CSK Brand Ambassador: CSK ಬ್ರಾಂಡ್ ಅಂಬಾಸಿಡರ್ ಆದ ಈ ಬಾಲಿವುಡ್‌ ಸ್ಟಾರ್ ನಟಿ!

Bollywood Actress Katrina Kaif: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಚೆನ್ನೈ ಸೂಪರ್ ಕಿಂಗ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿದ್ದಾರೆ.  

Written by - Savita M B | Last Updated : Feb 15, 2024, 11:18 AM IST
  • ಪ್ರತಿ ವರ್ಷ ಐಪಿಎಲ್ ಕ್ರಿಕೆಟ್ ಸರಣಿಯನ್ನು ಬಿಸಿಸಿಐ ಆಯೋಜಿಸುತ್ತದೆ.
  • ಇದರ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.
  • ಕತ್ರಿನಾ ಕೈಫ್ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿದ್ದಾರೆ..
CSK Brand Ambassador: CSK ಬ್ರಾಂಡ್ ಅಂಬಾಸಿಡರ್ ಆದ ಈ ಬಾಲಿವುಡ್‌ ಸ್ಟಾರ್ ನಟಿ! title=

CSK Brand Ambassador: ಪ್ರತಿ ವರ್ಷ ಐಪಿಎಲ್ ಕ್ರಿಕೆಟ್ ಸರಣಿಯನ್ನು ಬಿಸಿಸಿಐ ಆಯೋಜಿಸುತ್ತದೆ. ಕಳೆದ ವರ್ಷ ಐಪಿಎಲ್ 16ನೇ ಸೀಸನ್ ನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಬಾರಿ ಚಾಂಪಿಯನ್ ಆಗಿತ್ತು. ಅದರಂತೆ ಮಾರ್ಚ್ ನಲ್ಲಿ 17ನೇ ಸೀಸನ್ ನಡೆಯಲಿದೆ.

ಇದರ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕೆಲ ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹೊಸ ಜೆರ್ಸಿ ಬಿಡುಗಡೆಯಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಎತಿಹಾದ್ ಏರ್‌ವೇಸ್ 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನ ಅಧಿಕೃತ ಪ್ರಾಯೋಜಕರಾಗಿ ಸೇರಿಕೊಂಡಿದೆ.

ಇದನ್ನೂ ಓದಿ-ಬಾಹುಬಲಿ ಚಿತ್ರದಲ್ಲಿ ರಮ್ಯಾ ಕೃಷ್ಣನ ಅಲ್ಲ.. ಈ ಸ್ಟಾರ್‌ ನಟಿ ನಟಿಸಬೇಕಿತ್ತಂತೆ!

ಇದನ್ನು ಪ್ರಕಟಿಸುವ ಕಾರ್ಯಕ್ರಮ ಚೆನ್ನೈನ ಕಲೈವಾನರ್ ಅರೆನಾದಲ್ಲಿ ನಡೆಯಿತು. ಎತಿಹಾದ್ ಏರ್‌ವೇಸ್‌ನ ಅಧಿಕಾರಿಗಳು ಮತ್ತು ಸಿಎಸ್‌ಕೆ ತಂಡದ ಮ್ಯಾನೇಜ್‌ಮೆಂಟ್ ಇದರಲ್ಲಿ ಭಾಗವಹಿಸಿದ್ದರು. ಅದರಲ್ಲಿ ಧೋನಿ ಅವರ ಜರ್ಸಿ ಸಂಖ್ಯೆ 7 ಇರುವ CSK ಜೆರ್ಸಿಯನ್ನು ಬಿಡುಗಡೆ ಮಾಡಲಾಯಿತು. ಜರ್ಸಿಯ ಹಿಂಭಾಗದಲ್ಲಿ ಎತಿಹಾದ್ ಏರ್‌ವೇಸ್ ಎಂದು ಬರೆಯಲಾಗಿತ್ತು. ಈ ಸೀಸನ್‌ನಲ್ಲಿ ಸಿಎಸ್‌ಕೆ ಆಟಗಾರರು ಈ ಜೆರ್ಸಿಯಲ್ಲಿ ಆಡಲಿದ್ದಾರೆ.

ಸದ್ಯ ಎತಿಹಾದ್ ಏರ್‌ವೇಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಪ್ರಾಯೋಜಕರಾಗಿ ಸೇರಿದ ನಂತರ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದ ಕತ್ರಿನಾ ಕೈಫ್ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಹಾಕಿದ್ದಾರೆ.. 

ಇದನ್ನೂ ಓದಿ-‘ಕೆಟಿಎಂ’ ಸವಾರಿಗೆ ಡೇಟ್‌ ಫಿಕ್ಸ್.. ಮತ್ತೊಂದು ಪ್ರೇಮಕಥೆ ಹೊತ್ತು ತಂದ ‘ದಿಯಾ’ ದೀಕ್ಷಿತ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News