ನವದೆಹಲಿ: 2032 ರ ಒಲಿಂಪಿಕ್ಸ್ ಆತಿಥ್ಯ ಈಗ ಆಸ್ಟ್ರೇಲಿಯಾದ ಬ್ರಿಸ್ಬೇನ್ ಪಾಲಾಗಿದೆ.ಆ ಮೂಲಕ ಈಗ ಸಿಡ್ನಿ ಮತ್ತು ಮೆಲ್ಬೋರ್ನ್ ನಂತರ ಓಲಂಪಿಕ್ಸ್ ಆತಿಥ್ಯ ವಹಿಸಲಿರುವ ಆಸ್ಟ್ರೇಲಿಯಾ ಮೂರನೇ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
'35 ನೇ ಒಲಿಂಪಿಯಾಡ್ ಕ್ರೀಡಾಕೂಟವನ್ನು ಆಸ್ಟ್ರೇಲಿಯಾದ ಬ್ರಿಸ್ಬೇನ್‌ಗೆ ನೀಡಲಾಗುತ್ತದೆ" ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಟೋಕಿಯೊ (Tokyo)ದಲ್ಲಿ ಮತದಾನದ ನಂತರ ಹೇಳಿದರು.ಐಒಸಿ ಅಧಿವೇಶನದಲ್ಲಿ ಬ್ರಿಸ್ಬೇನ್ ಪ್ರತಿನಿಧಿಗಳ ಹರ್ಷೋದ್ಗಾರದಿಂದ ಈ ಘೋಷಣೆಯನ್ನು ಸ್ವಾಗತಿಸಲಾಯಿತು ಮತ್ತು ಆಸ್ಟ್ರೇಲಿಯಾದ ನಗರದಲ್ಲಿ ಪಟಾಕಿ ಸಿಡಿಸಲಾಯಿತು.
ಇದನ್ನೂ ಓದಿ: Sri Lanka vs India, 1st ODI: ಧವನ್,ಕಿಶನ್ ಭರ್ಜರಿ ಬ್ಯಾಟಿಂಗ್, ಭಾರತಕ್ಕೆ 7 ವಿಕೆಟ್ ಗಳ ಜಯ
ಜೂನ್‌ನಲ್ಲಿ ಐಒಸಿಯ 15ಸ ಸದಸ್ಯರ ಕಾರ್ಯನಿರ್ವಾಹಕ ಮಂಡಳಿಯು 2032 ರ ಏಕ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಪ್ರಸ್ತಾಪಿಸಿದ ನಂತರ ಬ್ರಿಸ್ಬೇನ್‌ನ ಗೆಲುವು ನಿಶ್ಚಿತವಾಯಿತು.ಐಒಸಿ ಈಗ ಮುಂದಿನ ಮೂರು ಬೇಸಿಗೆ ಒಲಿಂಪಿಕ್ಸ್ ಗಳನ್ನು 2024 ರಲ್ಲಿ ಪ್ಯಾರಿಸ್ ಮತ್ತು 2028 ರಲ್ಲಿ ಲಾಸ್ ಏಂಜಲೀಸ್ ಆತಿಥ್ಯ ವಹಿಸಲಿವೆ.
'ಯಶಸ್ವಿ ಕ್ರೀಡಾಕೂಟವನ್ನು ನಡೆಸುವುದು ಹೇಗೆ ಎನ್ನುವುದು ನಮಗೆ ತಿಳಿದಿದೆ' ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಮತದಾನದ ಮೊದಲು ಕ್ಯಾನ್‌ಬೆರಾದಲ್ಲಿ ಹೇಳಿದರು.
ಇದನ್ನೂ ಓದಿ: Tokyo Olympic 2020: ಸಾನಿಯಾ ಮಿರ್ಜಾ ಮಸ್ತ್ ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್
ಆಸ್ಟ್ರೇಲಿಯಾ ಈಗಾಗಲೇ ಎರಡು ಬಾರಿ ಒಲಿಂಪಿಕ್ಸ್ (Olympics) ಗೆ ಆತಿಥ್ಯ ವಹಿಸಿದೆ, 1956 ರಲ್ಲಿ ಮೆಲ್ಬೋರ್ನ್‌ನಲ್ಲಿ ಮತ್ತು 2000 ರಲ್ಲಿ ಸಿಡ್ನಿಯಲ್ಲಿ ನಡೆದ ಓಲಂಪಿಕ್ಸ್ ಇತ್ತೀಚಿನ ಇತಿಹಾಸದಲ್ಲಿ ನಡೆದ ಅತ್ಯಂತ ಯಶಸ್ವಿ ಕ್ರೀಡಾಕೂಟವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ