Asia Cup 2022 : ಕ್ಯಾಪ್ಟನ್ ಶರ್ಮಾಗೆ ಟೆನ್ಷನ್ ಹೆಚ್ಚಿಸಿದ ದೀಪಕ್ ಹೂಡಾ!

ಭಾರತ ತಂಡದಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿಯಲು ಟೀಮ್ ಇಂಡಿಯಾದಲ್ಲಿ ಮೂವರು ಬಲಿಷ್ಠ ಆಟಗಾರರಿದ್ದಾರೆ.

Written by - Channabasava A Kashinakunti | Last Updated : Aug 25, 2022, 02:05 PM IST
  • ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆಗಸ್ಟ್ 28 ರಂದು
  • ಕ್ಯಾಪ್ಟನ್ ಶರ್ಮಾಗೆ ಟೆನ್ಷನ್ ಹೆಚ್ಚಿಸಿದ ದೀಪಕ್
  • ಈ ಆಟಗಾರರು ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಗಳು
Asia Cup 2022 : ಕ್ಯಾಪ್ಟನ್ ಶರ್ಮಾಗೆ ಟೆನ್ಷನ್ ಹೆಚ್ಚಿಸಿದ ದೀಪಕ್ ಹೂಡಾ! title=

India vs Pakistan : ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನೋಡಲು ಕಾಯುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ. ಏಷ್ಯಾಕಪ್‌ನಲ್ಲಿ ಭಾರತ 7ನೇ ಪ್ರಶಸ್ತಿ ಗೆದ್ದುಕೊಂಡಿದೆ. ಹಾಗೆ, ಪಾಕಿಸ್ತಾನ ತಂಡವು ಕೇವಲ ಎರಡು ಬಾರಿ ಈ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನವೇ ನಾಯಕ ರೋಹಿತ್ ಶರ್ಮಾ ತಂಡದ ಕಾಂಬಿನೇಷನ್ ನಲ್ಲಿ ಟೆನ್ಷನ್ ಹೆಚ್ಚಿದೆ. ಭಾರತ ತಂಡದಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿಯಲು ಟೀಮ್ ಇಂಡಿಯಾದಲ್ಲಿ ಮೂವರು ಬಲಿಷ್ಠ ಆಟಗಾರರಿದ್ದಾರೆ.

ಈ ಆಟಗಾರರು ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಗಳು

ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಏಷ್ಯಾಕಪ್‌ಗಾಗಿ ಭಾರತ ತಂಡದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ ಯಾರಿಗೆ ಅವಕಾಶ ನೀಡುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ. ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಕಿಲ್ಲರ್ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಪರಿಣತಿ ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ಐಪಿಎಲ್ 2022 ರಲ್ಲಿ ಅದ್ಭುತ ಆಟ ಪ್ರದರ್ಶಿಸುವ ಮೂಲಕ ಟೀಮ್ ಇಂಡಿಯಾಕ್ಕೆ ಮರಳಿದ್ದಾರೆ ಮತ್ತು ನಾಯಕ ರೋಹಿತ್ ಶರ್ಮಾ ಅವರ ವಿಶೇಷ ಆಟಗಾರರಲ್ಲಿ ಹಾರ್ದಿಕ್ ಅವರನ್ನು ಪರಿಗಣಿಸಲಾಗಿದೆ.

ಇದನ್ನೂ ಓದಿ : Asia Cup 2022 : ಟೀಂ ಇಂಡಿಯಾಗೆ ಹಂಗಾಮಿ 'ಹೆಡ್ ಕೋಚ್' ಆಗಿ ಲಕ್ಷ್ಮಣ್ ನೇಮಕ!

ಕ್ಯಾಪ್ಟನ್ ಶರ್ಮಾಗೆ ಟೆನ್ಷನ್ ಹೆಚ್ಚಿಸಿದ ದೀಪಕ್

ಯುಎಇ ಪಿಚ್‌ಗಳು ಯಾವಾಗಲೂ ಸ್ಪಿನ್ನರ್‌ಗಳಿಗೆ ಸಹಾಯಕವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸ್ಪಿನ್ ಆಲ್ ರೌಂಡರ್ ದೀಪಕ್ ಹೂಡಾ ಕೂಡ ಏಷ್ಯಾಕಪ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ ಜಿಂಬಾಬ್ವೆ ಪ್ರವಾಸದಲ್ಲಿ ಹೂಡಾ ಉತ್ತಮ ಪ್ರದರ್ಶನ ನೀಡಲಿಲ್ಲ. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಸೋತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಆಡುವ ಇಲೆವೆನ್ ನಲ್ಲಿ ಸ್ಥಾನ ಪಡೆಯುವುದು ಕಷ್ಟವಾಗುತ್ತಿದೆ.

ಸ್ಪರ್ಧಿಯಲ್ಲಿ ಈ ಆಟಗಾರನೂ..

ನಾಲ್ಕನೇ ಸ್ಥಾನಕ್ಕೆ ಇಳಿದ ದೊಡ್ಡ ಸ್ಪರ್ಧಿ ಸೂರ್ಯಕುಮಾರ್ ಯಾದವ್. ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ಧ ಬಿರುಸಿನ ಶತಕ ಬಾರಿಸಿದರು. ಇದಾದ ಬಳಿಕ ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಕೊಂಡಿಯಾದರು. ಸೂರ್ಯಕುಮಾರ್ ಯಾದವ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ಗೆ ಪ್ರಸಿದ್ಧರಾಗಿದ್ದಾರೆ. ಯಾವುದೇ ಬ್ಯಾಟಿಂಗ್ ಕ್ರಮಾಂಕವನ್ನು ಮುರಿಯುವ ಸಾಮರ್ಥ್ಯ ಅವರಲ್ಲಿದೆ. ಸೂರ್ಯಕುಮಾರ್ ಭಾರತ ಪರ 23 ಟಿ20 ಪಂದ್ಯಗಳಲ್ಲಿ 672 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Virat Kohli : ಕಳಪೆ ಫಾರ್ಮ್‌ ಹಿಂದಿನ ಕಾರಣ ಬಿಚ್ಚಿಟ್ಟ ಕಿಂಗ್ ಕೊಹ್ಲಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News