108 ಮೀಟರ್ ದೈತ್ಯಾಕಾರದ ಸಿಕ್ಸರ್ ಸಿಡಿಸಿದ ದಿನೇಶ್ ಕಾರ್ತಿಕ್: ಇದುವೇ ಐಪಿಎಲ್ 2024ರ ಅತಿ ಉದ್ದದ ಸಿಕ್ಸರ್- ವಿಡಿಯೋ ನೋಡಿ

ಐಪಿಎಲ್ 2024ರ 30 ನೇ ಪಂದ್ಯ ಇದುವರೆಗಿನ ರೋಚಕ ಪಂದ್ಯವಾಗಿದೆ. ಈ ಪಂದ್ಯದಲ್ಲಿ ರನ್, ಬೌಂಡರಿ, ಸಿಕ್ಸರ್’ಗಳ ಮಹಾಪೂರವೇ ಹರಿದು ಬಂದಿತ್ತು. ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿ ಬೋರ್ಡ್ ಮೇಲೆ 287 ರನ್ ಕಲೆ ಹಾಕಿದರೆ, ಗುರಿಯನ್ನು ಬೆನ್ನಟ್ಟಿದ ಆರ್‌ ಸಿ ಬಿ ಕೂಡ ಕೊನೆಯ ಉಸಿರಿನವರೆಗೆ ಹೋರಾಡಿತು ಎಂದೇ ಹೇಳಬಹುದು.

Written by - Bhavishya Shetty | Last Updated : Apr 16, 2024, 04:32 PM IST
    • ಐಪಿಎಲ್ 2024ರ 30 ನೇ ಪಂದ್ಯ ಇದುವರೆಗಿನ ರೋಚಕ ಪಂದ್ಯವಾಗಿದೆ
    • ದಿನೇಶ್ ಕಾರ್ತಿಕ್ ಅವರ ಈ ಸಿಕ್ಸರ್ 108 ಮೀಟರ್ ಉದ್ದವಾಗಿತ್ತು
    • ಇದು ಟಿ20 ಇತಿಹಾಸದಲ್ಲೇ ಗರಿಷ್ಠ ರನ್ ಗಳಿಸಿದ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
108 ಮೀಟರ್ ದೈತ್ಯಾಕಾರದ ಸಿಕ್ಸರ್ ಸಿಡಿಸಿದ ದಿನೇಶ್ ಕಾರ್ತಿಕ್: ಇದುವೇ ಐಪಿಎಲ್ 2024ರ ಅತಿ ಉದ್ದದ ಸಿಕ್ಸರ್- ವಿಡಿಯೋ ನೋಡಿ  title=
Dinesh Karthik 108 Meters

Dinesh Karthik Six Video: ಐಪಿಎಲ್ 2024ರ 30 ನೇ ಪಂದ್ಯ ಇದುವರೆಗಿನ ರೋಚಕ ಪಂದ್ಯವಾಗಿದೆ. ಈ ಪಂದ್ಯದಲ್ಲಿ ರನ್, ಬೌಂಡರಿ, ಸಿಕ್ಸರ್’ಗಳ ಮಹಾಪೂರವೇ ಹರಿದು ಬಂದಿತ್ತು. ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್ ಗಳಿಸಿ ಬೋರ್ಡ್ ಮೇಲೆ 287 ರನ್ ಕಲೆ ಹಾಕಿದರೆ, ಗುರಿಯನ್ನು ಬೆನ್ನಟ್ಟಿದ ಆರ್‌ ಸಿ ಬಿ ಕೂಡ ಕೊನೆಯ ಉಸಿರಿನವರೆಗೆ ಹೋರಾಡಿತು ಎಂದೇ ಹೇಳಬಹುದು.

ಇದನ್ನೂ ಓದಿ: ಧರ್ಮವನ್ನೇ ಮೀರಿ ನಿಂತು ಪ್ರೀತಿಗಾಗಿ ಮುಸ್ಲಿಂ ಯುವತಿಯನ್ನ 2 ಬಾರಿ ಮದುವೆಯಾದ ಕ್ರಿಕೆಟಿಗ! ಟೀಂ ಇಂಡಿಯಾದ ಸ್ಟಾರ್ ಆಟಗಾರನ ಅಪರೂಪದ ಪ್ರೇಮ್ ಕಹಾನಿ

ಇನ್ನು ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರ 83 ರನ್‌ಗಳ ಬಿರುಸಿನ ಇನ್ನಿಂಗ್ಸ್‌’ನೊಂದಿಗೆ ಆರ್‌ ಸಿ ಬಿ 262 ರನ್ ಗಳಿಸಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ 549 ರನ್ ಕಲೆ ಹಾಕಿದ್ದರೆ, ಇದು ಟಿ20 ಇತಿಹಾಸದಲ್ಲೇ ಗರಿಷ್ಠ ರನ್ ಗಳಿಸಿದ ಪಂದ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ಇದರ ಜೊತೆಗೆ ಇನಿಂಗ್ಸ್‌’ನ 16ನೇ ಓವರ್‌’ನ ಮೊದಲ ಎಸೆತದಲ್ಲಿ ದಿನೇಶ್ ಕಾರ್ತಿಕ್ ಐಪಿಎಲ್ 2024 ರ ಅತಿ ಉದ್ದದ ಸಿಕ್ಸರ್ ಬಾರಿಸಿದರು. ವೇಗದ ಬೌಲರ್ ಟಿ ನಟರಾಜನ್ ಈ ಓವರ್ ಬೌಲಿಂಗ್ ಮಾಡುತ್ತಿದ್ದರು.

ಇದನ್ನೂ ಓದಿ: ಅಣ್ಣಾ ಎಂದು ಕರೆದವನ ಜೊತೆಯೇ ಮದುವೆ! ಈಗ 2 ಕಂಡೀಷನ್ ಒಪ್ಪಿದ್ರೆ ಮಾತ್ರ ಮಗು ಅಂತಿದ್ದಾಳೆ ಕನ್ನಡದ ಈ ಖ್ಯಾತ ನಟಿ!

ದಿನೇಶ್ ಕಾರ್ತಿಕ್ ಅವರ ಈ ಸಿಕ್ಸರ್ 108 ಮೀಟರ್ ಉದ್ದವಾಗಿತ್ತು. ಅಂದಹಾಗೆ ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕಾರ್ತಿಕ್ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 83 ರನ್ ಗಳಿಸಿದರು. ಆದರೆ, ಅವರ ಇನ್ನಿಂಗ್ಸ್ ಆರ್‌ ಸಿ ಬಿಯನ್ನು ಗೆಲುವಿನತ್ತ ಕೊಂಡೊಯ್ಯಲು ಸಾಕಾಗಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News