ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಮೇಲೆ ಧನವೃಷ್ಟಿ ಮಾಡಲಿದ್ದಾನೆ ಸೂರ್ಯ

ಧನು ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಈ ಯೋಗಗಳು ನಾಲ್ಕು ರಾಶಿಯವರಿಗೆ ವರವಾಗಿ ಪರಿಣಮಿಸಲಿದೆ.   ನಾಲ್ಕು ರಾಶಿಯವರ ಜೀವನದಲ್ಲಿ  ಸ್ಥಾನಮಾನ ಕೀರ್ತಿ ಯಶಸ್ಸು ಧನ ಸಂಪತ್ತು  ಪ್ರಾಪ್ತಿಯಾಗುವುದು. 

Written by - Ranjitha R K | Last Updated : Dec 14, 2022, 08:25 AM IST
  • ಧನು ರಾಶಿಯಲ್ಲಿ ಶುಕ್ರ ಮತ್ತು ಬುಧ ಗ್ರಹಗಳ ಸಂಯೋಗ
  • ಡಿಸೆಂಬರ್ 16 ಕ್ಕೆ ಧನು ರಾಶಿಯಲ್ಲಿ ಸೂರ್ಯ ಸಂಕ್ರಮಣ
  • ಸ್ಥಾನಮಾನ ಕೀರ್ತಿ ಯಶಸ್ಸು ಧನ ಸಂಪತ್ತು ಪ್ರಾಪ್ತಿ
ಇನ್ನೆರಡು ದಿನಗಳಲ್ಲಿ ಈ ರಾಶಿಯವರ ಮೇಲೆ ಧನವೃಷ್ಟಿ ಮಾಡಲಿದ್ದಾನೆ ಸೂರ್ಯ  title=
Surya Budh Shukra in Dhanu

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನ ಬಹಳ ಮುಖ್ಯವಾಗಿರುತ್ತದೆ. ಧನು ರಾಶಿಯಲ್ಲಿ ಶುಕ್ರ ಮತ್ತು ಬುಧ ಗ್ರಹಗಳ ಸಂಯೋಗದಿಂದಾಗಿ ಈಗಾಗಲೇ ಲಕ್ಷ್ಮೀನಾರಾಯಣ ಯೋಗ  ರೂಪುಗೊಂಡಿದೆ. ಇದೀಗ ಮತ್ತೆ ಎರಡು ದಿನಗಳ ಬಳಿಕ ಅಂದರೆ ಡಿಸೆಂಬರ್ 16 ಕ್ಕೆ ಸೂರ್ಯ ಕೂಡಾ ಧನು ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಸೂರ್ಯ ಧನು ರಾಶಿಯಲ್ಲಿ ಸಂಕ್ರಮಿಸಿದ ಕೂಡಲೇ  ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ. ಮಾತ್ರವಲ್ಲ, ಬುಧಾದಿತ್ಯ ಯೋಗ ಕೂಡಾ ನಿರ್ಮಾಣವಾಗಲಿದೆ. ಧನು ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಈ ಯೋಗಗಳು ನಾಲ್ಕು ರಾಶಿಯವರಿಗೆ ವರವಾಗಿ ಪರಿಣಮಿಸಲಿದೆ.  

 ಸ್ಥಾನಮಾನ ಕೀರ್ತಿ ಯಶಸ್ಸು ಧನ ಸಂಪತ್ತು  ಪ್ರಾಪ್ತಿ : 
ವೃಷಭ ರಾಶಿ : ಧನು ರಾಶಿಯಲ್ಲಿ ರಚನೆಯಾಗುತ್ತಿರುವ ತ್ರಿಗ್ರಾಹಿ ಯೋಗವು ವೃಷಭ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ  ರಾಶಿಯವರು ವೃತ್ತಿಜೀವನದಲ್ಲಿ ದೊಡ್ಡ ಪ್ರಗತಿಯನ್ನು ಪಡೆಯಬಹುದು. ಕೆಲಸವನ್ನು ಬದಲಾಯಿಸಬೇಕು ಎಂದು ಅಂದು ಕೊಂಡವರಿಗೆ ಇದು ಉತ್ತಮ ಸಮಯವಾಗಿರಲಿದೆ. ಈ ಸಮಯದಲ್ಲಿ ನೀವಾಡುವ ಮಾತು ಎದುರಿಗಿರುವವರ ಮೇಲೆ ಭಾರೀ ಪರಿಣಾಮ ಬೀರುತ್ತದೆ. ನಿಮ್ಮ ಪ್ರತಿ ಮಾತಿಗೂ ಎದುರಿಗಿರುವವರು ಬೆಲೆ ನೀಡುತ್ತಾರೆ.  ಹಿಂದೆಂದೂ ಕಾಣದ ಆರ್ಥಿಕ ಸ್ಥಿತಿ ನಿಮ್ಮದಾಗುತ್ತದೆ. 

ಇದನ್ನೂ ಓದಿ : Eye Blinking: ಮಹಿಳೆ ಹಾಗೂ ಪುರುಷರಲ್ಲಿ ಯಾವ ಕಣ್ಣು ಹೊಡೆದುಕೊಂಡರೆ ಶುಭ-ಅಶುಭ

ತುಲಾ ರಾಶಿ : ಈ ಯೋಗವು ತುಲಾ ರಾಶಿಯ ಜನರಿಗೆ ಸಹ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಮಾರ್ಕೆಟಿಂಗ್, ಮಾಧ್ಯಮಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿರುವವರಿಗೆ ವಿಶೇಷ ಲಾಭವಾಗಲಿದೆ.  ವೃತ್ತಿಯಲ್ಲಿ ಬಡ್ತಿ, ಇನ್‌ಕ್ರಿಮೆಂಟ್ ಅವಕಾಶ ಹೆಚ್ಚಿದೆ. ಹೊಸ ಉದ್ಯೋಗಾವಕಾಶಗಳನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಸ್ಥಿತಿ  ಉತ್ತಮವಾಗಿರುತ್ತದೆ. ಇಲ್ಲಿಯವರೆಗೆ ಅನುಭವಿಸಿದ ಕಷ್ಟಗಳು ಕೊನೆಯಾಗುವುದು. ಈ ಸಮಯವು ಹಣ ಮತ್ತು ವೃತ್ತಿಯ ವಿಷಯದಲ್ಲಿ ಅದ್ಭುತವಾಗಿರುತ್ತದೆ. ನೀವು ಅಂದು ಕೊಂಡ ಕೆಲಸ ನೆರವೇರುತ್ತದೆ. 

ಧನು ರಾಶಿ  : ಧನು ರಾಶಿಯಲ್ಲಿಯೇ ಸೂರ್ಯ, ಬುಧ ಮತ್ತು ಶುಕ್ರಗ್ರಹಗಳು ಸೇರುತ್ತಿದ್ದು, ಧನು ರಾಶಿಯವರಿಗೆ ಗರಿಷ್ಠ ಲಾಭ ಸಿಗುತ್ತದೆ.  ಈ ಹೊತ್ತಿನಲ್ಲಿ ಧನು ರಾಶಿಯವರು ಗೌರವ, ಹಣ, ಸ್ಥಾನಮಾನ ಎಲ್ಲವನ್ನೂ ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಸುಲಭವಾಗಿ ನಿಮ್ಮ ಗುರಿ ಸಾಧಿಸುವುದು ಸಾಧ್ಯವಾಗುತ್ತದೆ. 

ಇದನ್ನೂ ಓದಿ : Palmistry: ಹಸ್ತದಲ್ಲಿ ಈ ರೇಖೆಯಿದ್ರೆ ಸರ್ಕಾರಿ ಉದ್ಯೋಗ ನಿಮ್ಮದಾಗುತ್ತದೆ

ಮೀನ ರಾಶಿ  : ಈ ಮಂಗಳಕರ ಯೋಗವು ಮೀನ ರಾಶಿಯವರ ಬಾಳಿನಲ್ಲೂ ಹೊಸ ಕಿರಣ ಮೂಡಿಸಲಿದೆ.  ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಹೊಸ ಆಫರ್‌ಗಳು ಬರಲಿವೆ. ಹಣಕಾಸಿನ ಪ್ರಯೋಜನವಾಗಲಿದೆ. ಆದರೆ ನೆನಪಿರಲಿ ಯಾವುದೇ ಕಾರಣಕ್ಕೂ ಯಾರಿಂದಲ್ಲೂ ಸಾಲ ತೆಗೆದುಕೊಳ್ಳುವುದು ಅಥವಾ ಸಾಲ ಕೊಡುವುದು ಬೇಡ. ಯಾವುದೇ ರೀತಿಯ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳಲು ಹೋಗಬೇಡಿ. ನೆಮ್ಮದಿಯ ಬದುಯ್ಕು ನಿಮ್ಮದಾಗುವುದು.

 

( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News