ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಭಾರತ ಇಲ್ಲಿಯವರೆಗೆ ನಾಲ್ಕು ಪದಕಗಳನ್ನು ಗೆದ್ದಿದೆ. ಭಾರತದ ವೇಟ್ಲಿಫ್ಟರ್ಗಳು ಅದ್ಭುತ ಆಟ ಪ್ರದರ್ಶಿಸುತ್ತಿದ್ದಾರೆ. ಇದೀಗ ಬ್ಯಾಡ್ಮಿಂಟನ್ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ್ದು, ಕ್ವಾರ್ಟರ್ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಮತ್ತೊಂದು ಪದಕ ಬರುವ ಭರವಸೆ ಮೂಡಿದೆ.
ಇದನ್ನೂ ಓದಿ: Arecanut today price: ರಾಜ್ಯದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ
ಭಾರತ ಬ್ಯಾಡ್ಮಿಂಟನ್ ತಂಡವು ಕಾಮನ್ವೆಲ್ತ್ ಗೇಮ್ಸ್ನ ಮಿಶ್ರ ತಂಡ ವಿಭಾಗದ ಎ ಗುಂಪಿನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದೆ. ಹಾಲಿ ಚಾಂಪಿಯನ್ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ 5-0 ಆಕರ್ಷಕ ಗೆಲುವು ದಾಖಲಿಸಿದ ನಂತರ, ಶನಿವಾರ ಆಸ್ಟ್ರೇಲಿಯಾವನ್ನು 4-1 ಅಂಕಗಳಿಂದ ಸೋಲಿಸಿ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವ ಚಾಂಪಿಯನ್ಶಿಪ್ನ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಅವರು ಆಸ್ಟ್ರೇಲಿಯಾದ ಲಿನ್ ಜಿಯಾಂಗ್ ಯಿಂಗ್ ವಿರುದ್ಧ 21-14 21-13 ಅಂತರದ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದರು.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಚೆನ್ ವೆಂಡಿ ಹುವಾನ್-ಯು ಅವರನ್ನು 21-10, 21-12 ಅಂತರದಿಂದ ಸೋಲಿಸಿ 2-0 ಮುನ್ನಡೆ ಸಾಧಿಸಿದರು. ಪುರುಷರ ಡಬಲ್ಸ್ ಪಂದ್ಯದಲ್ಲಿ ಸುಮಿತ್ ಮತ್ತು ಚಿರಾಗ್ ಜೋಡಿ ಟ್ರಾನ್ ಹೋಂಗ್ ಫಾಮ್ ಮತ್ತು ಜಾಕ್ ಯೂ ಅವರನ್ನು 21-16, 21-19 ಸೆಟ್ಗಳಿಂದ ಸೋಲಿಸಿ 3-0 ಅಂತರದಿಂದ ಗೆಲುವು ಸಾಧಿಸಿದರು.
ಇದನ್ನೂ ಓದಿ: ಭಾರತದ ಈ ಪುಣ್ಯಕ್ಷೇತ್ರಗಳಲ್ಲಿ ಪ್ರಕೃತಿ ಆನಂದದ ಜೊತೆ ಸಿಗುತ್ತೆ ಉಚಿತ ಆಹಾರ-ವಸತಿ ಸೌಲಭ್ಯ
ಭಾರತದ ಜೋಡಿ ತ್ರಿಶಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ 13-21, 19-21 ಅಂತರದಿಂದ ಲೂಸಿಂಗ್, ಚೆನ್ ಹ್ಸುವಾ ಯು ಮತ್ತು ಗ್ರೋನೆ ಸೊಮರ್ವಿಲ್ಲೆ ಜೋಡಿ ವಿರುದ್ಧ ಸೋತರು. ಮಿಶ್ರ ಡಬಲ್ಸ್ ಪಂದ್ಯದಲ್ಲಿ ಬಿ ಸುಮೀತ್ ರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ, ಯಿಂಗ್ ಜಿಯಾಂಗ್ ಲಿನ್ ಮತ್ತು ಗ್ರೋನೆ ಸೊಮರ್ವಿಲ್ಲೆ ಅವರನ್ನು 21-14, 21-11 ರಿಂದ ಸೋಲಿಸಿ ಭಾರತದ ಗೆಲುವಿಗೆ ಕಾರಣರಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.