ರಣಜಿ ಪಂದ್ಯದ ವೇಳೆ ಹೈಡ್ರಾಮಾ…! ಔಟಾಗಿದ್ದರೂ ಮತ್ತೆ ಬ್ಯಾಟಿಂಗ್’ಗೆ ಬಂದ ಅಜಿಂಕ್ಯಾ ರಹಾನೆ

Ajinkya Rahane dismissal Controversy: ಮುಂಬೈ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿ ಆಡುತ್ತಿದ್ದಾಗ ರಹಾನೆ ಅವರ ವೈಯಕ್ತಿಕ ಸ್ಕೋರ್ 18 ರನ್ ಆಗಿತ್ತು. ಈ ವೇಳೆ ರಹಾನೆ ಚೆಂಡನ್ನು ಮಿಡ್-ಆನ್ ಕಡೆಗೆ ಓಡಿಸುವ ಮೂಲಕ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು.

Written by - Bhavishya Shetty | Last Updated : Feb 17, 2024, 11:38 AM IST
    • ಅಸ್ಸಾಂ ಮತ್ತು ಮುಂಬೈ ನಡುವೆ ನಡೆಯುತ್ತಿರುವ ರಣಜಿ ಪಂದ್ಯ
    • ಫೀಲ್ಡಿಂಗ್‌’ಗೆ ಅಡ್ಡಿಪಡಿಸಿದ ಕಾರಣಕ್ಕೆ ಔಟಾಗಿದ್ದ ಅಜಿಂಕ್ಯಾ ರಹಾನೆ
    • ಫೀಲ್ಡಿಂಗ್‌’ಗೆ ಅಡ್ಡಿಪಡಿಸಿದ್ದಕ್ಕಾಗಿ ರಹಾನೆ ಅವರನ್ನು ಔಟ್ ಮಾಡುವಂತೆ ಮನವಿ ಮಾಡಿದ ತಂಡ
ರಣಜಿ ಪಂದ್ಯದ ವೇಳೆ ಹೈಡ್ರಾಮಾ…! ಔಟಾಗಿದ್ದರೂ ಮತ್ತೆ ಬ್ಯಾಟಿಂಗ್’ಗೆ ಬಂದ ಅಜಿಂಕ್ಯಾ ರಹಾನೆ title=
Ajinkya Rahane

Ajinkya Rahane dismissal Controversy: ಅಸ್ಸಾಂ ಮತ್ತು ಮುಂಬೈ ನಡುವೆ ನಡೆಯುತ್ತಿರುವ ರಣಜಿ ಪಂದ್ಯದ ವೇಳೆ ಹೈಡ್ರಾಮ ನಡೆದಿತ್ತು. ಅಜಿಂಕ್ಯ ರಹಾನೆ ತಮ್ಮ 16 ವರ್ಷದ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಫೀಲ್ಡಿಂಗ್‌’ಗೆ ಅಡ್ಡಿಪಡಿಸಿದ ಕಾರಣಕ್ಕೆ ಔಟಾಗಿದ್ದರು. ಆದರೆ, ಕೆಲ ಸಮಯದ ನಂತರ ಅಸ್ಸಾಂ ತಂಡ ಮನವಿಯನ್ನು ಹಿಂಪಡೆದಿದ್ದು, ರಹಾನೆ ಮತ್ತೆ ಬ್ಯಾಟಿ’ಗ್'ಗೆ ಆಗಮಿಸಿದ್ದರು.

ಇದನ್ನೂ ಓದಿ: Migraine Pain Relief Tips:ಮೈಗ್ರೇನ್ ತಲೆನೋವನ್ನು ತೊಡೆದುಹಾಕಲು ಈ ಟಿಪ್ಸ್‌ ಟ್ರೈ ಮಾಡಿ..!

ಮುಂಬೈ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿ ಆಡುತ್ತಿದ್ದಾಗ ರಹಾನೆ ಅವರ ವೈಯಕ್ತಿಕ ಸ್ಕೋರ್ 18 ರನ್ ಆಗಿತ್ತು. ಈ ವೇಳೆ ರಹಾನೆ ಚೆಂಡನ್ನು ಮಿಡ್-ಆನ್ ಕಡೆಗೆ ಓಡಿಸುವ ಮೂಲಕ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಅವರ ಪಾರ್ಟ್’ನರ್ ಶಿವಂ ದುಬೆ ರನ್ ತೆಗೆದುಕೊಳ್ಳಲು ನಿರಾಕರಿಸಿದರು. ರಹಾನೆ ಬಹಳ ಮುಂದೆ ಬಂದಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅಸ್ಸಾಂ ನಾಯಕ ಡ್ಯಾನಿಶ್ ದಾಸ್ ಚೆಂಡನ್ನು ಎತ್ತಿಕೊಂಡು ಕೀಪರ್ ಕಡೆಗೆ ಎಸೆದರು. ಆದರೆ ಅದು ಕ್ರೀಸ್‌’ಗೆ ಮರಳಲು ಪ್ರಯತ್ನಿಸುತ್ತಿದ್ದ ರಹಾನೆಗೆ ಬಡಿದಿತು.

ಇದಾದ ನಂತರ, ಅಸ್ಸಾಂನ ಎಲ್ಲಾ ಆಟಗಾರರು ಫೀಲ್ಡಿಂಗ್‌’ಗೆ ಅಡ್ಡಿಪಡಿಸಿದ್ದಕ್ಕಾಗಿ ರಹಾನೆ ಅವರನ್ನು ಔಟ್ ಮಾಡುವಂತೆ ಮನವಿ ಮಾಡಿದರು. ಈ ಮನವಿಯನ್ನು ಫೀಲ್ಡ್ ಅಂಪೈರ್ ಸಹ ಸ್ವೀಕರಿಸಿದರು. ಈ ನಿರ್ಧಾರದ ನಂತರ ಅಂಪೈರ್ ಕೂಡ ಟೀ ಬ್ರೇಕ್ ಘೋಷಿಸಿದರು. ಆದರೆ, ಚಹಾ ವಿರಾಮದ ಸಮಯದಲ್ಲಿ ಅಸ್ಸಾಂ ಮನವಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದು, ಆ ಬಗ್ಗೆ ಅಂಪೈರ್‌’ಗಳಿಗೆ ತಿಳಿಸಿದರು.

ನಿಯಮಗಳ ಪ್ರಕಾರ, ಮುಂದಿನ ಎಸೆತವನ್ನು ಬೌಲ್ ಮಾಡುವ ಮೊದಲು ವಜಾಗೊಳಿಸುವ ಮನವಿಯನ್ನು ಹಿಂಪಡೆಯಬೇಕು ಮತ್ತು ಅಂಪೈರ್ ಅದನ್ನು ಸ್ವೀಕರಿಸಿದಾಗ ಮಾತ್ರ ಬ್ಯಾಟ್ಸ್‌ಮನ್ ಬ್ಯಾಟಿಂಗ್‌’ಗೆ ಮರಳಬಹುದು. ಅದೃಷ್ಟಕ್ಕೆ ರಹಾನೆ ಔಟಾದ ಬಳಿಕ ಟೀ ವಿರಾಮ ತೆಗೆದುಕೊಂಡಿದ್ದು, ಈ ನಡುವೆ ಅಸ್ಸಾಂ ತಂಡ ತನ್ನ ನಿರ್ಧಾರ ಬದಲಿಸಿದೆ. ಪರಿಣಾಮವಾಗಿ, 20 ನಿಮಿಷಗಳ ನಂತರ ರಹಾನೆ ಮತ್ತೆ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಿದ್ದಾರೆ. ಆದರೆ, ರಹಾನೆ ಇದರ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಕೇವಲ ನಾಲ್ಕು ರನ್ ಕಲೆಹಾಕಿದ ಅವರು, ವೈಯಕ್ತಿಕ ಸ್ಕೋರ್ 22 ರಲ್ಲಿ ಔಟಾದರು.

ಇದನ್ನೂ ಓದಿ: Astro Tips: ಮನೆಯ ಈ ದಿಕ್ಕಿನಲ್ಲಿ ಅಪ್ಪಿತಪ್ಪಿಯೂ ಕುಬೇರ ದೇವನ ವಿಗ್ರಹವನ್ನು ಇಡಬೇಡಿ..!

ರಹಾನೆ ಬ್ಯಾಟಿಂಗ್‌’ಗೆ ಆಗಮಿಸಿದಾಗ ಮುಂಬೈ ತಂಡ 4 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿ ಆಡುತ್ತಿತ್ತು. ಇದಾದ ಬಳಿಕ ರಹಾನೆ ಶಿವಂ ದುಬೆ ಜೊತೆ ಅರ್ಧಶತಕದ ಜೊತೆಯಾಟ ನಡೆಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News