Viral Video: ʼಬುಲೆಟ್‌ʼ ಇಳಿದು ಓಡಿದ್ರೂ ಅಟ್ಟಾಡಿಸಿ ಮಹಿಳೆಗೆ ತಿವಿದ ಹಸು!

Cow attack Video: ಹಿಂದಿನಿಂದ ಅಟ್ಟಿಸಿಕೊಂಡು ಬಂದ ಹಸು ಮಹಿಳೆಗೆ ಗುದ್ದಿ ಕೆಳಗೆ ಕೆಡವಿದೆ. ಬಳಿಕ ಕೊಂಬಿನಿಂದ ತಿವಿಯಲು ಶುರುಮಾಡಿದೆ. ನಂತರ ಅದು ಮಹಿಳೆಯನ್ನು ಕಾಲಿನಿಂದ ತುಳಿದುಹಾಕಿದೆ. ಈ ವೇಳೆ ಆಕೆಯ ಪತಿ ಸೇರಿದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ​

Written by - Puttaraj K Alur | Last Updated : Jun 19, 2024, 07:11 PM IST
  • ಬೈಕ್‌ ಇಳಿದು ಓಡಿದರೂ ಮಹಿಳೆಯನ್ನು ಅಟ್ಟಾಡಿಸಿ ತಿವಿದ ಹಸು
  • ಮಹಿಳೆಗೆ ಕೊಂಬಿನಿಂದ ತಿವಿದು, ಕಾಲಿನಿಂದ ತುಳಿದುಹಾಕಿದ ಹಸು
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ ವಿಡಿಯೋ
Viral Video: ʼಬುಲೆಟ್‌ʼ ಇಳಿದು ಓಡಿದ್ರೂ ಅಟ್ಟಾಡಿಸಿ ಮಹಿಳೆಗೆ ತಿವಿದ ಹಸು! title=
ಮಹಿಳೆ ಮೇಲೆ ಹಸು ಅಟ್ಯಾಕ್!

Shocking Viral Video: ಬುಲೆಟ್‌ ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿ ಮೇಲೆ ಬಿಡಾಡಿ ಹಸುವೊಂದು ಬೆನ್ನಟ್ಟಿ ದಾಳಿ ನಡೆಸಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಗುಜರಾತ್‌ನ ಮೊಡಾಸಾದ ಸಹಯೋಗ್‌ ಚೌಕ್ ಬಳಿ ಈ ಘಟನೆ ನಡೆದಿದೆ. ಬೈಕ್‌ ಇಳಿದು ಓಡಿದರೂ ಬಿಡದ ಹಸು ಮಹಿಳೆಯನ್ನು ಬೆನ್ನಟ್ಟಿಕೊಂಡು ಹೋಗಿ ತಿವಿದು ತುಳಿದುಹಾಕಿದೆ. ಈ ವಿಡಿಯೋ ನೋಡಲು ತುಂಬಾ ಭಯಾನಕವಾಗಿದೆ.    

ವೈರಲ್‌ ಆಗಿರುವ ವಿಡಿಯೋದಲ್ಲಿ ಪೆಟ್ರೋಲ್ ಪಂಪ್‌ನ ಬಳಿ ಬುಲೆಟ್‌ ಬೈಕ್‌ನಲ್ಲಿದ್ದ ದಂಪತಿಯನ್ನು ಬಿಡಾಡಿ ಹಸುವೊಂದು ಅಟ್ಟಾಡಿಸಿಕೊಂದು ಬಂದಿದೆ. ಈ ವೇಳೆ ತಮ್ಮ ಮೇಲೆ ಹಸು ದಾಳಿ ನಡೆಸುತ್ತದೆ ಎಂದು ತಿಳಿದ ಮಹಿಳೆ ಬೈಕ್‌ ಇಳಿದು ಓಡಿದ್ದಾರೆ. ಆದರೆ ಅವರನ್ನು ಬೆನ್ನಟ್ಟಿದ ಹಸು ಘೋರವಾಗಿ ದಾಳಿ ನಡೆಸಿದೆ.

ಇದನ್ನೂ ಓದಿViral video : ಐಸ್ ಕ್ರೀಮ್‌ನಲ್ಲಿ ಮಾನವನ ಬೆರಳು ಪತ್ತೆ..! ವಿಡಿಯೋ ವೈರಲ್‌

ಹಿಂದಿನಿಂದ ಅಟ್ಟಿಸಿಕೊಂಡು ಬಂದ ಹಸು ಮಹಿಳೆಗೆ ಗುದ್ದಿ ಕೆಳಗೆ ಕೆಡವಿದೆ. ಬಳಿಕ ಕೊಂಬಿನಿಂದ ತಿವಿಯಲು ಶುರುಮಾಡಿದೆ. ನಂತರ ಅದು ಮಹಿಳೆಯನ್ನು ಕಾಲಿನಿಂದ ತುಳಿದುಹಾಕಿದೆ. ಈ ವೇಳೆ ಆಕೆಯ ಪತಿ ಸೇರಿದಂತೆ ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ. ಹಸುವಿನ ದಾಳಿಯಿಂದ ಮಹಿಳೆಯನ್ನು ಬಿಡಿಸಲು ಪ್ರಯತ್ನಿಸಿದರೂ ಬಿಡದ ಅದು ಕೊಂಬಿನಿಂದ ತಿವಿಯುತ್ತಾ, ಕಾಲಿನಿಂದ ತುಳಿಯುತ್ತಾ ಭೀಕರವಾಗಿ ದಾಳಿ ನಡೆಸಿದೆ. ಈ ವೇಳೆ ಒಬ್ಬ ವ್ಯಕ್ತಿ ದೊಡ್ಡ ದೊಣ್ಣೆಯಿಂದ ಹಸುವಿಗೆ ಹೊಡೆದಿದ್ದಾನೆ. ಪರಿಣಾಮ ಹಸು ಸ್ಥಳದಿಂದ ಓಡಿಹೋಗಿದೆ.  

ಈ ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಮಹಿಳೆಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಯ ಮೇಲೆ ಹಸು ದಾಳಿ ಮಾಡಿದ್ದು ಏಕೆ? ಮಹಿಳೆಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಂಬಿನಿಂದ ತಿವಿದು, ಕಾಲಿನಿಂದ ತುಳಿದು ಹಾಕಿದ್ದು ಏಕೆ? ಅಂತಾ ನೆಟಿಜನ್ಸ್‌ ಪ್ರಶ್ನಿಸಿದ್ದಾರೆ.  ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಾಗೂ ಒಬ್ಬೊಬ್ಬರೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇಂತಹ ಬಿಡಾಡಿ ದನಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅನೇಕರು ಸಲಹೆ ನೀಡಿದ್ದಾರೆ.  

ಇದನ್ನೂ ಓದಿ: Kuwait Fire Tragedy: ಕೊಚ್ಚಿ ತಲುಪಿದ 45 ಭಾರತೀಯರ ಮೃತದೇಹ ಹೊತ್ತ ಐಎಎಫ್ ವಿಮಾನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News