CWC: ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿದ ಒಲಿಂಪಿಕ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್

CWC: ತನ್ನ ಕೋಚ್ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿನ ಅಧಿಕಾರಿಗಳಿಂದ "ನಿರಂತರ ಕಿರುಕುಳ" ಎದುರಿಸುತ್ತಿದ್ದಾರೆ ಎಂದು ಒಲಂಪಿಕ್ ಕಂಚಿನ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಆರೋಪಿಸಿದ್ದಾರೆ, ಇದರಿಂದ ತಮ್ಮ ಕಾಮನ್‌ವೆಲ್ತ್ ಕ್ರೀಡಾಕೂಟದ ಸಿದ್ಧತೆಗಳಿಗೆ ಅಡ್ಡಿಯುಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.  

Written by - Nitin Tabib | Last Updated : Jul 25, 2022, 09:32 PM IST
  • ತಮ್ಮ ಕೋಚ್ ಬರ್ಮಿಂಗ್ಹ್ಯಾಮ್ ಅಧಿಕಾರಿಗಳಿಂದ 'ನಿರಂತರ ಕಿರುಕುಳ' ಎಂದುರಿಸುತ್ತಿದ್ದಾರೆ.
  • ಒಲಿಂಪಿಕ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಗಂಭೀರ ಆರೋಪ.
  • ಇದು ತಮ್ಮ ಕಾಮನ್ವೆಲ್ತ್ ಕ್ರೀಡಾಕೂಟದ ಸಿದ್ಧತೆಗಳಿಗೆ ಅಡೆತಡೆಯುಂಟು ಮಾಡುತ್ತಿದೆ ಎಂದ ಲೋವ್ಲೀನಾ.
CWC: ಮಾನಸಿಕ ಕಿರುಕುಳ ಅನುಭವಿಸುತ್ತಿರುವುದಾಗಿ ಆರೋಪಿಸಿದ ಒಲಿಂಪಿಕ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್  title=
commonwealth games

CWC: ತಮ್ಮ ಕೋಚ್ ಬರ್ಮಿಂಗ್ಹ್ಯಾಮ್ ಅಧಿಕಾರಿಗಳಿಂದ ' 'ನಿರಂತರ ಕಿರುಕುಳ' ಎಂದುರಿಸುತ್ತಿದ್ದಾರೆ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಗಂಭೀರ ಆರೋಪ ಮಾಡಿದ್ದು, ಅದು ತಮ್ಮ ಕಾಮನ್ವೆಲ್ತ್ ಕ್ರೀಡಾಕೂಟದ ಸಿದ್ಧತೆಗಳಿಗೆ ಅಡೆತಡೆಯುಂಟು ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಐರ್ಲೆಂಡ್ ನಲ್ಲಿ ತನ್ನ ಅಭ್ಯಾಸ ಶಿಬಿರ ಪೂರ್ಣಗೊಳಿಸಿರುವ ಭಾರತೀಯ ಬಾಕ್ಸಿಂಗ್ ತಂಡ ಭಾನುವಾರ ಅಲ್ಲಿನ ಖೇಲ್ ಗ್ರಾಮ್ ತಲುಪಿದೆ. ಆದರೆ ಲೋವ್ಲಿನಾ ಅವರ ವೈಯಕ್ತಿಕ ಕೋಚ್ ಆಇಗ್ರುವ ಸಂಧ್ಯಾ ಗುರುಂಗ್ ಅವರಿಗೆ ಮಾನ್ಯತೆ ಇಲ್ಲದ ಕಾರಣ ಅವರಿಗೆ ಖೇಲ್ ಗ್ರಾಮ್ ತಲುಪಲು ಸಾಧ್ಯವಾಗುತ್ತಿಲ್ಲ. 

ಗಂಭೀರ ಆರೋಪ ಮಾಡಿದ ಒಲಿಂಪಿಕ್ ಪದಕ ವಿಜೇತೆ
ಲೊವ್ಲಿನಾ  ಕಾಮನ್‌ವೆಲ್ತ್ ಕ್ರೀಡಾಕೂಟದ ಸಮಯದಲ್ಲಿ ತಮ್ಮ ವೈಯಕ್ತಿಕ ತರಬೇತುದಾರ ಅಮೇಯ್ ಕೋಲೆಕರ್‌ ಅವರನ್ನು ತಮ್ಮೊಂದಿಗೆ ಇರಿಸಿಕೊಳ್ಳಲು ಬಯಸಿದ್ದರು. ಆದರೆ ಅವರ ಹೆಸರು ಭಾರತೀಯ ತುಕಡಿಯ ದೀರ್ಘ ಪಟ್ಟಿಯಲ್ಲಿ ಇರಲಿಲ್ಲ. ಈ ಕುರಿತು ಟ್ವಿಟ್ಟರ್ ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ತಮ್ಮ ನೋವನ್ನು ವ್ಯಕ್ತಪಡಿಸಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಲೋವ್ಲಿನಾ, 'ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯಲು ಸಹಕರಿಸಿದ ನನ್ನ ಇಬ್ಬರು ಕೋಚ್‌ಗಳ ಸಾಥ್ ಪಡೆಯಲು ಸಾವಿರಾರು ಬಾರಿ ವಿನಂತಿಗಳ ಬಳಿಕ ತುಂಬಾ ತಡವಾಗಿ ನನಗೆ ಅವರ ನೆರವು ಸಿಗುತ್ತದೆ. ಇಂದು ನನಗೆ (ಮಾನಸಿಕವಾಗಿ) ಕಿರುಕುಳ ನೀಡುತ್ತಿದೆ ಎಂದು ಬಹಳ ದುಃಖದಿಂದ ಹೇಳುತ್ತಿದ್ದೇನೆ' ಎಂದು ಹೇಳಿದ್ದಾರೆ.

ಕಾಮನ್ವೆಲ್ತ್ ಕ್ರೀಡಾ ಗ್ರಾಮ್ ಹೊರಗಿರುವ ಸಂಧ್ಯಾ ಗುರುಂಗ್ 
'ಸದ್ಯ ನನ್ನ ತರಬೇತುದಾರರಾಗಿರುವ ಸಂಧ್ಯಾ ಗುರುಂಗ್ ಅವರು ಕಾಮನ್ವೆಲ್ತ್ ಗೇಮ್ಸ್ ವಿಲೇಜ್  ಹೊರಗಿದ್ದಾರೆ, ಅವರಿಗೆ ಪ್ರವೇಶ ಸಿಗುತ್ತಿಲ್ಲ. ಇದರಿಂದ ತನ್ನ ಅಭ್ಯಾಸದ ಆಟಗಳು 8 ದಿನ ಮೊದಲೇ ನಿಂತುಹೋಗಿವೆ, ಅಷ್ಟೇ ಅಲ್ಲ ನನ್ನ ಎರಡನೇ ಕೋಚ್ ಅವರಿಗೂ ಭಾರತಕ್ಕೆ ಕಳುಹಿಸಲಾಗಿದೆ, ಎಂದು ಲೊವ್ಲಿನಾ ಆರೋಪಿಸಿದ್ದಾರೆ. ಇಸ್ತಾಂಬುಲ್ ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಮೊದಲು ಕೂಡ ತಾವು ಈ ರೀತಿಯ ಕಿರುಕುಳ ಅನುಭವಿಸಿದ್ದು, ಬರ್ಮಿಂಗ್ಹ್ಯಾಮ್ ನಲ್ಲಿಯೂ ಕೂಡ ತಮ್ಮೊಂದಿಗೆ ಅದೇ ರೀತಿ ಸಂಭವಿಸುವ ಭಯ ಕಾಡುತ್ತಿದೆ ಎಂದು ಲೊವ್ಲಿನಾ ಹೇಳಿದ್ದಾರೆ.

ಇದನ್ನೂ ಓದಿ-"ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಗಿಲ್ಲ ಸ್ಥಾನ.."! ಶಾಕಿಂಗ್ ಹೇಳಿಕೆ ನೀಡಿದ ಆಟಗಾರ

ಮಾನಸಿಕ ಹಿಂಸೆ ನೀಡುತ್ತಿದ್ದಾರೆ
"ಹಲವಾರು ಬಾರಿ ವಿನಂತಿಗಳ ಬಳಿಕವೂ ಕೂಡ ನನ್ನೊಂದಿಗೆ ಇದು ನಡೆಯುತ್ತಿದ್ದು, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಆಟದ ಮೇಲೆ ಹೇಗೆ ಗಮನ ಕೇಂದ್ರೀಕರಿಸಬೇಕೇಂಬುದು ತಮಗೆ ತಿಳಿಯುತ್ತಿಲ್ಲ. ಇದೇ ಕಾರಣದಿಂದ ಕಳೆದ ವಿಶ್ವ ಚಾಂಪಿಯನ್ ಶಿಪ್ ವೇಳೆಯೂ ಕೂಡ ತಮ್ಮ ಪ್ರದರ್ಶನ ಅಷ್ಟೊಂದು ಸರಿಯಾಗಿರಲಿಲ್ಲ. ಈ ರಾಜಕೀಯದ ಕಾರಣ ತಾವು ತಮ್ಮ ಕಾಮನ್ವೆಲ್ತ್ ಕ್ರೀಡಾಕೂಟದ ಪ್ರದರ್ಶನ ಪ್ರಭಾವಿತಗೊಳ್ಳಲು ಬಯಸುತ್ತಿಲ್ಲ.'ಈ ರಾಜಕೀಯದ ಕಟ್ಟಳೆಗಳನ್ನು ಮುರಿದು ನಾನು ನನ್ನ ದೇಶಕ್ಕೆ ಪದಕ  ತರುವ ಆಶಾಭಾವ ಹೊಂದಿದ್ದೇನೆ. ಜೈ ಹಿಂದ್' ಎಂದು ಲೊವ್ಲಿನಾ ಹೇಳಿದ್ದಾರೆ. 

ಇದನ್ನೂ ಓದಿ-ಬೆಳ್ಳಿ ತೆರೆಗೆ ಬರಲಿದೆ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಬಯೋಪಿಕ್..!

ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ಪ್ರತಿಕ್ರಿಯೆ ಏನು? 
ಇನ್ನೊಂದೆಡೆ ಈ ಕುರಿತು ತನ್ನ ಪ್ರತಿಕ್ರಿಯೆ ನೀಡಿರುವ ಭಾರತೀಯ ಬಾಕ್ಸಿಂಗ್ ಫೆಡರೇಶನ್, ಮಾನ್ಯತೆಗೆ ಸಂಬಂಧಿಸಿದಂತೆ ಭಾರತೀಯ ಒಲಿಂಪಿಕ್ ಸಂಘ ಕಾರ್ಯತತ್ಪರವಾಗಿದ್ದು, ಶೀಘ್ರದಲ್ಲಿಯೇ ಪರಿಹಾರ ಸಿಗುವ ಭರವಸೆ ಇದೆ ಎಂದಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಎಫ್ಐ ಕಾರ್ಯದರ್ಶಿ ಹೇಮಂತ್ ಕಲಿತಾ, ಸಂಧ್ಯಾ ಅವರ ಮಾನ್ಯತೆಗಾಗಿ ಐಒಎ ಮತ್ತು ಬಿಎಫ್‌ಐ ನಿರಂತರವಾಗಿ ಶ್ರಮಿಸುತ್ತಿದ್ದು, ಆದ ಐಓಎ ಕೈಯಲ್ಲಿದ್ದು, ಇಂದು ಅಥವಾ ನಾಳೆ ಮಾನ್ಯತೆ ಸುಗುವ ಸಾಧ್ಯತೆ ಇದೆ ಎಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News