ಮೂರನೇ ಟೆಸ್ಟ್‌ಗೂ ಮುನ್ನ ಹೊಸ ಅವತಾರದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ.. ಧೋನಿಯನ್ನು ನೆನಪಿಸಿಕೊಂಡ ಫ್ಯಾನ್ಸ್‌!

Rohit Sharma New Style: ಟೀ ಇಂಡಿಯಾದ ನಾಯಕ ರೋಹಿತ್‌ ಶರ್ಮಾ ಮೂರನೇ ಟೆಸ್ಟ್‌ಗೂ ಮುನ್ನ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.. ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಈ ಸಂಬಂಧ ವಿಡಿಯೋ ವೈರಲ್‌ ಆಗಿದೆ..   

Written by - Savita M B | Last Updated : Feb 13, 2024, 05:49 PM IST
  • ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಗುಜರಾತ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ
  • ಫೆಬ್ರವರಿ 15 ರಿಂದ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಫೆಬ್ರವರಿ 19 ರವರೆಗೆ ನಡೆಯಲಿದೆ.
  • ರೋಹಿತ್ ಶರ್ಮಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ
ಮೂರನೇ ಟೆಸ್ಟ್‌ಗೂ ಮುನ್ನ ಹೊಸ ಅವತಾರದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ.. ಧೋನಿಯನ್ನು ನೆನಪಿಸಿಕೊಂಡ ಫ್ಯಾನ್ಸ್‌!  title=

Rohit Sharma: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಗುಜರಾತ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯಲಿದೆ. ಫೆಬ್ರವರಿ 15 ರಿಂದ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಫೆಬ್ರವರಿ 19 ರವರೆಗೆ ನಡೆಯಲಿದೆ. ಕೊನೆಯ 3 ಟೆಸ್ಟ್‌ಗಳ ತಂಡವನ್ನೂ ಪ್ರಕಟಿಸಲಾಗಿದ್ದು.. ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ಈ ಬಾರಿ ಮೈದಾನದಲ್ಲಿ ಕಾಣಸಿಗುವುದಿಲ್ಲ.

ಇದೀಗ ಮೂರನೇ ಟೆಸ್ಟ್‌ಗೂ ಮುನ್ನ ರೋಹಿತ್ ಶರ್ಮಾ ತಮ್ಮ ತಂಡದೊಂದಿಗೆ ರೋಸೆಕೋಟ್‌ಗೆ ತೆರಳುತ್ತಿದ್ದು... ಆ ಸಮಯದಲ್ಲಿ ಅವರು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ... ಸದ್ಯ ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. 

ಇದನ್ನೂ ಓದಿ-ಅಂದು ವಿರಾಟ್ ಮೆನೇಜರ್… ಇಂದು ಈ ಕ್ರಿಕೆಟಿಗನ ಮುದ್ದಿನ ಮಡದಿ: 5 ಮಿಲಿಯನ್’ಗೂ ಅಧಿಕ ಸಂಪತ್ತಿನ ಒಡತಿ ಈ ಬಾಲಕಿ ಯಾರೆಂದು ಗೆಸ್ ಮಾಡಿ

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ರೋಹಿತ್ ಶರ್ಮಾ ತಂಡದೊಂದಿಗೆ ರಾಜ್‌ಕೋಟ್‌ಗೆ ಹೋಗುತ್ತಿರುವುದು ಕಂಡುಬಂದಿದ್ದು.. ಮುಂಬೈ ವಿಮಾನ ನಿಲ್ದಾಣದಲ್ಲಿ ಈ ವಿಡಿಯೋ ಸೆರೆಹಿಡಿಯಲಾಗಿದೆ. ಅದರಲ್ಲಿ ರೋಹಿತ್ ಶರ್ಮಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.. ಹೌದು ಕ್ಯಾಪ್ಟನ್‌ ರೋಹಿತ್ ಅವರು ತಮ್ಮ ಕೂದಲನ್ನು ಕತ್ತರಿಸಿಕೊಂಡು ಹೊಸ ಹೇರ್‌ ಸ್ಟೈಲ್‌ನೊಂದಿಗೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ..  ಸದ್ಯ ರೋಹಿತ್ ಅವರ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಮಹೇಂದ್ರ ಸಿಂಗ್ ಧೋನಿಯನ್ನು ನೆನಪಿಸಿಕೊಂಡಿದ್ದಾರೆ.. ಏಕೆಂದರೆ ಕೆಲ ದಿನಗಳ ಹಿಂದೆ ಧೋನಿ ಕೂಡ ಇದೇ ರೀತಿಯ ಹೇರ್ ಸ್ಟೈಲ್ ಮಾಡಿಕೊಂಡಿದ್ದರು.

ಇದನ್ನೂ ಓದಿ-“ಈ ಆಟಗಾರ ತಂಡದಲ್ಲಿಲ್ಲ, ನಿಮಗೆ ಸರಣಿ ಗೆಲ್ಲೋಕೆ ಇದೇ ಸುವರ್ಣವಕಾಶ” – ಇಂಗ್ಲೆಂಡ್ ತಂಡಕ್ಕೆ ಸಲಹೆ ನೀಡಿದ ಸ್ಟುವರ್ಟ್ ಬ್ರಾಡ್

ಇನ್ನು ಇದುವರೆಗಿನ ಸರಣಿಯಲ್ಲಿ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಿಲ್ಲ. ರೋಹಿತ್ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 24 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 39 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ 28 ರನ್‌ಗಳಿಂದ ಸೋತಿತ್ತು. ಅದೇ ಸಮಯದಲ್ಲಿ, ಎರಡನೇ ಟೆಸ್ಟ್‌ನಲ್ಲೂ ರೋಹಿತ್ ಶರ್ಮಾ ಅವರ ಬ್ಯಾಟ್ ಮೌನವಾಗಿತ್ತು. ರೋಹಿತ್ ಎರಡನೇ ಟೆಸ್ಟ್‌ನ ಮೊದಲ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 14 ಮತ್ತು 13 ರನ್ ಗಳಿಸಿದ್ದರು. ಮೂರನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನವನ್ನು ನೀಡುತ್ತಾರೆಯೇ ಎನ್ನುವುದು ಈಗ ಕುತೂಹಲಕಾರಿಯಾದ ವಿಷಯವಾಗಿದೆ.. 

ಕೊನೆಯ 3 ಟೆಸ್ಟ್‌ಗಳಿಗೆ ಸಜ್ಜಾದ ಭಾರತ ತಂಡ: ರೋಹಿತ್ ಶರ್ಮಾ (ಕ್ಯಾಪ್ಟನ್), ಜಸ್ಪ್ರೀತ್ ಬುಮ್ರಾ , ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಕೆಎಲ್ ರಾಹುಲ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ಡಬ್ಲ್ಯುಕೆ), ಕೆಎಸ್ ಭರತ್ (ಡಬ್ಲ್ಯುಕೆ) )., ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News