MS Dhoni ಮನೆಗೆ ಹೊಸ ಅತಿಥಿ ಆಗಮನ, ವಿಡಿಯೋ ಶೇರ್ ಮಾಡಿ ಮಾಹಿತಿ ಹಂಚಿಕೊಂಡ ಸಾಕ್ಷಿ

ಐಪಿಎಲ್ ಮುಂದೂಡಿದ ನಂತರ ಮಹೇಂದ್ರ ಸಿಂಗ್ ಧೋನಿಗೆ ಮತ್ತೊಮ್ಮೆ ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ಸಿಕ್ಕಿದೆ.

Written by - Yashaswini V | Last Updated : May 6, 2021, 02:44 PM IST
  • ಮಹೇಂದ್ರ ಸಿಂಗ್ ಧೋನಿಯವರ ಮನೆಗೆ ಹೊಸ ಅತಿಥಿ
  • ಸ್ವತಃ ಸಾಕ್ಷಿ ಧೋನಿಯವರೇ ಈ ಮಾಹಿತಿಯನ್ನು ನೀಡಿದ್ದಾರೆ
  • ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಾಕ್ಷಿ
MS Dhoni ಮನೆಗೆ ಹೊಸ ಅತಿಥಿ ಆಗಮನ, ವಿಡಿಯೋ ಶೇರ್ ಮಾಡಿ ಮಾಹಿತಿ ಹಂಚಿಕೊಂಡ ಸಾಕ್ಷಿ  title=
File Image

ರಾಂಚಿ: ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಬೈಕ್ ಪ್ರೇಮಿ ಎಂಬುದು ಎಲ್ಲರಿಗೂ ತಿಳಿದಿದೆ.  ಆದರೆ ಎಂ.ಎಸ್. ಧೋನಿ ಬೈಕುಗಳಷ್ಟೇ ಅಲ್ಲ ಪ್ರಾಣಿಗಳ ಪ್ರಿಯರೂ ಹೌದು. ಸಾಮಾಜಿಕ ಮಾಧ್ಯಮದಲ್ಲಿ ಧೋನಿ ಆಗಾಗ್ಗೆ ತಮ್ಮ ಸಾಕು ನಾಯಿಯೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಮಹೇಂದ್ರ ಸಿಂಗ್ ಧೋನಿಯವರ ಮನೆಗೆ ಹೊಸ ಅತಿಥಿ ಬಂದಿದ್ದು, ಸ್ವತಃ ಸಾಕ್ಷಿ ಧೋನಿಯವರೇ ಈ ಮಾಹಿತಿಯನ್ನು ನೀಡಿದ್ದಾರೆ. 

ವಾಸ್ತವವಾಗಿ ಸಾಕ್ಷಿ ಧೋನಿ (Sakshi Dhoni) ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಧೋನಿಯವರ ನಾಯಿಯ ಜೊತೆಗೆ ಕಪ್ಪು ಬಣ್ಣದ ಕುದುರೆವೊಂದು ಕಾಣಿಸಿಕೊಂಡಿದೆ. 

 
 
 
 

 
 
 
 
 
 
 
 
 
 
 

A post shared by Sakshi Singh Dhoni (@sakshisingh_r)

ಇದನ್ನೂ ಓದಿ - Star Cricketers IPL Salary: ಸ್ಟಾರ್ ಕ್ರಿಕೆಟಿಗರು ಮೊದಲ IPL ಪಂದ್ಯದಲ್ಲಿ ಪಡೆದ ಸಂಬಳ ಎಷ್ಟು ಗೊತ್ತಾ?

ತಮ್ಮ ಸೋಶಿಯಲ್ ಮಿಡಿಯಾ (Social Media) ಖಾತೆಯಲ್ಲಿ ವೆಲ್ ಕಂ ಹೋಂ ಚೇತಕ್ ಎಂಬ ಶೀರ್ಷಿಕೆಯಡಿ ವೀಡಿಯೊ ಹಂಚಿಕೊಂಡಿರುವ ಸಾಕ್ಷಿ, "ನೀವು ಲಿಲ್ಲಿಯನ್ನು ಭೇಟಿಯಾದಾಗ, ನೀವು ನಿಜವಾದ ಸಂಭಾವಿತರಂತೆ ವರ್ತಿಸುತ್ತಿದ್ದೀರಿ. ನಮ್ಮ ಫ್ಯಾಮಿಲಿ ಪ್ಯಾಕ್‌ನಲ್ಲಿ ನಿಮ್ಮನ್ನು ಸಂತೋಷದಿಂದ ಸ್ವೀಕರಿಸಲಾಗಿದೆ" ಎಂದು ಬರೆದಿದ್ದಾರೆ.

ಇದನ್ನೂ ಓದಿ - ಎಂ.ಎಸ್ ಧೋನಿ ಪೋಷಕರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ಕೋಚ್ ಸ್ಟೀಪನ್ ಫ್ಲೇಮಿಂಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News