Commonwealth Games 2022: ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವಿನೇಶ್ ಫೋಗಟ್ ಭಾರತಕ್ಕೆ 11ನೇ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಅಂತಿಮ ಪಂದ್ಯದಲ್ಲಿ ವಿನೇಶ್ ಫೋಗಟ್ ಶ್ರೀಲಂಕಾದ ಕುಸ್ತಿಪಟುವನ್ನು ಸೋಲಿಸಿದ್ದಾರೆ.
Wrestler Vinesh Phogat scripts history yet again, from being the 1st Indian woman to win Gold at both #CWG & Asian Games, to becoming the 1st Indian woman to bag 3 consecutive Gold at #CommonwealthGames
India gets a Gold medal in Women's Wrestling 53Kgs pic.twitter.com/oKPmeIQXjW
— ANI (@ANI) August 6, 2022
ಇದನ್ನೂ ಓದಿ-Ravi Dahiya Wins Gold: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ರವಿ ದಹಿಯಾ
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 2022 ಕಾಮನ್‌ವೆಲ್ತ್ ಗೇಮ್ಸ್‌ನ ಕುಸ್ತಿಯಲ್ಲಿ ಭಾರತೀಯ ಕುಸ್ತಿಪಟುಗಳ ಅದ್ಭುತ ಪ್ರದರ್ಶನ ಇಂದೂ ಕೂಡ ಮುಂದುವರೆದಿದೆ. ರವಿ ದಹಿಯಾ ನಂತರ ಇದೀಗ ಭಾರತದ ವಿನೇಶ್ ಫೋಗಟ್ ಕೂಡ ಬರ್ಮಿಂಗ್ಹ್ಯಾಮ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರದಿದ್ದರೆ. ವಿನೇಶ್ ಫೋಗಟ್ ಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಇದು ಹ್ಯಾಟ್ರಿಕ್ ಚಿನ್ನವಾಗಿದೆ.
ಇದನ್ನೂ ಓದಿ-CWG 2022: ಕುಸ್ತಿಯಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡ ಪೂಜಾ ಗೆಹಲೋತ್, ಭಾರತಕ್ಕೆ 31ನೇ ಪದಕ
ಚಿನ್ನ ಗೆದ್ದ ಫೋಗಾಟ್
ಭಾರತದ ಹಿರಿಯ ಕುಸ್ತಿಪಟು ಆಗಿರುವ ವಿನೇಶ್ ಫೋಗಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೂರನೇ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಫ್ರೀಸ್ಟೈಲ್ ನ 53 ಕೆಜಿ ವಿಭಾಗದಲ್ಲಿ ಶ್ರೀಲಂಕಾದ ಚಮೋದಯ ಕೇಶಾನಿ ಅವರನ್ನು ವಿನೆಶ್ ಸೋಲಿಸಿದ್ದಾರೆ. ಈ ಪಂದ್ಯವನ್ನು ವಿನೇಶ್ 4-0 ಅಂತರದಿಂದ ಗೆದ್ದುಕೊಂಡಿದ್ದಾರೆ. ಅವರು 2014 ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 48 ಕೆಜಿ ವಿಭಾಗದಲ್ಲಿ ಮತ್ತು 2018 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.