IPL 2020ರ ಮೇಲೂ ಬಿದ್ದ CORONAVIRUS ಕರಿನೆರಳು

IPL 2020ರ ಮೇಲೂ ಕೂಡ ಇದೀಗ ಕೊರೊನಾ ವೈರಸ್ ನ ಕಾರ್ಮೋಡ ಕವಿದಿದೆ. ದೇಶಾದ್ಯಂತ ಕೊರೊನಾ ವೈರಸ್ ಪ್ರಕೋಪವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಏಪ್ರಿಲ್ 15ರವರೆಗೆ ವಿದೇಶಿ ಪ್ರವಾಸಿಗರ ವಿಜಾ ರದ್ದುಗೊಳಿಸಿದೆ.

Last Updated : Mar 12, 2020, 12:33 PM IST
IPL 2020ರ ಮೇಲೂ ಬಿದ್ದ CORONAVIRUS ಕರಿನೆರಳು title=

ನವದೆಹಲಿ: ಬರುವ ಮಾರ್ಚ್ 29 ರಂದು IPL ಕ್ರಿಕೆಟ್ ಟೂರ್ನಿಯ 13ನೇ ಆವೃತ್ತಿ ಆರಂಭಗೊಳ್ಳಲಿದೆ. ಇದನ್ನು ಪರಿಗಣಿಸಿರುವ ಸರ್ಕಾರ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ. ದೇಶಾದ್ಯಂತ ಕೊರೊನಾ ವೈರಸ್ ನ ಪ್ರಕೋಪವನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ವಿದೇಶದಿಂದ ಭಾರತಕ್ಕೆ ಆಗಮಿಸುವವರ ವಿಜಾ ಅನ್ನು ಏಪ್ರಿಲ್ 15ರವರೆಗೆ ಅಮಾನತುಗೊಳಿಸಿದೆ. ಆದರೆ ಈ ನಿಷೇಧ ರಾಜಕೀಯ ನಾಯಕರು, ಅಧಿಕಾರಿಗಳು, ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳ ನೌಕರರಿಗೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮಾರ್ಚ್ 13, 2020 ರಿಂದ ಈ ನಿಷೇಧ ಜಾರಿಗೆ ಬರಲಿದೆ. ಸರ್ಕಾರದ ಈ ನಿರ್ಣಯದಿಂದ ಯಾವೊಬ್ಬ ವಿದೇಶಿ ಆಟಗಾರ ಏಪ್ರಿಲ್ 15ರವರೆಗೆ ಈ ಟೂರ್ನಿಯಲ್ಲಿ ಭಾಗವಹಿಸದಂತೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವೊಬ್ಬ ವಿದೇಶಿ ಆಟಗಾರ ಸುಮಾರು ಅರ್ಧ ತಿಂಗಳು ಅಂದರೆ ಏಪ್ರಿಲ್ 15ರವರೆಗೆ ಐಪಿಎಲ್ ಟೂರ್ನಿಯನ್ನು ಸೇರಲು ಸಾಧ್ಯವಾಗದಂತೆ ತಡೆಯಲಿದೆ.

ಇದಕ್ಕೂ ಮುನ್ನ, ಐಪಿಎಲ್ ಪಂದ್ಯವನ್ನು ನೋಡಲು ಯಾವುದೇ ಪ್ರೇಕ್ಷಕರು ಬರದಂತೆ ಪಂದ್ಯವನ್ನು ರದ್ದುಗೊಳಿಸಬಹುದು ಅಥವಾ ಟಿಕೆಟ್ ಮಾರಾಟವನ್ನು ನಿಷೇಧಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಏಕೆಂದರೆ ಇಂದಿನ ಪರಿಸ್ಥಿತಿಯಲ್ಲಿ, ಕರೋನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿದ್ದು ಇದರಿಂದ ಸೋಂಕು ವ್ಯಾಪಕವಾಗಿ ಹರಡಬಹುದು ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಕರೋನಾ ವೈರಸ್‌ನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ಕೇವಲ ಎರಡು ಆಯ್ಕೆಗಳಿವೆ - ಐಪಿಎಲ್ ಪಂದ್ಯಗಳನ್ನು ಮುಂದೂಡುವುದು ಅಥವಾ ಟೂರ್ನಿಯನ್ನು ಟಿವಿ ವೀಕ್ಷಕರಿಗೆ ಮಾತ್ರ ಸೀಮಿತಗೊಳಿಸುವುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಬುಧವಾರ ಹೇಳಿದ್ದಾರೆ. ಕರೋನಾ ವೈರಸ್ ಮತ್ತು ಐಪಿಎಲ್ ಪಂದ್ಯಗಳ ಬಗ್ಗೆ ರಾಜ್ಯ ಸಚಿವ ಸಂಪುಟ ಚರ್ಚಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿರುವ ಟೊಪೆ, "ಚರ್ಚೆಯ ಬಳಿಕ ನಮ್ಮ ಮುಂದೆ ಕೇವಲ ಎರಡು ಆಯ್ಕೆಗಳಿವೆ - ಒಂದು ಪಂದ್ಯಗಳನ್ನು ಮುಂದೂಡುವುದು ಅಥವಾ ಟಿಕೆಟ್ ಮಾರಾಟ ನಡೆಸದೆ ಪಂದ್ಯಗಳನ್ನು ಆಯೋಜಿಸುವುದು" ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿರುವ BCCI ಅಧ್ಯಕ್ಷ ಸೌರವ್ ಗಂಗೂಲಿ, IPL ತನ್ನ ನಿರ್ಧಾರಿತ ಸಮಯದಲ್ಲಿಯೇ ನಡೆಯಲಿದೆ ಎಂದು ಹೇಳಿದ್ದರು. ಮುಂದಿನ ವಾರ ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು BCCI ಜೊತೆಗೆ ಚರ್ಚೆ ಈ ಕುರಿತು ಅಂತಿಮ ನಿರ್ಣಯ ಕೈಗೊಳುವ ಸಾಧ್ಯತೆ ಇದೆ. ಈ ಬಾರಿಯ IPL ಮಾರ್ಚ್ 29ರಂದು ನಡೆಯಲಿದ್ದು, ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ನಡೆಯಲಿದೆ.

Trending News