ಲೆಂಡ್ ಪರ ಸ್ಫೋಟಕ ಆಟವಾಡಿದ ಡೇವಿಡ್ ಮಲನ್(77), ಲಿಯಾಮ್ ಲಿವಿಂಗ್ಸ್ಟೋನ್(42), ಜೇಸನ್ ರಾಯ್(27), ಹ್ಯಾರಿ ಬ್ರೂಕ್(19) ಮತ್ತು ಜೋಸ್ ಬಟ್ಲರ್ 18 ರನ್ ಗಳಿಸಿದರು. ಭಾರತದ ಪರ ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್ ಮತ್ತು ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದು ಮಿಂಚಿದರೆ, ಅವೇಶ್ ಖಾನ್ ಮತ್ತು ಉಮ್ರಾನ್ ಮಲಿಕ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
A gritty performance from #TeamIndia but England win the third #ENGvIND T20I.
India win the T20I series 2️⃣-1️⃣. 👍 👍
Scorecard ▶️ https://t.co/BEVTo52gzO pic.twitter.com/IVg72dACbu
— BCCI (@BCCI) July 10, 2022
ಇದನ್ನೂ ಓದಿ: ಭಾರತದ ಟಿ 20 ತಂಡದಿಂದ ಹೊರಕ್ಕೆ ಹೋಗ್ತಾರಾ ವಿರಾಟ್ ಕೊಹ್ಲಿ?
ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ
216 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತದ ಪರ ಸೂರ್ಯಕುಮಾರ್ ಯಾದವ್ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಆಂಗ್ಲರನ್ನು ಮನಬಂದಂತೆ ದಂಡಿಸಿದ ಸೂರ್ಯಕುಮಾರ್ ಯಾದವ್ 55 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 14 ಬೌಂಡರಿ ಇದ್ದ 117 ರನ್ ಗಳಿಸಿ ಟಿ20ಯಲ್ಲಿ ಚೊಚ್ಚಲ ಶತಕ ಭಾರಿಸಿದರು. ಇನ್ನುಳಿದಂತೆ ಶ್ರೇಯಸ್ ಅಯ್ಯರ್(28), ರೋಹಿತ್ ಶರ್ಮಾ(11) ಮತ್ತು ವಿರಾಟ್ ಕೊಹ್ಲಿ(11) ರನ್ ಗಳಿಸಿರು. ಭಾರತದ ಪರ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಕೊನೆ ಓವರ್ ವರೆಗೂ ಉಭಯ ತಂಡಗಳ ನಡುವೆ ಗೆಲುವಿಗಾಗಿ ಹೋರಾಟ ನಡೆಯಿತು. ಅಂತಿಮವಾಗಿ ಆಂಗ್ಲಪಡೆ ಗೆಲುವು ಸಾಧಿಸುವ ಮೂಲಕ ಕ್ಲೀನ್ ಸ್ಲೀಪ್ ಮುಖಭಂಗದಿಂದ ಪಾರಾಯಿತು. ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ರೀಸ್ ಟೋಪ್ಲಿ 3 ವಿಕೆಟ್ ಪಡೆದು ಮಿಂಚಿದರು. ಡೇವಿಡ್ ವಿಲ್ಲಿ ಮತ್ತು ಕ್ರಿಸ್ ಜೋರ್ಡಾನ್ ತಲಾ 2, ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ರಿಚರ್ಡ್ ಗ್ಲೀಸನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ಹೇಗಿತ್ತು ಸೌರವ್ ಗಂಗೂಲಿ 50ನೇ ಹುಟ್ಟುಹಬ್ಬದ ಸಂಭ್ರಮ?
ಈ ಪಂದ್ಯ ಸೋತರೂ ಭಾರತ 2-1ರಿಂದ ಸರಣಿಯನ್ನು ತನ್ನದಾಗಿಸಿಕೊಂಡು ಟ್ರೋಫಿಗೆ ಮುತ್ತಿಕ್ಕಿತು. ಭಾರತದ ವಿರುದ್ಧ ಅತ್ಯುತ್ತಮ ಬೌಲಿಂಗ್ ಮಾಡಿದ ರೀಸ್ ಟೋಪ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ