Daily Horoscope: ಇಂದು ಈ ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರದಿಂದಿರಿ!

Horoscope Today 02 March 2024: ಇಂದು ಮಾರ್ಚ್ 2 ಶನಿವಾರ. ಇಂದು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಆರನೇ ದಿನ. ದ್ವಾದಶ ರಾಶಿಗಳ ಇಂದಿನ ದೈನಂದಿನ ಭವಿಷ್ಯ ತಿಳಿಯೋಣ... 

Written by - Chetana Devarmani | Last Updated : Mar 2, 2024, 06:54 AM IST
  • ದ್ವಾದಶ ರಾಶಿಗಳ ಇಂದಿನ ದೈನಂದಿನ ಭವಿಷ್ಯ
  • ಇಂದಿನ ಶುಭ ಮುಹೂರ್ತ
  • ಶನಿವಾರದ ದಿನ ವಿಶೇಷ ಮತ್ತು ಪಂಚಾಂಗ
Daily Horoscope: ಇಂದು ಈ ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರದಿಂದಿರಿ!  title=

Daily Horoscope In Kannada: ಇಂದು ಮಾರ್ಚ್ 2 ಶನಿವಾರ. ಇಂದು ಫಾಲ್ಗುಣ ಮಾಸದ ಶುಕ್ಲ ಪಕ್ಷದ ಆರನೇ ದಿನ. ಇಂದು ರಾಹುಕಾಲ ಬೆಳಿಗ್ಗೆ 9.39 ರಿಂದ 11.06 ರವರೆಗೆ ಇರಲಿದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬಾರದು. 

ಮೇಷ ರಾಶಿ - ಇಂದು ನಿಮಗೆ ದಿನವು ಮಂಗಳಕರವಾಗಿದೆ. ನಿಮ್ಮ ಗುರಿಯನ್ನು ಸಹ ಸಾಧಿಸಬಹುದು. ಒಡಹುಟ್ಟಿದವರ ಬೆಂಬಲ ಸಿಗಲಿದೆ.

ವೃಷಭ ರಾಶಿ - ಇಂದು ಮಾಡುವ ಕೆಲಸಗಳಲ್ಲಿ ಎಚ್ಚರಿಕೆ ಅಗತ್ಯ. ವ್ಯಾಪಾರಿಗಳು ಎಚ್ಚರಿಕೆಯಿಂದಿರಿ. ಇಂದು ಹಣದ ನಷ್ಟ ಸಂಭವಿಸುವ ಸಾಧ್ಯತೆಯಿದೆ. 

ಮಿಥುನ ರಾಶಿ - ಇಂದು ಹೊಸ ಜವಾಬ್ದಾರಿ ಹೆಗಲೇರಬಹುದು. ಇಂದು ದೊಡ್ಡ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಹಿರಿಯರ ಮಾತನ್ನು ಕೇಳುವುದರಿಂದ ಲಾಭವಾಗುವುದು. 

ಕರ್ಕ ರಾಶಿ - ಇಂದು ಕೆಲಸದ ಹೊರೆ ಹೆಚ್ಚಾಗಬಹುದು. ಇಡೀ ದಿನ ಬ್ಯುಸಿಯಾಗಿರುವಿರಿ. ಪ್ರಯಾಣದಿಂದ ಲಾಭವಿದೆ. ಇಂದು ಪ್ರಾಣಿಗಳಿಗೆ ಆಹಾರ ನೀಡುವುದು ಶುಭ ತರುವುದು. 

ಇದನ್ನೂ ಓದಿ: ಶನಿ ಉದಯದಿಂದ ಈ 3 ರಾಶಿಯವರಿಗೆ ʻಧನಿಕ ಕೋಟ್ಯಾಧಿಪತಿ ಯೋಗʼ.. ಹಣದ ಮಳೆ, ಅಪಾರ ಯಶಸ್ಸು.. ಅದೃಷ್ಟವಂತರೆಂದರೆ ನೀವೇ! 

ಸಿಂಹ -  ಹಣ ಹೂಡಿಕೆ ಮಾಡುವವರು ಜಾಗರೂಕರಾಗಿರಬೇಕು. ಎಂಥ ಪರಿಸ್ಥಿತಿಯಲ್ಲಿಯೂ ಸಿಟ್ಟಿಗೇಳಬೇಡಿ, ಶಾಂತವಾಗಿರಿ. ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಿ. 

ಕನ್ಯಾ ರಾಶಿ - ಯಾರನ್ನೂ ಬಹುಬೇಗ ನಂಬಬೇಡಿ. ನಿಮ್ಮ ಬಗ್ಗೆ ಅಸೂಯೆಪಡುವವರ ಸಂಖ್ಯೆ ಹೆಚ್ಚಾಗಬಹುದು. ಸಾಲದಿಂದ ದೂರವಿರುವುದು ಉತ್ತಮ. 

ತುಲಾ ರಾಶಿ - ಇಂದು ಮಿಶ್ರದಿನ. ನೆಗೆಟಿವ್‌ ವಿಚಾರಗಳಿಂದ ದೂರವಿರುವುದು ಉತ್ತಮ. ವ್ಯಾಪಾರವನ್ನು ಸುಧಾರಿಸಲು ಯೋಜನೆ ರೂಪಿಸುವಿರಿ. 

ವೃಶ್ಚಿಕ ರಾಶಿ - ಇಂದು ಕೆಲಸದ ಒತ್ತಡ ನಿಮ್ಮನ್ನು ಕಾಡಬಹುದು. ಸೋಮಾರಿತನ ಮತ್ತು ಆಯಾಸದಿಂದ ಅಂದುಕೊಂಡಿದ್ದನ್ನು ಸಾಧಿಸಲು ಕಷ್ಟಪಡುವಿರಿ. 

ಧನು ರಾಶಿ - ಹೊಸ ಆದಾಯದ ಮೂಲ ಸಿಗಬಹುದು. ಸಾಲದ ಮೊತ್ತವನ್ನು ಮರುಪಡೆಯಲು ಕಷ್ಟಪಡಬೇಕಾಗಬಹುದು. 

ಮಕರ ರಾಶಿ - ಇಂದು ಉತ್ತಮ ದಿನವಾಗಿದೆ. ವ್ಯಾಪಾರದಲ್ಲಿ ಆದಾಯವು ಹೆಚ್ಚಾಗುವ ಸಾಧ್ಯತೆಯಿದೆ. ಗೋವಿನ ಸೇವೆ ಮಾಡಬೇಕು. 

ಇದನ್ನೂ ಓದಿ: Navpancham Rajyog 2024: ಶೀಘ್ರದಲ್ಲೇ ಕೇತು-ಗುರುವಿನ ಕೃಪೆಯಿಂದ ನವಪಂಚಮ ಯೋಗ ರಚನೆ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ! 

ಕುಂಭ ರಾಶಿ - ಇಂದು ಕೆಲಸದ ಹೊರೆ ಹೆಚ್ಚಾಗುವುದು. ವ್ಯಾಪಾರಸ್ಥರಿಗೆ ಉತ್ತಮ ದಿನ. ಆಹನ ಚಲಾಯಿಸುವಾಗ ಇಂದು ಎಚ್ಚರದಿಂದಿರಿ. 

ಮೀನ ರಾಶಿ - ಇಂದು ಮಾತನಾಡುವಾಗ ಬಹಳ ಎಚ್ಚರದಿಂದಿರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಅನಗತ್ಯ ವಿಷಯಗಳ ಬಗ್ಗೆ ಚಿಂತಿಸಬಾರದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News