ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧೀ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹೈದರಾಬಾದ್ ಮತ್ತು ಮುಂಬೈ ನಡೆದ ಪಂದ್ಯದಲ್ಲಿ ಮುಂಬೈ ತಂಡವು 40 ರನ್ ಗಳ ಗೆಲುವು ಸಾಧಿಸಿದೆ.
Ro-Hitman in conversation with 6-strikes Alzarri @ImRo45 tries hard to get silent assassin Alzarri Joseph to express his feelings after taking a sensational 6-for on debut for @mipaltan 💙 Interview by @28anand #SRHvMI
📹 Full interview - https://t.co/5cZBwBlPpA pic.twitter.com/kYXYhUCsWX
— IndianPremierLeague (@IPL) April 7, 2019
ಟಾಸ್ ಗೆದ್ದು ಮುಂಬೈ ತಂಡಕ್ಕೆ ಹೈದಾರಾಬಾದ್ ಬ್ಯಾಟಿಂಗ್ ಅವಕಾಶ ನೀಡಿತು.ಇದರನ್ವಯ ಮೊದಲು ಬ್ಯಾಟಿಂಗ್ ಆರಂಭಿಸಿದ ಮುಂಬೈ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 136 ರನ್ ಗಳನ್ನು ಗಳಿಸಿತು.ಮುಂಬೈ ತಂಡದ ಪರ ಕಿರಣ್ ಪೋಲಾರ್ಡ್ಡ್ 46 ರನ್ ಗಳಿಸಿದ್ದು ಬಿಟ್ಟರೆ ಉಳಿದವರ್ಯಾರು ಕೂಡ 20 ರ ಗಡಿ ದಾಟಲಿಲ್ಲ.
Man of the Hour, Man of the Match, a name to remember - Alzarri Joseph 😯💙#OneFamily #CricketMeriJaan #MumbaiIndians pic.twitter.com/PbzlIgqQmf
— Mumbai Indians (@mipaltan) April 6, 2019
The debutant wreaks havoc here in Hyderabad as the @mipaltan win by 40 runs.
Alzarri Joseph with the best ever bowling figures in #VIVOIPL
Scorecard - https://t.co/kzyaotA3mE #SRHvsMI pic.twitter.com/bZECzrjZCE
— IndianPremierLeague (@IPL) April 6, 2019
ಈ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಹೈದರಾಬಾದ್ ತಂಡವು ಕೇವಲ 96 ರನ್ ಗಳಲ್ಲಿ ಸರ್ವಪತನವನ್ನು ಕಂಡಿತು. ತಂಡದ ಪರ ದೀಪಕ್ ಹೂಡಾ 20 ರನ್ ಗಳಿಸಿದ್ದೆ ವ್ಯಯಕ್ತಿಕವಾಗಿ ಅಧಿಕ ಮೊತ್ತವಾಗಿತ್ತು. ಮುಂಬೈ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅಲ್ಜಾರಿ ಜೋಸೆಫ್ 3.4 ಓವರ್ ಗಳಲ್ಲಿ ಕೇವಲ 12 ರನ್ ನೀಡಿ ಆರು ವಿಕೆಟ್ ಗಳನ್ನು ಕಬಳಿಸಿದರು.ಆ ಮೂಲಕ ಐಪಿಎಲ್ ಕ್ರಿಕೆಟ್ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸಾಧನೆ ಮಾಡಿದರು.