Watch:'ಶ್ರೀವಲ್ಲಿ' ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಕ್ರಿಕೆಟರ್​ ಡೇವಿಡ್​ ವಾರ್ನರ್

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಶೇರ್ ಮಾಡಿದ ಐದು ಗಂಟೆಗಳಲ್ಲಿ ಮಿಲಿಯನ್ ಲೈಕ್‌ಗಳನ್ನು ಗಳಿಸಿದೆ.

Edited by - Chetana Devarmani | Last Updated : Jan 23, 2022, 12:45 PM IST
  • ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್
  • ಪುಷ್ಪಚಿತ್ರದಲ್ಲಿನ 'ಶ್ರೀವಲ್ಲಿ' ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಕ್ರಿಕೆಟರ್​
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
Watch:'ಶ್ರೀವಲ್ಲಿ' ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ಕ್ರಿಕೆಟರ್​ ಡೇವಿಡ್​ ವಾರ್ನರ್  title=
ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ (David Warner) ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಅಲ್ಲು ಅರ್ಜುನ್ ಅವರ ಪುಷ್ಪ (Pushpa) ಚಿತ್ರದಲ್ಲಿನ 'ಶ್ರೀವಲ್ಲಿ' ಕನ್ನಡ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶೇರ್ ಮಾಡಿದ ಐದು ಗಂಟೆಗಳಲ್ಲಿ ಮಿಲಿಯನ್ ಲೈಕ್‌ಗಳನ್ನು ಗಳಿಸಿದೆ. "#ಪುಷ್ಪಾ ಮುಂದೇನು??" ಎಂದು ಆಸ್ಟ್ರೇಲಿಯನ್ ಸ್ಟಾರ್ ಕ್ರಿಕೆಟಿಗ ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ವಾರ್ನರ್ 'ಶ್ರೀವಲ್ಲಿ'ಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಇಲ್ಲಿದೆ:

 

 

'ಶ್ರೀವಲ್ಲಿ' (Srivalli Song) ತೆಲುಗು ಹಾಗೂ ಹಿಂದಿ ಹಾಡಿಗೆ ಈ ಮೊದಲು ಅನೇಕರು ಹೆಜ್ಜೆ ಹಾಕಿದ್ದರು. ಆದರೆ, ಇದೀಗ ಡೇವಿಡ್​ ವಾರ್ನರ್ ಕನ್ನಡ ಹಾಡಿಗೆ ಸ್ಟೆಪ್ಸ್ ಹಾಕಿರುವುದು ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ.   

2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಐಪಿಎಲ್ ನಲ್ಲಿ (IPL) ಮುನ್ನಡೆಸಿದ್ದ ವಾರ್ನರ್, ಕಳೆದ ವರ್ಷ ಫ್ರಾಂಚೈಸಿಯಿಂದ ನಾಯಕತ್ವದಿಂದ ತೆಗೆದುಹಾಕಲ್ಪಟ್ಟರು. ಹೈದರಾಬಾದ್​ ತಂಡ ಈ ಬಾರಿ ಡೇವಿಡ್​ ಅವರನ್ನು ಉಳಿಸಿಕೊಂಡಿಲ್ಲ.  
 
ಇದನ್ನೂ ಓದಿ: T20 WC 2022ರಲ್ಲಿ ಭಾರತವನ್ನು ಪಾಕಿಸ್ತಾನ ಮತ್ತೆ ಸೋಲಿಸುತ್ತದೆ: ಶೋಯೆಬ್ ಅಖ್ತರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News