ಇನ್ಮುಂದೆ ಯಾವತ್ತೂ ಕೂಡ ಭಾರತದ ಈ ಕ್ರೀಡಾಂಗಣಕ್ಕೆ ನಾವು ಬರಲ್ಲ: ಬಿಸಿಸಿಐ ವಿರುದ್ಧ ಅಫ್ಘನ್​ ಕ್ರಿಕೆಟ್​ ಮಂಡಳಿ ಶಾಕಿಂಗ್‌ ನಿರ್ಧಾರ

Afghanistan New Zealand Test: ಇನ್ಮುಂದೆ ಯಾವತ್ತೂ ಕೂಡ ಈ ಮೈದಾನಕ್ಕೆ ನಾವು ಬರಲು ಬಯಸುವುದಿಲ್ಲ ಎಂದು ಎಸಿಬಿ ಅಧಿಕಾರಿ ತಿಳಿಸಿದ್ದಾರೆ. ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ʼನಲ್ಲಿ ಒಳಚರಂಡಿ, ಒದ್ದೆಯಾದ ಔಟ್‌ ಫೀಲ್ಡ್ ಮತ್ತು ಶೋಚನೀಯ ಸೌಲಭ್ಯಗಳ ಬಗ್ಗೆ ಎಸಿಬಿ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Bhavishya Shetty | Last Updated : Sep 10, 2024, 04:36 PM IST
    • ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯ ರದ್ದು
    • ಸಿದ್ಧತೆಗಳ ಬಗ್ಗೆ ಅಫ್ಘಾನಿಸ್ತಾನ ತಂಡ ಮತ್ತು ಅಧಿಕಾರಿಗಳು ಅತೃಪ್ತರಾಗಿದ್ದಾರೆ.
    • ಈ ಮೈದಾನಕ್ಕೆ ನಾವು ಬರಲು ಬಯಸುವುದಿಲ್ಲ ಎಂದು ಎಸಿಬಿ ಅಧಿಕಾರಿ ತಿಳಿಸಿದ್ದಾರೆ
ಇನ್ಮುಂದೆ ಯಾವತ್ತೂ ಕೂಡ ಭಾರತದ ಈ ಕ್ರೀಡಾಂಗಣಕ್ಕೆ ನಾವು ಬರಲ್ಲ: ಬಿಸಿಸಿಐ ವಿರುದ್ಧ ಅಫ್ಘನ್​ ಕ್ರಿಕೆಟ್​ ಮಂಡಳಿ ಶಾಕಿಂಗ್‌ ನಿರ್ಧಾರ title=
File Photo

Afghanistan New Zealand Test: ಒಂದೇ ಒಂದು ಹನಿ ಮಳೆ ಬಿದ್ದಿಲ್ಲವಾದರೂ ಗ್ರೇಟರ್ ನೋಯ್ಡಾ ಸ್ಟೇಡಿಯಂನಲ್ಲಿ ನಡೆಯಬೇಕಾಗಿದ್ದ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಮೊದಲ ದಿನವನ್ನು ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಅಫ್ಘಾನಿಸ್ತಾನ ತಂಡ ಮತ್ತು ಅಧಿಕಾರಿಗಳು ಅತೃಪ್ತರಾಗಿದ್ದಾರೆ.

ಇದನ್ನೂ ಓದಿ: ಎಂತೆಂಥಾ ದಿಗ್ಗಜರೇ ಪ್ರಯತ್ನಪಟ್ಟರೂ... ಇದುವರೆಗೆ ವಿರಾಟ್ ಕೊಹ್ಲಿಯ ಈ 5 ದಾಖಲೆಗಳನ್ನು ಯಾರಿಂದಲೂ ಟಚ್‌ ಮಾಡೋದಕ್ಕೂ ಸಾಧ್ಯವಾಗಿಲ್ಲ!

ಇನ್ಮುಂದೆ ಯಾವತ್ತೂ ಕೂಡ ಈ ಮೈದಾನಕ್ಕೆ ನಾವು ಬರಲು ಬಯಸುವುದಿಲ್ಲ ಎಂದು ಎಸಿಬಿ ಅಧಿಕಾರಿ ತಿಳಿಸಿದ್ದಾರೆ. ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ʼನಲ್ಲಿ ಒಳಚರಂಡಿ, ಒದ್ದೆಯಾದ ಔಟ್‌ ಫೀಲ್ಡ್ ಮತ್ತು ಶೋಚನೀಯ ಸೌಲಭ್ಯಗಳ ಬಗ್ಗೆ ಎಸಿಬಿ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಅನೇಕ ಗೊಂದಲಗಳಿವೆ ಮತ್ತು ಆಟಗಾರರು ಇಲ್ಲಿ ಸೌಲಭ್ಯಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಿದ್ದಾರೆ

ಸಾಮಾನ್ಯವಾಗಿ ಮಳೆಯ ನಂತರ ಪಿಚ್ ಒದ್ದೆಯಾಗುತ್ತದೆ. ಆದರೆ ಗ್ರೇಟರ್ ನೋಯ್ಡಾ ಸ್ಟೇಡಿಯಂ ಮೈದಾನವು ಹಲವು ಸ್ಥಳಗಳಲ್ಲಿ ತೇವವನ್ನು ಹೊಂದಿದೆ. ವರದಿಯ ಪ್ರಕಾರ, ಅಂಪೈರ್‌‌ʼಗಳು ದಿನವಿಡೀ ಆರು ಬಾರಿ ಮೈದಾನವನ್ನು ಪರಿಶೀಲಿಸಿದ್ದಾರೆ. ಜೊತೆಗೆ ನಾಯಕ ಟಿಮ್ ಸೌಥಿ, ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಮತ್ತು ರಚಿನ್ ರವೀಂದ್ರ ಸೇರಿದಂತೆ ಹಲವಾರು ನ್ಯೂಜಿಲೆಂಡ್ ಆಟಗಾರರು ಮೈದಾನವನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ: ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ವಿರಾಟ್‌ ಪುತ್ರ! ಕೊನೆಗೂ ಮಗನ ಫೋಟೋ ರಿವೀಲ್‌ ಮಾಡಿದ ಅನುಷ್ಕಾ... ಫೋಟೋ ನೋಡಿ

ಗ್ರೇಟರ್ ನೋಯ್ಡಾ ಸ್ಟೇಡಿಯಂನಲ್ಲಿ ಬಿಸಿಸಿಐ ಆಶ್ರಯದಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. 2016ರಲ್ಲಿ ಕೊನೆಯ ಬಾರಿ ಈ ಮೈದಾನದಲ್ಲಿ ದುಲೀಪ್ ಟ್ರೋಫಿ ಪಂದ್ಯ ನಡೆದಿತ್ತು. ಕಾರ್ಪೊರೇಟ್ ಪಂದ್ಯಗಳ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಕಾರಣ BCCI ಸೆಪ್ಟೆಂಬರ್ 2017 ರಲ್ಲಿ ಇದನ್ನು ನಿಷೇಧಿಸಿತು. ಅಂದಿನಿಂದ ಇಲ್ಲಿ ಬಿಸಿಸಿಐ ಸಂಬಂಧಿತ ಪಂದ್ಯಗಳು ನಡೆದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News