Electric Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್!

Okaya Electric Faast F4 Price: ನೀವು ಈ ಸ್ಕೂಟರ್‌ಅನ್ನು NO Cost EMIನಲ್ಲಿಯೂ ಖರೀದಿಸಬಹುದು. 1 ವರ್ಷದ ಅವಧಿಗೆ 11 ಸಾವಿರ, 24 ತಿಂಗಳ ಅವಧಿಗೆ 6,500, 18 ತಿಂಗಳ ಅವಧಿಗೆ 8,300 ಪಾವತಿಸಬೇಕು. ಇದಲ್ಲದೆ 60 ಸಾವಿರ ರೂ. ಡೌನ್‌ ಪೇಮೆಂಟ್‌ ಮಾಡಿದ್ರೆ 24 ತಿಂಗಳ ಅವಧಿಗೆ 3 ಸಾವಿರ ರೂ. ಪಾವತಿಸಬೇಕು.  

Written by - Puttaraj K Alur | Last Updated : Jun 1, 2024, 01:03 PM IST
  • Okaya Electric Faast F4 ಸ್ಕೂಟರ್‌ ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್‌
  • ಬರೋಬ್ಬರಿ 34 ಸಾವಿರ ರೂ. ರಿಯಾಯಿತಿಯೊಂದಿಗೆ ಇವಿ ಸ್ಕೂಟರ್‌ ಖರೀದಿಸಿರಿ
  • ಫ್ಲಿಪ್‌ಕಾರ್ಟ್‌ನಲ್ಲಿ ನೀವೂ ಸಹ NO Cost EMI ಮೂಲಕ ಸ್ಕೂಟರ್ ಖರೀದಿಸಿರಿ
Electric Scooter Offer: ಈ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್!   title=
Okaya Electric Faast F4

Electric Scooter: ಇಂದು ಬಹುತೇಕರು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಈಗ ಇವಿ ಸ್ಕೂಟರ್‌ಗಳದ್ದೇ ರಾಜ್ಯಭಾರ ನಡೆಯುತ್ತಿದೆ. ವಿವಿಧ ಕಂಪನಿಗಳು ಹಲವಾರು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿರುವ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿವೆ. ಜನಸಾಮಾನ್ಯರ ಕೈಗೆಟುಕುವ ಬೆಲೆಯಲ್ಲಿ ಹಲವಾರು ಕಂಪನಿಗಳ ಇವಿ ಸ್ಕೂಟರ್‌ಗಳು ಲಭ್ಯವಿವೆ. ಜಪಾನ್‌ ಮೂಲದ Okaya EV ಕಂಪನಿಯು ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ಅತ್ಯಂತ ಕಡಿಮೆ ಬೆಲೆಗೆ ನೀವು ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿರುವ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಬಹುದು. ಹೌದು, ಪ್ರಮುಖ ಎಲೆಕ್ಟ್ರಿಕ್‌ ಸ್ಕೂಟರ್‌ ತಯಾರಿಕಾ ಕಂಪನಿಯಾಗಿರುವ Okaya EVಯು ತನ್ನ ವಿವಿಧ ಮಾದರಿಗಳಲ್ಲಿ ಭಾರೀ ರಿಯಾಯಿತಿ ಘೋಷಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿಯೇ ನೀವು ನಿಮ್ಮ ಫೋನ್‌ನಿಂದಲೇ ಈ ಸ್ಕೂಟರ್‌ಅನ್ನು ಬುಕ್‌ ಮಾಡಬಹುದು. Okaya Electric Faast F4 ಮಾದರಿಯ ಮೇಲೆ ಭರ್ಜರಿ ಡಿಸ್ಕೌಂಟ್‌ ಲಭ್ಯವಿದೆ. 

ಇದನ್ನೂ ಓದಿ: ಭಾರತದಲ್ಲಿ ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳು ಬ್ಯಾನ್..!

ಈ ಸ್ಕೂಟರ್‌ನ ಮೂಲಬೆಲೆ 1,50,112 ರೂ.(ಎಕ್ಸ್‌ ಶೋರೂಂ) ಇದೆ. ಆದರೆ ನೀವು ಇದನ್ನು ಶೇ.11ರಷ್ಟು ಫ್ಲ್ಯಾಟ್ ರಿಯಾಯಿತಿ ಮೂಲಕ ಕೇವಲ 1,32,500 ರೂ.ಗೆ ಖರೀದಿಸಬಹುದು. ಇದಲ್ಲದೆ ನೀವು ಕ್ರೆಡಿಟ್‌ ಕಾರ್ಡ್‌ ಆಫರ್‌ ಸಹ ಪಡೆಯಬಹುದು. Flipkart Axis Credit Card ಮೂಲಕ ನೀವು ಈ ಸ್ಕೂಟರ್‌ ಖರೀದಿಸಿದರೆ 16,125 ರೂ.ಗಳ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಒಟ್ಟಾರೆ ಈ ಸ್ಕೂಟರ್‌ ಖರೀದಿಯ ಮೇಲೆ ನಿಮಗೆ ಬರೋಬ್ಬರಿ 34 ಸಾವಿರ ರೂ. ಡಿಸ್ಕೌಂಟ್ ದೊರೆಯಲಿದೆ. 

ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಕೂಟರ್‌ಅನ್ನು ಬುಕ್‌ ಮಾಡಬಹುದು. ವಾಹನ ನೋಂದಣಿ ಮತ್ತು ವಿಮೆ ಶುಲ್ಕವನ್ನು ನೀವು ಹೆಚ್ಚುವರಿಯಾಗಿ ಪಾವತಿಸಬೇಕು. ಈ ಸ್ಕೂಟರ್‌ 3 ವರ್ಷದವರೆಗೆ ಅಥವಾ 30,000KM ವಾರಂಟಿಯೊಂದಿಗೆ ಬರುತ್ತದೆ. ಈ ಗ್ಯಾರಂಟಿ ಬ್ಯಾಟರಿಗೆ ಅನ್ವಯಿಸುತ್ತದೆ. ಈ ಸ್ಕೂಟರ್‌ಅನ್ನು ಒಂದು ಬಾರಿ ಚಾರ್ಜ್‌ ಮಾಡಿದ್ರೆ ನೀವು 160KM ಕ್ರಮಿಸಬಹುದು. ಇದರ ಗರಿಷ್ಠ ವೇಗ ಗಂಟೆಗೆ 70KM ಇದೆ. ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಲು ಸುಮಾರು 5 ಗಂಟೆ ತೆಗೆದುಕೊಳ್ಳುತ್ತದೆ. ಇದು ಟ್ಯೂಬ್ಲೆಸ್ ಟೈರ್‌ಗಳನ್ನು ಹೊಂದಿದ್ದು, ಡ್ಯುಯಲ್ LED ಹೆಡ್‌ಲೈಟ್‌ಗಳು, ಸ್ಪ್ರಿಂ ಗ್ಲೋಡೆಡ್ ರಿಯರ್ ಸಸ್ಪೆನ್ಷನ್, ಟೆಲಿಸ್ಕೋ ಪಿಕ್ಫೋರ್ಕ್ ಫ್ರಂಟ್ ಸಸ್ಪೆನ್ಷನ್, ರಿವರ್ಸ್ ಬಟನ್, ರಿಮೋಟ್ ಸ್ಟಾರ್ಟ್ ಮತ್ತು ಸ್ಟಾಪ್‌ ಮುಂತಾದ ಹಲವಾರ ವೈಶಿಷ್ಟ್ಯಗಳನ್ನು ಹೊಂದಿದೆ.   

ಇದನ್ನೂ ಓದಿ: LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ.. ಈಗ ಬೆಲೆ ಎಷ್ಟು ಗೊತ್ತಾ?

ನೀವು ಸ್ಕೂಟರ್‌ಅನ್ನು ಸುಲಭ NO Cost EMIನಲ್ಲಿಯೂ ಖರೀದಿಸಬಹುದು. 1 ವರ್ಷದ ಅವಧಿಗೆ 11 ಸಾವಿರ, 24 ತಿಂಗಳ ಅವಧಿಗೆ 6,500, 18 ತಿಂಗಳ ಅವಧಿಗೆ 8,300 ಪಾವತಿಸಬೇಕು. ಇದಲ್ಲದೆ 60 ಸಾವಿರ ರೂ. ಡೌನ್‌ ಪೇಮೆಂಟ್‌ ಮಾಡಿದ್ರೆ 24 ತಿಂಗಳ ಅವಧಿಗೆ 3 ಸಾವಿರ ರೂ. ಪಾವತಿಸಬೇಕು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News