KL Rahul Athiya Shetty: ರಾಹುಲ್-ಅಥಿಯಾಗೆ ಧೋನಿ-ಕೊಹ್ಲಿ ಕೊಟ್ಟ ಗಿಫ್ಟ್ ಏನು ಗೊತ್ತಾ? ಯಾರ ವಿವಾಹಕ್ಕೂ ಸಿಕ್ಕಿಲ್ಲ ಇಷ್ಟೊಂದು ದುಬಾರಿ ಉಡುಗೊರೆ!

KL Rahul Athiya Shetty Wedding: ಆದರೆ ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಇತರರು ತಮ್ಮ ಪಂದ್ಯದ ಬದ್ಧತೆಯಲ್ಲಿ ನಿರತರಾಗಿದ್ದರಿಂದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

Written by - Bhavishya Shetty | Last Updated : Jan 25, 2023, 03:46 PM IST
    • ಕ್ರಿಕೆಟಿಗ ಕೆಎಲ್ ರಾಹುಲ್- ನಟಿ ಅಥಿಯಾ ಶೆಟ್ಟಿ ಸಪ್ತಪದಿ ತುಳಿದಿದ್ದಾರೆ
    • ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಈ ಅದ್ದೂರಿ ವಿವಾಹ ಕಾರ್ಯಕ್ರಮ ನಡೆದಿದೆ
    • ಧೋನಿ ಮತ್ತು ಕೊಹ್ಲಿ ಬಹಳಷ್ಟು ದುಬಾರಿ ಉಡುಗೊರೆ ನೀಡಿದ್ದು ಸಖತ್ ಟ್ರೆಂಡಿಂಗ್ ಆಗಿದೆ
KL Rahul Athiya Shetty: ರಾಹುಲ್-ಅಥಿಯಾಗೆ ಧೋನಿ-ಕೊಹ್ಲಿ ಕೊಟ್ಟ ಗಿಫ್ಟ್ ಏನು ಗೊತ್ತಾ? ಯಾರ ವಿವಾಹಕ್ಕೂ ಸಿಕ್ಕಿಲ್ಲ ಇಷ್ಟೊಂದು ದುಬಾರಿ ಉಡುಗೊರೆ! title=
KL Rahul

KL Rahul Athiya Shetty Wedding: ಭಾರತದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಸೋಮವಾರ (ಜನವರಿ 23) ಖಂಡಾಲಾದಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಅಥಿಯಾ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳಾಗಿದ್ದು, ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಈ ಅದ್ದೂರಿ ವಿವಾಹ ಕಾರ್ಯಕ್ರಮ ನಡೆದಿದೆ.

ಇದನ್ನೂ ಓದಿ:ಪಂದ್ಯ ಗೆದ್ದ ನಂತರವೂ ರೋಹಿತ್ ಶರ್ಮಾ ಈ ಪರಿ ಸಿಟ್ಟಾಗಿರುವುದಕ್ಕೆ ಕಾರಣ !

ಇನ್ನು ಈ ಮದುವೆ ಸಮಾರಂಭದಲ್ಲಿ ಬಾಲಿವುಡ್‌ನ ಅನೇಕ ಪ್ರಸಿದ್ಧ ನಟ ನಟಿಯರು ಮತ್ತು ಇತರ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಆದರೆ ಟೀಂ ಇಂಡಿಯಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಇತರರು ತಮ್ಮ ಪಂದ್ಯದ ಬದ್ಧತೆಯಲ್ಲಿ ನಿರತರಾಗಿದ್ದರಿಂದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಟೀಂ ಇಂಡಿಯಾ ಮಂಗಳವಾರ (ಜನವರಿ 24) ನಡೆದ ನ್ಯೂಜಿಲೆಂಡ್ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ ಆಡಿ ಗೆದ್ದಿದೆ. ಈ ಮೊದಲು ಪಂದ್ಯ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಕೊಹ್ಲಿ ಮತ್ತು ಇತರರು ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ.

ಕೊಹ್ಲಿ ಮದುವೆಗೆ ಬರಲು ಸಾಧ್ಯವಾಗದಿದ್ದರೂ, ರಾಹುಲ್ ಮತ್ತು ಅಥಿಯಾ ಅವರಿಗೆ ಮರೆಯಲಾಗದ ಉಡುಗೊರೆಯನ್ನು ನೀಡಿದ್ದಾರೆ. ಬಹಳಷ್ಟು ದುಬಾರಿ ಉಡುಗೊರೆ ನೀಡಿದ್ದು, ಸಖತ್ ಟ್ರೆಂಡಿಂಗ್ ಆಗಿದೆ. 

ವರದಿಗಳ ಪ್ರಕಾರ ಕೊಹ್ಲಿ ಕೆಎಲ್ ರಾಹುಲ್ ಮತ್ತು ಅಥಿಯಾ ಅವರಿಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ 2.17 ಕೋಟಿ ಎಂದು ವರದಿಯಾಗಿದೆ.

ಇನ್ನೊಂದೆಡೆ ಟೀಂ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಕೂಡ ರಾಹುಲ್‌ಗೆ ಅಮೂಲ್ಯ ವಸ್ತುವನ್ನು ಉಡುಗೊರೆಯಾಗಿ ನೀಡಿದ್ದಾರೆ. ಲಕ್ನೋ ಸೂಪರ್‌ಜೈಂಟ್ಸ್ ನಾಯಕನಿಗೆ ಧೋನಿ ಕವಾಸಕಿ ನಿಂಜಾ ಬೈಕನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ಈ ಬೈಕ್‌ನ ಮಾರುಕಟ್ಟೆ ಬೆಲೆ ಸುಮಾರು 80 ಲಕ್ಷ ರೂ.

ಇದನ್ನೂ ಓದಿ: IND vs NZ ಏಕದಿನ ಸರಣಿ ಜೊತೆ ಟೀಂ ಇಂಡಿಯಾದ ಈ ಆಟಗಾರನ ವೃತ್ತಿಜೀವನವೂ ಕೊನೆಗೊಂಡಿತು!

ಸದ್ಯ ಕೆ ಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಅನೇಕ ವರ್ಷಗಳಿಂದ ಡೇಟಿಂಗ್ ನಡೆಸಿ, ಜನವರಿ 23 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮುದ್ದಾದ ಜೋಡಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News