ಮುಂಬೈ ತಂಡದಲ್ಲಿ ಮತ್ತೆ ಗೊಂದಲ! ಹಾರ್ದಿಕ್ ಪಾಂಡ್ಯ ವಿರುದ್ಧ ಹರಿಹಾಯ್ದು ಪೋಸ್ಟ್ ಶೇರ್ ಮಾಡಿದ ಅದೇ ತಂಡದ ಆಟಗಾರ

Mohammad Nabi Statement About Hardik Pandya: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಜಯಭೇರಿ ಬಾರಿಸಿದ್ದರೂ, ಅವಕಾಶಗಳು ಕಡಿಮೆಯಾಗಿ ನಿರಾಸೆಯಾಗಿದೆ ಎಂದು ಹೇಳಬಹುದು.

Written by - Bhavishya Shetty | Last Updated : Apr 19, 2024, 09:57 PM IST
    • ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್ ರೂಂನಲ್ಲಿ ಬಿರುಕುಗಳು ಮೂಡಿವೆಯೇ?
    • ಅಫ್ಘಾನಿಸ್ತಾನ ಆಲ್‌’ರೌಂಡರ್ ಮೊಹಮ್ಮದ್ ನಬಿ ಹಂಚಿಕೊಂಡ ಸ್ಟೋರಿ
    • ದೆಹಲಿ ವಿರುದ್ಧ ಮುಂಬೈ ಇಂಡಿಯನ್ಸ್‌’ಗೆ ಪಾದಾರ್ಪಣೆ ಮಾಡಿರುವ ನಬಿ
ಮುಂಬೈ ತಂಡದಲ್ಲಿ ಮತ್ತೆ ಗೊಂದಲ! ಹಾರ್ದಿಕ್ ಪಾಂಡ್ಯ ವಿರುದ್ಧ ಹರಿಹಾಯ್ದು ಪೋಸ್ಟ್ ಶೇರ್ ಮಾಡಿದ ಅದೇ ತಂಡದ ಆಟಗಾರ title=
File Photo

Mumbai Indians Hardik Pandya: ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್ ರೂಂನಲ್ಲಿ ಬಿರುಕುಗಳು ಮೂಡಿವೆಯೇ? ಎಂಬ ಗೊಂದಲ ಯಾರಲ್ಲಾದರೂ ಇದ್ದರೆ, ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನ ನಂತರ ಅಫ್ಘಾನಿಸ್ತಾನ ಆಲ್‌’ರೌಂಡರ್ ಮೊಹಮ್ಮದ್ ನಬಿ ಹಂಚಿಕೊಂಡ ಸ್ಟೋರಿಯನ್ನೊಮ್ಮೆ ನೋಡಬೇಕು.

ಇದನ್ನೂ ಓದಿ: ಪಾಕ್ ವಿರುದ್ಧ ಟೀಂ ಇಂಡಿಯಾ ತಟಸ್ಥ ಸ್ಥಳದಲ್ಲಿ ಟೆಸ್ಟ್ ಆಡಲಿದೆಯೇ? ಸ್ಪಷ್ಟನೆ ನೀಡಿದ ರೋಹಿತ್ ಶರ್ಮಾ

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಜಯಭೇರಿ ಬಾರಿಸಿದ್ದರೂ, ಅವಕಾಶಗಳು ಕಡಿಮೆಯಾಗಿ ನಿರಾಸೆಯಾಗಿದೆ ಎಂದು ಹೇಳಬಹುದು. ಅದೇ ಸಮಯದಲ್ಲಿ ಅಭಿಮಾನಿಯೊಬ್ಬ ಮುಂಬೈ ಇಂಡಿಯನ್ಸ್ ಅನ್ನು Instagramನಲ್ಲಿ ಟ್ಯಾಗ್ ಮಾಡಿ, "ನಿಮ್ಮ ನಾಯಕನ ಕೆಲವು ನಿರ್ಧಾರಗಳು ಜನರಿಗೆ ತುಂಬಾ ವಿಚಿತ್ರ ಮತ್ತು ಆಶ್ಚರ್ಯಕರವಾಗಿವೆ" ಎಂದು ಬರೆದಿದ್ದಾರೆ. ಇದನ್ನು ಮೊಹಮ್ಮದ್ ನಬಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ದೆಹಲಿ ವಿರುದ್ಧ ಮುಂಬೈ ಇಂಡಿಯನ್ಸ್‌’ಗೆ ಪಾದಾರ್ಪಣೆ ಮಾಡಿರುವ ನಬಿ 2 ಓವರ್‌’ಗಳನ್ನು ಬೌಲ್ ಮಾಡಿ 8.50 ಎಕಾನಮಿ ದರದಲ್ಲಿ ರನ್ ನೀಡಿದ್ದರು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಗೆದ್ದಾಗ, ಆ ಪಂದ್ಯದಲ್ಲಿ ನಬಿ ಕೇವಲ ಒಂದು ಓವರ್ ಬೌಲಿಂಗ್ ಮಾಡಬೇಕಾಯಿತು. ಅಂದು 7 ರನ್ ನೀಡಿದ್ದರು. ಚೆನ್ನೈ ವಿರುದ್ಧ 6.33 ಎಕಾನಮಿ ದರದಲ್ಲಿ 3 ಓವರ್ ಬೌಲ್ ಮಾಡಿದರು. ಅದರ ನಂತರ ಪಂಜಾಬ್ ವಿರುದ್ಧ ಬೌಲಿಂಗ್ ಮಾಡಲು ಅವರನ್ನು ಕರೆಯಲಿಲ್ಲ.

 

 

ಇದನ್ನೂ ಓದಿ: ಈ ಎಲೆ ಎಲ್ಲೇ ಸಿಕ್ಕರೂ ಬಿಡಬೇಡಿ: ಇದನೊಮ್ಮೆ ಜಗಿದರೆ ಸಾಕು ಚಿಟಿಕೆಯಲ್ಲಿ ಫುಲ್ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್!

ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ, ಮುಂಬೈನ ಎಲ್ಲಾ ಬೌಲರ್‌ಗಳು ದುಬಾರಿ ಎಂದು ಸಾಬೀತುಪಡಿಸಿದ್ದಾರೆ. ನಬಿ ರನ್‌’ಗಳ ವೇಗವನ್ನು ತಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಹಲವು ಸೀಸನ್‌’ಗಳಿಂದ ನಬಿಗೆ ಐಪಿಎಲ್‌ನಲ್ಲಿ ಅವಕಾಶ ಸಿಕ್ಕಿರಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News