ಭಾರತದ ಮಾಜಿ ಕ್ರಿಕೆಟಿಗ ಬಿಶನ್ ಸಿಂಗ್ ಬೇಡಿ ನಿಧನ

Bishan Singh Bedi Passed Away: ಬಿಶನ್ ಸಿಂಗ್ ಬೇಡಿ ಅವರು ಪಂಜಾಬ್‌ನ ಅಮೃತಸರದಲ್ಲಿ 25 ಸೆಪ್ಟೆಂಬರ್ 1946 ರಂದು ಜನಿಸಿದರು. ಅವರು ತಮ್ಮ 77 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. 

Written by - Ranjitha R K | Last Updated : Oct 23, 2023, 04:32 PM IST
  • ಮಾಜಿ ಕ್ರಿಕೆಟಿಗ ಬಿಶನ್ ಸಿಂಗ್ ಬೇಡಿ ನಿಧನ
  • 77 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಬಿಶನ್ ಸಿಂಗ್ ಬೇಡಿ
  • 1976ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು

Trending Photos

ಭಾರತದ ಮಾಜಿ ಕ್ರಿಕೆಟಿಗ ಬಿಶನ್ ಸಿಂಗ್ ಬೇಡಿ ನಿಧನ title=

Bishan Singh Bedi Passed Away : ಭಾರತದ ಮಾಜಿ ಕ್ರಿಕೆಟಿಗ ಬಿಶನ್ ಸಿಂಗ್ ಬೇಡಿ ನಿಧನರಾಗಿದ್ದಾರೆ. ಬಿಶನ್ ಸಿಂಗ್ ಬೇಡಿ 1966 ರಿಂದ 1979 ರವರೆಗೆ ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದರು. ಬಿಶನ್ ಸಿಂಗ್ ಬೇಡಿ 22 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ಬಿಶನ್ ಸಿಂಗ್ ಬೇಡಿ ಭಾರತ ಪರ 67 ಟೆಸ್ಟ್ ಪಂದ್ಯಗಳಲ್ಲಿ 266 ವಿಕೆಟ್ ಪಡೆದಿದ್ದಾರೆ. ಬಿಶನ್ ಸಿಂಗ್ ಬೇಡಿ ಭಾರತ ಪರ 10 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 7 ವಿಕೆಟ್ ಪಡೆದಿದ್ದಾರೆ.

77 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಬಿಶನ್ ಸಿಂಗ್ ಬೇಡಿ : 
ಬಿಶನ್ ಸಿಂಗ್ ಬೇಡಿ ಅವರು ಪಂಜಾಬ್‌ನ ಅಮೃತಸರದಲ್ಲಿ 25 ಸೆಪ್ಟೆಂಬರ್ 1946 ರಂದು ಜನಿಸಿದರು. ಅವರು ತಮ್ಮ 77 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಬಿಷನ್ ಸಿಂಗ್ ಬೇಡಿ 12 ವರ್ಷಗಳ ಕಾಲ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಬಿಶನ್ ಸಿಂಗ್ ಬೇಡಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ 1560 ವಿಕೆಟ್ ಪಡೆದಿದ್ದರು. 

ಇದನ್ನೂ ಓದಿ : ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಅಕ್ಕ ದೇಶದ ಪ್ರಖ್ಯಾತ ಉದ್ಯಮಿ: ಯಾರು ಗೊತ್ತಾ ಆ ಚೆಲುವೆ?

ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರು :
ಬಿಶನ್ ಸಿಂಗ್ ಬೇಡಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಸ್ಪಿನ್ನರ್‌ ಎಂದು ಹೆಸರುವಾಸಿಯಾಗಿದ್ದರು. ಭಾರತ ಕ್ರಿಕೆಟ್ ತಂಡಕ್ಕೆ ಸ್ವಂತವಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. 

1976ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು : 
ಬಿಶನ್ ಸಿಂಗ್ ಬೇಡಿ ಅವರನ್ನು 1976 ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರನ್ನಾಗಿ ಮಾಡಲಾಗಿತ್ತು. ಮನ್ಸೂರ್ ಅಲಿ ಖಾನ್ ಪಟೌಡಿ ನಂತರ ಅವರು ಭಾರತದ ತಂಡದ ನಾಯಕರಾಗಿದ್ದರು. 1976 ರಲ್ಲಿ ಬಿಶನ್ ಸಿಂಗ್ ಬೇಡಿ ನಾಯಕತ್ವದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿತು. ಇದರ ನಂತರ, ಭಾರತವು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತ್ತು. 

ಇದನ್ನೂ ಓದಿ : ಸತತ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ವಿಶ್ವಕಪ್ ಪಾಯಿಂಟ್ ಟೇಬಲ್’ನಲ್ಲಿ ಎಷ್ಟನೇ ಸ್ಥಾನದಲ್ಲಿದೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News