ಬೆಂಗಳೂರು : ಗ್ರಹಗಳು ಒಂದು ನಿರ್ದಿಷ್ಟ ಪಥದಲ್ಲಿ ಚಲಿಸುತ್ತಿರುತ್ತದೆ. ಗ್ರಹಗಳ ಈ ಚಲನೆಗೆ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವಿದೆ. ಗ್ರಹಗಳ ಚಲನೆ ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಫೆಬ್ರವರಿ ಆರಂಭದಲ್ಲಿಯೇ ಬುಧ ಗ್ರಹವು ಮಕರ ರಾಶಿಯನ್ನು ಪ್ರವೇಶಿಸಲಿದೆ. ಬುಧ ಗ್ರಹದ ಈ ಸಂಕ್ರಮಣದೊಂದಿಗೆ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತಿದೆ. ಜ್ಯೋತಿಷ್ಯದ ಪ್ರಕಾರ ತ್ರಿಕೋನ ರಾಜಯೋಗವನ್ನು ಮಂಗಳಕರ ಎಂದು ಹೇಳಲಾಗುತ್ತದೆ. ಇದರ ಪರಿಣಾಮವು ಮೂರು ರಾಶಿಯವರ ಮೇಲೆ ವಿಶೇಷವಾಗಿ ಗೋಚರಿಸುತ್ತದೆ.
ಮಕರ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಫೆಬ್ರವರಿ ಆರಂಭದಲ್ಲಿ, ಬುಧ ಗ್ರಹವು ಮಕರ ರಾಶಿಯನ್ನು ಪ್ರವೇಶಿಸುತ್ತದೆ. ಈ ರಾಶಿಯವರಿಗೆ ತ್ರಿಕೋನ ರಾಜಯೋಗವು ಮಂಗಳಕರವಾಗಿರುತ್ತದೆ. ಈ ರಾಶಿಯವರ ಜಾತಕದ ಲಗ್ನ ಮನೆಯಲ್ಲಿ ಈ ಸಂಕ್ರಮಣ ಸಂಭವಿಸಲಿದೆ. ಹೀಗಾಗಿ ಈ ರಾಶಿಯವರಿಗೆ ಈ ಸಮಯದಲ್ಲಿ ಹೊಸ ಉದ್ಯೋಗ ಪ್ರಸ್ತಾಪ ಬರಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಮಾನಸಿಕ ಒತ್ತಡದಿಂದ ಮುಕ್ತಿ ಸಿಗಲಿದೆ. ಈ ಅವಧಿಯಲ್ಲಿ ಮದುವೆ ಪ್ರಸ್ತಾಪಗಳು ಬರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ : Chanakya Niti : ಗಂಡಂದಿರ ಗಮನಕ್ಕೆ : ಹೆಂಡತಿಗೆ ಯಾವತ್ತೂ ಹೇಳಬೇಡಿ ಈ 4 ವಿಷಯಗಳನ್ನು!
ತುಲಾ ರಾಶಿ :
ಬುಧ ಸಂಕ್ರಮಣದಿಂದ ರೂಪುಗೊಂಡಿರುವ ತ್ರಿಕೋನ ರಾಜಯೋಗವು ತುಲಾ ರಾಶಿಯವರಿಗೂ ಅನುಕೂಲಕರವಾಗಿರಲಿದೆ. ಈ ರಾಶಿಯ ನಾಲ್ಕನೇ ಮನೆಯಲ್ಲಿ ಈ ಸಂಚಾರವು ಸಂಭವಿಸಲಿದೆ. ಇದು ದೈಹಿಕ ಸಂತೋಷ, ಆಸ್ತಿ ಮತ್ತು ತಾಯಿಯ ಸ್ಥಳವೆಂದು ಪರಿಗಣಿಸಲಾಗಿದೆ. ಹಾಗಾಗಿ ಈ ಯೋಗದಿಂದ ಎಲ್ಲಾ ರೀತಿಯ ದೈಹಿಕ ಸಂತೋಷಗಳು ಪ್ರಾಪ್ತಿಯಾಗುತ್ತವೆ. ಐಷಾರಾಮಿ ವಸ್ತುವನ್ನು ಖರೀದಿಸುವಿರಿ. ಆಸ್ತಿ ಸಂಬಂಧಿತ ಕೆಲಸಗಳಲ್ಲಿಯೂ ಯಶಸ್ಸು ಸಿಗಲಿದೆ.
ಮೇಷ ರಾಶಿ :
ವೃತ್ತಿ ಮತ್ತು ವ್ಯವಹಾರದ ದೃಷ್ಟಿಯಿಂದಲೂ ಈ ಸಮಯವು ಅನುಕೂಲಕರವಾಗಿದೆ. ಮೇಷ ರಾಶಿಯ ಹತ್ತನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಈ ಯೋಗದ ಕಾರಣದಿಂದಾಗಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಬಹುದು. ಈ ಸಮಯದಲ್ಲಿ, ಕೆಲಸದ ಸ್ಥಳದಲ್ಲಿ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕೆಲಸದ ಶೈಲಿಯಲ್ಲಿ ಸುಧಾರಣೆ ಇರಲಿದೆ. ಈ ಅವಧಿಯಲ್ಲಿ ವ್ಯಾಪಾರಸ್ಥರು ಉತ್ತಮ ಲಾಭವನ್ನು ಪಡೆಯುತ್ತಾರೆ.
ಇದನ್ನೂ ಓದಿ : Dream Interpretation: ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸುವ ಸಂಕೇತ ಈ ಕನಸುಗಳು
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.