IPL ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಈ ಆಟಗಾರ ಬಿಕರಿ: SRHಗೆ ಎಂಟ್ರಿಕೊಟ್ಟ ವಿಶ್ವಕಪ್ ಹೀರೋ

Pat Cummins to SRH: ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಮಾಜಿ ಚಾಂಪಿಯನ್ ಸನ್‌ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) 20.5 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಮೂಲಕ ಪ್ರತಿಷ್ಠಿತ ಟಿ20 ಲೀಗ್‌’ನ ಅತ್ಯಂತ ದುಬಾರಿ ಕ್ರಿಕೆಟಿಗರಾಗಿದ್ದಾರೆ.

Written by - Bhavishya Shetty | Last Updated : Dec 19, 2023, 03:10 PM IST
    • ಆಸ್ಟ್ರೇಲಿಯಾವನ್ನು ಏಕದಿನ ವಿಶ್ವಕಪ್’ನಲ್ಲಿ ಗೆಲ್ಲುವಂತೆ ಮಾಡಿದ್ದ ಪ್ಯಾಟ್ ಕಮಿನ್ಸ್
    • ಐಪಿಎಲ್ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ದುಬಾರಿ ಆಟಗಾರ
    • ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ ಹರಾಜು
IPL ಇತಿಹಾಸದಲ್ಲೇ ಅತ್ಯಂತ ದುಬಾರಿ ಬೆಲೆಗೆ ಈ ಆಟಗಾರ ಬಿಕರಿ: SRHಗೆ ಎಂಟ್ರಿಕೊಟ್ಟ ವಿಶ್ವಕಪ್ ಹೀರೋ title=
Sunrisers Hyderabad

Pat Cummins to SRH: ಇತ್ತೀಚೆಗಷ್ಟೇ ತಮ್ಮ ನಾಯಕತ್ವದಲ್ಲಿ ಆಸ್ಟ್ರೇಲಿಯಾವನ್ನು ಏಕದಿನ ವಿಶ್ವಕಪ್’ನಲ್ಲಿ ಗೆಲ್ಲುವಂತೆ ಮಾಡಿದ್ದ ಪೇಸರ್ ಪ್ಯಾಟ್ ಕಮಿನ್ಸ್, ಐಪಿಎಲ್ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಮಾಜಿ ಚಾಂಪಿಯನ್ ಸನ್‌ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) 20.5 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಮೂಲಕ ಪ್ರತಿಷ್ಠಿತ ಟಿ20 ಲೀಗ್‌’ನ ಅತ್ಯಂತ ದುಬಾರಿ ಕ್ರಿಕೆಟಿಗರಾಗಿದ್ದಾರೆ.

ಇದನ್ನೂ ಓದಿ: ಬಂಗಾರ ಖರೀದಿಸಲು ಇದುವೇ ಬೆಸ್ಟ್ ಟೈಮ್ ! ಎಷ್ಟಿದೆ 10 ಗ್ರಾಂ ಚಿನ್ನದ ದರ ? 

ಪ್ಯಾಟ್ ಕಮ್ಮಿನ್ಸ್ ಮೂಲ ಬೆಲೆ 2 ಕೋಟಿ ರೂ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಬಿಡ್ಡಿಂಗ್ ಆರಂಭವಾಗಿತ್ತು. ಬೆಲೆ ಏರಿಕೆಯಾಗುತ್ತಲೇ ಇದ್ದು, 4.8 ಕೋಟಿಯಿಂದ 7.40 ಕೋಟಿಗೆ ತಲುಪಿತು. ನಂತರ 8.4 ಕೋಟಿಗೆ ಮತ್ತೊಂದು ಜಿಗಿತವನ್ನು ಕಂಡಿತು. ಇದಾದ ನಂತರ ಈ ಎರಡೂ ತಂಡಗಳು ಬಿಡ್ಡಿಂಗ್ ನಿಲ್ಲಿಸಿತು. ಆ ವೇಳೆಗಾಗಲೇ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರವೇಶಿಸಿತು. ಈ ಇಬ್ಬರ ನಡುವೆ ಕೊನೆಯವರೆಗೂ ಬಿಡ್ಡಿಂಗ್ ಮುಂದುವರಿದಿದ್ದು, ಕಮ್ಮಿನ್ಸ್ ಬೆಲೆ 20 ಕೋಟಿ ದಾಟಿತು. ಅಂತಿಮವಾಗಿ ಹೈದರಾಬಾದ್ ಈ 'ಯುದ್ಧ'ವನ್ನು ಗೆದ್ದು, 20.5 ಕೋಟಿಗೆ ಕಮ್ಮಿನ್ಸ್ ಅವರನ್ನು ಖರೀದಿಸಿತು.

ಐಪಿಎಲ್-2023 ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಸ್ಯಾಮ್ ಕರ್ರಾನ್‌’ಗಾಗಿ 18.50 ಕೋಟಿ ರೂ. ನೀಡಿತ್ತು. ಇದೀಗ ಕಮ್ಮಿನ್ಸ್ ಆ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಅಂದಹಾಗೆ 2022ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ಪರ ಆಡುತ್ತಿದ್ದಾಗ ಪ್ಯಾಟ್ ಕಮಿನ್ಸ್ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದು ಐಪಿಎಲ್‌’ನಲ್ಲಿ ಜಂಟಿ ಎರಡನೇ ಅತಿ ವೇಗದ ಅರ್ಧಶತಕವಾಗಿದೆ. ಐಪಿಎಲ್‌’ನಲ್ಲಿ 42 ಪಂದ್ಯಗಳಲ್ಲಿ, ಕಮ್ಮಿನ್ಸ್ 8.54 ಎಕಾನಮಿ ದರದಲ್ಲಿ 45 ವಿಕೆಟ್‌’ಗಳನ್ನು ಪಡೆದಿದ್ದಲ್ಲದೆ, 359 ರನ್ ಗಳಿಸಿದರು.

ಇದನ್ನೂ ಓದಿ: Sreeleela: ಫುಲ್ ಫಾರ್ಮ್‌ನಲ್ಲಿರುವ ಶ್ರೀಲೀಲಾ.. ಸಿನಿಮಾದಿಂದ ದಿಢೀರ್ ಬ್ರೇಕ್?   

30 ವರ್ಷದ ಪ್ಯಾಟ್ ಕಮ್ಮಿನ್ಸ್ ಇದುವರೆಗೆ 56 ಟೆಸ್ಟ್, 88 ODI ಮತ್ತು 50 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌’ನಲ್ಲಿ ಒಟ್ಟು 242 ವಿಕೆಟ್‌, ಏಕದಿನದಲ್ಲಿ 141 ಮತ್ತು ಟಿ20 ಅಂತರರಾಷ್ಟ್ರೀಯ ಸ್ವರೂಪದಲ್ಲಿ 55 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20 ಮಾದರಿಯಲ್ಲಿ ಆಸ್ಟ್ರೇಲಿಯಾ ಪರ 15 ರನ್‌ಗಳಿಗೆ 3 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಸಾಧನೆಯಾಗಿದೆ. ಅವರ ಒಟ್ಟಾರೆ T20 ವೃತ್ತಿಜೀವನದಲ್ಲಿ, 3 ಅರ್ಧ ಶತಕಗಳ ಸಹಾಯದಿಂದ 693 ರನ್’ಗಳನ್ನು ಸೇರಿಸುವ ಮೂಲಕ 143 ವಿಕೆಟ್ಗಳನ್ನು ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News