ನವದೆಹಲಿ: ಬಿಸಿಸಿಐ ಶನಿವಾರದಂದು ಜಸ್ಪ್ರಿತ್ ಬುಮರಾ, ಮೊಹಮ್ಮದ್ ಶಮಿ,ರವೀಂದ್ರ ಜಡೇಜಾ ಮತ್ತು ಪೂನಮ್ ಯಾದವ್ ಅವರ ಹೆಸರುಗಳನ್ನು ಅರ್ಜುನ್ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಮಾಜಿ ಕ್ರಿಕೆಟ್ ಆಟಗಾರ ಸಾಬಾ ಕರೀಂನ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ನಾಲ್ವರು ಆಟಗಾರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿದೆ. ಈಗ ಶಿಫಾರಸ್ಸು ಮಾಡಿರುವ ಆಟಗಾರರಲ್ಲಿ ಬುಮ್ರಾ ಅವರು ವಿಶ್ವಕಪ್ ನಲ್ಲಿ ಬೌಲಿಂಗ್ ದಾಳಿಯ ನೇತೃತ್ವವನ್ನು ವಹಿಸಲಿದ್ದಾರೆ.ಅಲ್ಲದೆ ಇತ್ತೀಚಿಗಿನ ದಿನಗಳಲ್ಲಿ ತಮ್ಮ ಬೌಲಿಂಗ್ ಪ್ರದರ್ಶನದಿಂದ ಅವರು ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.
Board of Control for Cricket in India (BCCI) has recommended Poonam Yadav, Mohammed Shami, Jasprit Bumrah and Ravindra Jadeja for Arjuna Award. pic.twitter.com/7I3osdqy0M
— ANI (@ANI) April 27, 2019
ಇನ್ನು ಮೊಹಮ್ಮದ್ ಶಮಿ ಕೂಡ ಸೀಮಿತ ಓವರ್ ಕ್ರಿಕೆಟ್ ನಲ್ಲಿ ಗಮನಾರ್ಹ ಪ್ರದರ್ಶನವನ್ನು ನೀಡಿದ್ದಾರೆ. ಇನ್ನು ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ ಗೆ ಮಾತ್ರ ಸೀಮಿತವಾಗಿದ್ದ ರವೀಂದ್ರ ಜಡೇಜಾ ಈಗ ಮತ್ತೆ ಏಕದಿನದ ಕ್ರಿಕೆಟ್ ಗೆ ಮರಳಿದ್ದಾರೆ. ಅಲ್ಲದೆ ವಿಶ್ವಕಪ್ ನ 15 ಸದಸ್ಯರ ಪಟ್ಟಿಯಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಇನ್ನು ಪೂನಂ ಯಾದವ್ ಅವರನ್ನು ಮಹಿಳಾ ಕ್ರಿಕೆಟ್ ತಂಡದಿಂದ ನಾಮ ನಿರ್ದೇಶನ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.