Weekly Horoscope: ಈ ವಾರ ಯುಗಾದಿ ಹಬ್ಬ ಯಾರ ಜೀವನದಲ್ಲಿ ತರಲಿದೆ ಸಿಹಿ? ಯಾರಿಗೆ ಕಹಿ?

Weekly Horoscope April 08th to April 14th: ಏಪ್ರಿಲ್ 08ರಿಂದ ಏಪ್ರಿಲ್ 14ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Apr 8, 2024, 11:31 AM IST
  • ಮಿಥುನ ರಾಶಿಯವರು ಈ ವಾರ ಯೋಚಿಸಿ ಕೆಲಸ ಮಾಡುವುದರಿಂದ ಶುಭಫಲಗಳನ್ನು ಪಡೆಯಬಹುದು.
  • ಕನ್ಯಾ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಅಪಾಯಕಾರಿ ಘಟನೆಗಳಿಂದ ದೂರವಿರಿ.
  • ವೃಶ್ಚಿಕ ರಾಶಿಯವರು ಈ ವಾರ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕು.
Weekly Horoscope: ಈ ವಾರ ಯುಗಾದಿ ಹಬ್ಬ ಯಾರ ಜೀವನದಲ್ಲಿ ತರಲಿದೆ ಸಿಹಿ? ಯಾರಿಗೆ ಕಹಿ?  title=

Varabhavishya in Kannada From April 08th to April 14th: ಈ ವಾರ ಹಿಂದೂಗಳಿಗೆ ಹೊಸ ವರ್ಷ ಎಂತಲೇ ಪರಿಗಣಿಸಲಾಗಿರುವ ಯುಗಾದಿ ಹಬ್ಬದ ಆಚರಣೆ ಇರಲಿದೆ. ಯುಗಾದಿ ಹಬ್ಬಕ್ಕೂ  ಮೊದಲು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯೋಣ... 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಈ ವಾರ ಮೇಷ ರಾಶಿಯವರಿಗೆ ಗ್ರಹಗಳ ರಾಜ ಸೂರ್ಯ ಹೆಚ್ಚುವರಿ ಶಕ್ತಿಯನ್ನು ನೀಡಲಿದ್ದಾನೆ. ಯುಗಾದಿ ಹಬ್ಬ ಮೇಷ ರಾಶಿಯ ಜನರ ಜೀವನದಲ್ಲಿ ಹೊಸತನವನ್ನು ತರಲಿದೆ. ನೀವು ಯಾವುದೇ ಹೊಸ ಕೆಲಸಗಳನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಇದು ಒಳ್ಳೆಯ ಸಮಯ. ನಿಮ್ಮ ಪ್ರೀತಿ ಪಾತ್ರರ ಜೊತೆ ಕೋಪಗೊಳ್ಳುವುದನ್ನು ತಪ್ಪಿಸಿ. ಇಲ್ಲದಿದ್ದರೆ, ಇದು ನಿಮ್ಮ ಜೀವನದಲ್ಲಿ ಬಹುದೊಡ್ಡ ನಷ್ಟವನ್ನು ಉಂಟು ಮಾಡಬಹುದು. ಆದಾಗ್ಯೂ, ವಾರಾಂತ್ಯದಲ್ಲಿ ಶುಭ ಗ್ರಹಗಳ ಶುಭ ಫಲದಿಂದಾಗಿ ನಿಮ್ಮ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಹಣದ ಹರಿವು ಹೆಚ್ಚಾಗಲಿದೆ. 

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ಸೂರ್ಯ ದೇವ ಈ ವಾರ ವೃಷಭ ರಾಶಿಯವರ ಜೀವನದಲ್ಲಿಯೂ ಕೂಡ ಶುಭ ಪರಿಣಾಮಗಳನ್ನು ಬೀರಲಿದ್ದಾನೆ. ವಾರದ ಪೂರ್ವಾರ್ಧದಲ್ಲಿ ಕಚೇರಿ ಕೆಲಸಗಳಲ್ಲಿ ಒತ್ತಡದ ಹೊರತಾಗಿಯೂ ವಾರದ ಮಧ್ಯದಲ್ಲಿ ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ನೆರವೇರಲಿವೆ. ನಿಮ್ಮ ದೀರ್ಘಕಾಲದ ಕನಸುಗಳು ನನಸಾಗುವ ಸಮಯ. ವಾರಾಂತ್ಯವು ನಿಮಗೆ ಹೆಚ್ಚು ಮೋಜು, ಪ್ರೀತಿ ಮತ್ತು ಸಂತೋಷವನ್ನು ತರುತ್ತದೆ. ಈ ವಾರ ನಿಮ್ಮ ಮನಸ್ಸಿನ ಮಾತನ್ನು ಕೇಳಿ ಮುಂದುವರೆಯುವುದು ನಿಮಗೆ ಒಳ್ಳೆಯದನ್ನು ತರಲಿದೆ. 

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಮಿಥುನ ರಾಶಿಯವರು ಈ ವಾರ ಯೋಚಿಸಿ ಕೆಲಸ ಮಾಡುವುದರಿಂದ ಶುಭಫಲಗಳನ್ನು ಪಡೆಯಬಹುದು. ನಿಮ್ಮ ಕೆಲಸದ ಬಗ್ಗೆ ನೀವು ವಾಸ್ತವಿಕವಾಗಿರುತ್ತೀರಿ. ಸಾಮರಸ್ಯ ಮತ್ತು ಕಠಿಣ ಪರಿಶ್ರಮದ ಶುಭ ಫಲವನ್ನು ನೀವು ಅನುಭವಿಸುವಿರಿ. ನಿಮ್ಮ ಗುರಿಗಳತ್ತ ಗಮನ ಕೇಂದ್ರೀಕರಿಸಿ ಮುಂದುವರೆಯುವುದರಿಂದ ಶುಭ. ನಿಮ್ಮ ಹಳೆಯ ತಪ್ಪುಗಳಿಂದ ಕಲಿತು ಮುಂದುವರೆದರೆ ಒಳ್ಳೆಯ ಫಲವನ್ನು ಅನುಭವಿಸುವಿರಿ. ನಿಮ್ಮ ಹಾದಿಯಲ್ಲಿ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಪ್ರಗತಿಯನ್ನು ಸಾಧಿಸುವಿರಿ. ನಿಮ್ಮ ಕೆಟ್ಟ ವರ್ತನೆಗಳನ್ನು ಬಿಟ್ಟು ಮುಂದೆ ಸಾಗುವುದರಿಂದ ಉಜ್ವಲ ಭವಿಷ್ಯ ನಿಮ್ಮದಾಗಲಿದೆ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಕರ್ಕಾಟಕ ರಾಶಿಯ ಉದ್ಯೋಗಸ್ಥರಿಗೆ ಇದು ಒಳ್ಳೆಯ ಸಮಯದ. ಕೆಲಸದಲ್ಲಿನ ಬದಲಾವಣೆಯು ಹೊಸತನದ ಭಾವನೆಯನ್ನು ನೀಡುತ್ತದೆ. ಹೊಸ ಉದ್ಯೋಗದಲ್ಲಿ ಅಥವಾ ಸಂಪೂರ್ಣ ಹೊಸ ಕೆಲಸದ ವಾತಾವರಣದಲ್ಲಿ ಅಪರಿಚಿತರೊಂದಿಗೆ ಸೌಜನ್ಯದಿಂದ ವರ್ತಿಸುವುದು ಲಾಭದಾಯಕವಾಗಿದೆ. ಈ ವಾರ ನಿಮ್ಮ ಕೆಲವು ಕನಸುಗಳು ಸಾಕಾರಗೊಳ್ಳಬಹುದು. ವಿನೋಧದ ಹಾದಿಯು ನಿಮ್ಮ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯೋಜನಕಾರಿ ಆಗಿದೆ. ಈ ವಾರಾಂತ್ಯದಲ್ಲಿ ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು, ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. 

ಇದನ್ನೂ ಓದಿ- Surya Grahan 2024: ಸೋಮಾವತಿ ಅಮಾವಾಸ್ಯೆಯಂದು ಸೂರ್ಯಗ್ರಹಣ, ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಸಿಂಹ ರಾಶಿಯವರೇ ನೀವು ಭಯ ಅಥವಾ ಆಸೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕನ್ನು ಸಮತೋಲನಗೊಳಿಸಲು ಪ್ರಯತ್ನಿಸಲು ಇದು ಅತ್ಯುತ್ತಮ ಸಮಯ. ಈ ವಾರ, ಗ್ರಹಗಳ ಶುಭ ಸ್ಥಾನದಿಂದಾಗಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ. ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದ್ದು ನಿಮ್ಮಿಂದ ದೂರವಾದವರು ಮತ್ತೆ ನಿಮ್ಮ ಸನಿಹಕೆ ಬರಲಿದ್ದಾರೆ. ಇಷ್ಟು ದಿನಗಳಿಂದ ನಿಮ್ಮ ಜೀವನದಲ್ಲಿ ಎದುರಿಸುತ್ತಿದ್ದ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ದೊರೆಯುವ ಸಮಯ ಇದಾಗಿದೆ. 

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಈ ವಾರ ಕನ್ಯಾ ರಾಶಿಯ ಜನರಿಗೆ ಪ್ರೀತಿ, ಹಣ, ಅಧಿಕಾರ ಎಲ್ಲವೂ ದೊರೆಯಲಿದೆ. ಜೀವನದ ಹೊಸ ಭರವಸೆ ಕಣ್ಮುಂದೆ ಕಾಣಲಿದೆ. ಬಹುಶಃ ನೀವು ಸಾಮಾನ್ಯಕ್ಕಿಂತ ವೇಗವಾಗಿ ಕಾರ್ಯನಿರ್ವಹಿಸುವಿರಿ, ಇದರಿಂದಾಗಿ ನಿಮ್ಮ ಕೆಲಸಗಳು ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳ್ಳಲಿವೆ. ಆದಾಗ್ಯೂ, ಯಾವುದೇ ವಿಚಾರಗಳಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ಪಾಲುದಾರಿಕೆ ವ್ಯಾಪಾರಕ್ಕಾಗಿ ಯೋಚಿಸುತ್ತಿರುವವರಿಗೆ ಇದು ಒಳ್ಳೆಯ ಸಮಯ. ಮಹಿಳಾ ಸಹೋದ್ಯೋಗಿಗಳು ಅಥವಾ ಅಧಿಕಾರದ ವ್ಯಕ್ತಿಗಳೊಂದಿಗೆ ಸಮಸ್ಯೆಗಳು ಬರಬಹುದು. ಹಾಗಾಗಿ, ಉದ್ಯೋಗ ಕ್ಷೇತ್ರದಲ್ಲಿ ಅಪಾಯಕಾರಿ ಘಟನೆಗಳಿಂದ ದೂರವಿರಿ.

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯವರು ಈ ವಾರ ಭಾವನಾತ್ಮಕವಾಗಿರುವಿರಿ. ಆದರೆ, ನಿಮ್ಮ ಭಾವನೆಗಳ ಘರ್ಷಣೆ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸದಂತೆ ನಿಗಾವಹಿಸಿ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದಿರುವುದು ಒಳ್ಳೆಯದು.  ಉದ್ಯೋಗ-ವ್ಯವಹಾರದಲ್ಲಿ ನಾನಾ ರೀತಿಯ ಅಡೆತಡೆಗಳನ್ನು ಎದುರಿಸಬಹುದು.  ನಿಮ್ಮ ಆಂತರಿಕ ಶಕ್ತಿಗಳನ್ನು ಚೆನ್ನಾಗಿ ಬಳಸಿಕೊಳ್ಳಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಖಂಡಿತ ಫಲ ಸಿಕ್ಕೇ ಸಿಗುತ್ತದೆ. ಆದಾಗ್ಯೂ, ವಾರದ ಕೊನೆಯಲ್ಲಿ ಅದೃಷ್ಟ ನಿಮ್ಮ ಪರವಾಗಿದ್ದು, ಜೀವನದಲ್ಲಿ ಸಂತೋಷದ ಕ್ಷಣಗಳು ಹೆಚ್ಚಾಗಲಿವೆ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವೃಶ್ಚಿಕ ರಾಶಿಯವರು ಈ ವಾರ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬೇಕು. ಈ ವಾರ ವೃಶ್ಚಿಕ ರಾಶಿಯವರು ವೃತ್ತಿ ರಂಗದಲ್ಲಿ ಮಾತ್ರವಲ್ಲದೆ, ವೈಯಕ್ತಿಕ ಜೀವನದಲ್ಲಿಯೂ ಪ್ರಗತಿಯನ್ನು ಕಾಣುವಿರಿ. ನೀವು ಸಾಮಾನ್ಯಕ್ಕಿಂತ ಹೆಚ್ಚು ಶಕ್ತಿಯುತ ಮತ್ತು ಸ್ಪಷ್ಟತೆಯನ್ನು ಅನುಭವಿಸುವ ಸಾಧ್ಯತೆಯಿದೆ. ಆದಾಗ್ಯೂ, ಈ ವಾರ ನೀವು ನಿಮ್ಮ ಸ್ವಂತ ಅಗತ್ಯಗಳಿಗಿಂತ ಇತರರ ಅಗತ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಬಹುದು. ಈ ಸಮಯದ್ಲಲಿ ನಿಮ್ಮ ಕೌಶಲ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಇಲ್ಲಿಯವರೆಗೆ ನಿಮ್ಮ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳಿಂದ ಪರಿಹಾರ ಪಡೆಯುವಿರಿ. ವಾರಾಂತ್ಯದಲ್ಲಿ ಸಂಬಂಧಗಳೊಂದಿಗೆ ಮಧುರತೆ ಕಂಡು ಬರಲಿದೆ. 

ಇದನ್ನೂ ಓದಿ- ವೃಷಭದಲ್ಲಿ ಗುರು.. ಈ 4 ರಾಶಿಗಳಿಗೆ ಅದೃಷ್ಟದ ಮಹಾಕಾಲ.. ವ್ಯಾಪಾರ ಉದ್ಯೋಗ ಎಲ್ಲದರಲ್ಲೂ ಲಾಭವೇ ಲಾಭ, ಹಣದ ಹೊಳೆ!

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯ ಜನರು ಈ ವಾರ ಕಾಲ್ಪನಿಕವಾಗಿ ಬದುಕುವ ಬದಲು ವಾಸ್ತವಿಕವಾಗಿ ಬದುಕುವುದನ್ನು ಕಲಿಯಿರಿ.  ಹೊಸ ಕಲಾತ್ಮಕ ಗುರಿಗಳನ್ನು ಹೊಂದಿಸಲು ಇದು ಸೂಕ್ತ ಸಮಯ. ನೀವು ಸಂವೇದನಾಶೀಲರಾಗಿದ್ದರೆ ನಿಮ್ಮ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಬಹುದು. ವಾರದ ಮಧ್ಯ ಭಾಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯದೆ ನೀವು ನಿರಾಶೆಗೊಳ್ಳಬಹುದು. ಸಹೋದ್ಯೋಗಿಯ ಮಿಶ್ರ ಸಂದೇಶಗಳಿಂದ ನೀವು ಗೊಂದಲಕ್ಕೊಳಗಾಗಬಹುದು. ಆದರೆ, ಶಾಂತಚಿತ್ತತೆಯಿಂದ ಕುಳಿತು ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ನಿಮಗೆ ಪ್ರಯೋಜನಕಾರಿ ಆಗಿದೆ. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯವರು ಈ ವಾರ ವೃತ್ತಿ ಜೀವನದಲ್ಲಿ, ವೈಯಕ್ತಿಕ ಜೀವನಗಳೆರಡರಲ್ಲೂ ಹೊಸ ಹೊಸ ಅನುಭವಗಳನ್ನು ಕಲಿಯುರಿವಿ. ಕೌಟುಂಬಿಕ ಜೀವನದಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಹೆಚ್ಚು ಸಹಾನುಭೂತಿ ಹೊಂದುವಂತೆ ಮಾಡುತ್ತದೆ. ಕಚೇರಿಯಲ್ಲಿ ಉದ್ಬವಿಸಬಹುದಾದ ಕೆಲವು ಸಮಸ್ಯೆಗಳು ನಿಮ್ಮ ಯೋಜನೆಗಳನ್ನು ತಲೆಕೆಳಗಾಗಿಸಬಹುದು. ಆದಾಗ್ಯೂ, ಪ್ರತಿ ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಗಾಢ ಕತ್ತಲೆಯ ಹಿಂದೆ ಪ್ರಜ್ವಲಿಸುವ ಬೆಳಕು ಇದ್ದೇ ಇರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಈ ವಾರ ನೀವು ಭಾವೋದ್ರಿಕ್ತರಾಗಿ ಇರಬಹುದು. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯವರಿಗೆ ಹೊಸದನ್ನು ಕಲಿಯುವ ನಿಮ್ಮ ಆಲೋಚನೆಗಳು ನಿಮ್ಮನ್ನು ಭಾವನಾತ್ಮಕವಾಗಿ ಸಂತೋಷವಾಗಿರಿಸುತ್ತದೆ. ಕುಟುಂಬದೊಂದಿಗೆ ಸಣ್ಣ ಪ್ರವಾಸವನ್ನು ಯೋಜಿಸಬಹುದು. ನಿಮ್ಮ ಮನಸ್ಥಿತಿಯ ಬದಲಾವಣೆಗಳು ನಿಮ್ಮನ್ನು ಏಕಾಂಗಿಯಾಗಿರಿಸಬಹುದು. ಈ ವಾರ ಹಣಕ್ಕೆ ಸಂಬಂಧಿಸಿದಂತೆ ಉತ್ತಮ ವಾರ. ಹಣ ಗಳಿಸುವುದಷ್ಟೇ ಅಲ್ಲ, ಹಣ ಉಳಿಸುವ ಮಾರ್ಗವನ್ನು ಹುಡುಕಿ. ಇಲ್ಲದಿದ್ದರೆ, ಭವಿಷ್ಯದಲ್ಲಿ ಭಾರೀ ತೊಂದರೆಯನ್ನು ಅನುಭವಿಸಬೇಕಾಗಬಹುದು.  ವಾರಾಂತ್ಯದಲ್ಲಿ ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. 

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯವರು ಈ ವಾರ ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣಬಹುದು. ಅದರಲ್ಲೂ ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಇದು ಉತ್ತಮ ವಾರ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ನಿಮ್ಮ ಪರವಾಗಿ ಬರಲಿವೆ. ಇದರ ಹೊರತಾಗಿ ನೀವು ತುಂಬಾ ದಮನಿತ ಭಾವನೆಯನ್ನು ಅನುಭವಿಸುತ್ತಿರುವುದರಿಂದ, ಆಂತರಿಕ ಹೋರಾಟವು ಕಿರಿಕಿರಿ ಮತ್ತು ಕೋಪವನ್ನು ಉಂಟು ಮಾಡಬಹುದು. ಆದಾಗ್ಯೂ, ಈ ವಾರಾಂತ್ಯದಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಸುಖ ಜೀವನವನ್ನು ಅನುಭವಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News