ಶನಿ ದೇವನ ಪ್ರಿಯ ರಾಶಿಗಳಿವು: ಇವರಿಗೆ ಜೀವನದಲ್ಲಿ ಸೋಲೆಂಬುದೇ ಇಲ್ಲ

Shani Favorite Zodiac Signs: ಪ್ರತಿಯೊಬ್ಬರಿಗೂ ಅವರ ಕೆಲಸಗಳಿಗೆ ಪಾಪ-ಪುಣ್ಯಗಳಿಗೆ ತಕ್ಕಂತೆ ಫಲವನ್ನು ನೀಡುವ ಕರ್ಮಫಲ ದಾತ ಶನಿ ದೇವನು ಮೂರು ರಾಶಿಯವರ ಮೇಲೆ ಸದಾ ಕೃಪೆಯನ್ನು ತೋರುತ್ತಾನೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಯಾವ ರಾಶಿಯವರ ಮೇಲೆ ಶನಿದೇವನ ಕೃಪಾಕಟಾಕ್ಷ ಇರುತ್ತದೆ ಎಂದು ತಿಳಿಯಿರಿ. 

Written by - Yashaswini V | Last Updated : Jul 19, 2023, 08:06 AM IST
  • ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶ ರಾಶಿಚಕ್ರಗಳಲ್ಲಿ ಮೂರು ರಾಶಿಯವರ ಮೇಲೆ ಶನಿಯು ಸದಾ ತನ್ನ ವಿಶೇಷ ಆಶೀರ್ವಾದವನ್ನು ತೋರುತ್ತಾನೆ.
  • ಇದರಿಂದಾಗಿ ಆ ರಾಶಿಯವರು ಜೀವನದಲ್ಲಿ ಎಷ್ಟೇ ಕಷ್ಟಗಳನ್ನು ಎದುರಿಸಿದರೂ ಕೂಡ ಎಲ್ಲವನ್ನೂ ಧೈರ್ಯದಿಂದ ಮೆಟ್ಟಿ ನಿಲ್ಲುತ್ತಾರೆ.
  • ಇವರಿಗೆ ಸೋಲು ಎಂಬುದೇ ಇರುವುದಿಲ್ಲ. ಅಷ್ಟೇ ಅಲ್ಲ, ಜೀವನದಲ್ಲಿ ಸುಖ-ಸಂಪತ್ತನ್ನು ಕೂಡ ಅನುಭವಿಸುತ್ತಾರೆ ಎಂಬ ನಂಬಿಕೆಯೂ ಇದೆ.
ಶನಿ ದೇವನ ಪ್ರಿಯ ರಾಶಿಗಳಿವು: ಇವರಿಗೆ ಜೀವನದಲ್ಲಿ ಸೋಲೆಂಬುದೇ ಇಲ್ಲ title=
Shani Favorite Zodiac Signs

Shani Favorite Zodiac Signs: ಜ್ಯೋತಿಷ್ಯಶಾಸ್ತ್ರದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಎಂದು ಬಣ್ಣಿಸಲ್ಪಡುವ ಛಾಯಾ ಪುತ್ರ ಶನಿ ದೇವನ ಹೆಸರು ಕೇಳಿದರೆ ಪ್ರತಿಯೊಬ್ಬರೂ ಹೆದರುತ್ತಾರೆ. ಇದಕ್ಕೆ ಮುಖ್ಯ ಕಾರಣ ಶನಿ ಯಾವುದೇ ವ್ಯಕ್ತಿಯ ಬೆನ್ನತ್ತಿದರೂ ಅವರನ್ನು ಬಿಟ್ಟೂ ಬಿಡದಂತೆ ಕಾಡುತ್ತಾನೆ. ವ್ಯಕ್ತಿ ಪಾಪದ ಪ್ರತಿ ಲೆಕ್ಕವನ್ನೂ ಇಡುವ ಶನಿಯು ಪ್ರತಿ ಪಾಪಕ್ಕೂ ಶಿಕ್ಷೆ ನೀಡೇ ನೀಡುತ್ತಾನೆ. ಆದಾಗ್ಯೂ, ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರ ಮೇಲೆ ಶನಿದೇವನ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ. 

ಹೌದು, ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದ್ವಾದಶ ರಾಶಿಚಕ್ರಗಳಲ್ಲಿ ಮೂರು ರಾಶಿಯವರ ಮೇಲೆ ಶನಿಯು ಸದಾ ತನ್ನ ವಿಶೇಷ ಆಶೀರ್ವಾದವನ್ನು ತೋರುತ್ತಾನೆ. ಇದರಿಂದಾಗಿ ಆ ರಾಶಿಯವರು ಜೀವನದಲ್ಲಿ ಎಷ್ಟೇ ಕಷ್ಟಗಳನ್ನು ಎದುರಿಸಿದರೂ ಕೂಡ ಎಲ್ಲವನ್ನೂ ಧೈರ್ಯದಿಂದ ಮೆಟ್ಟಿ ನಿಲ್ಲುತ್ತಾರೆ. ಇವರಿಗೆ ಸೋಲು ಎಂಬುದೇ ಇರುವುದಿಲ್ಲ. ಅಷ್ಟೇ ಅಲ್ಲ, ಜೀವನದಲ್ಲಿ ಸುಖ-ಸಂಪತ್ತನ್ನು ಕೂಡ ಅನುಭವಿಸುತ್ತಾರೆ ಎಂಬ ನಂಬಿಕೆಯೂ ಇದೆ. ಹಾಗಾಗಿ, ಇವುಗಳನ್ನು ಶನಿದೇವನ ಪ್ರಿಯ ರಾಶಿಗಳು ಎಂದು ಕರೆಯಲಾಗುತ್ತದೆ. 

ಇದನ್ನೂ ಓದಿ- Surya Gochar: ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ನಿಮ್ಮ ರಾಶಿಗೆ ಅನುಗುಣವಾಗಿ ಈ ರೀತಿ ಪರಿಹಾರ ಕೈಗೊಳ್ಳಿ

ಈ ಮೂರು ರಾಶಿಯವರ ಮೇಲೆ ಸದಾ ಇರುತ್ತೆ ಶನಿ ದೇವನ ವಿಶೇಷ ಆಶೀರ್ವಾದ:-
ತುಲಾ ರಾಶಿ: 

ಶನಿದೇವನ ಪ್ರಿಯ ರಾಶಿಗಳಲ್ಲಿ ಮೊತ್ತ ಮೊದಲ ರಾಶಿ ತುಲಾ ರಾಶಿ. ಈ ರಾಶಿಯವರಿಗೆ ಸದಾ ಶನಿ ದೇವನ ವಿಶೇಷ ಆಶೀರ್ವಾದ ಇರಲಿದೆ. ತುಂಬಾ ಶ್ರಮ ಜೀವಿಗಳು,  ಭಾವೋದ್ರಿಕ್ತರು, ದಯೆ ಮತ್ತು ಪ್ರಾಮಾಣಿಕರೂ ಆಗಿರುವ ತುಲಾ ರಾಶಿಯ ಜನರು ಪ್ರಭಾವಿ ವ್ಯಕ್ತಿತ್ವದ ಮಾಲೀಕರು. ಇವರ ಜೀವನದಲ್ಲಿ ಪ್ರತಿ ಹಂತದಲ್ಲೂ ನಾನಾ ರೀತಿಯ ಸಂಕಷ್ಟಗಳು ಎದುರಾಗುತ್ತವೆ. ಆದರೂ, ಶನಿಯ ಕೃಪೆಯಿಂದಾಗಿ ಇವರು ಪ್ರತಿ ಕೆಲಸದಲ್ಲೂ ಜಯ ಕಾಣುತ್ತಾರೆ. 

ಮಕರ ರಾಶಿ: 
ಶನಿ ಮಹಾತ್ಮನ ನೆಚ್ಚಿನ ರಾಶಿಗಳಲ್ಲಿ ಮಕರ ರಾಶಿಯೂ ಒಂದು. ಮಾತ್ರವಲ್ಲ, ಶನಿ ಮಕರ ರಾಶಿಯ ಅಧಿಪತಿಯೂ ಹೌದು. ತುಂಬಾ ಶ್ರಮ ಜೀವಿಗಳು ಹಾಗೂ ಉತ್ಸಾಹಿಗಳೂ ಆಗಿರುವ ಮಕರ ರಾಶಿಯವರು ಯಾವುದೇ ಕೆಲಸದಲ್ಲಾದರೂ ತುಂಬಾ ನಿಷ್ಠೆಯನ್ನು ಹೊಂದಿರುತ್ತಾರೆ. ಶನಿಯ ಕೃಪಾಕಟಾಕ್ಷದಿಂದಾಗಿ ಈ ರಾಶಿಯವರು ಸದಾ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಹಾಗಾಗಿ, ಇವರ ಕೆಲಸದಲ್ಲಿ ಎಂದಿಗೂ ಎಂತಹದ್ದೇ ಅಡೆತಡೆಗಳು ಎದುರಾದರೂ ಶನಿ ದೇವನು ಸದಾ ಇವರ ಬೆಂಬಲಕ್ಕೆ ನಿಲ್ಲುತ್ತಾನೆ. 

ಇದನ್ನೂ ಓದಿ- Ketu Gochara 2023: ಅಕ್ಟೋಬರ್‌ನಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ

ಕುಂಭ ರಾಶಿ: 
ಕುಂಭ ರಾಶಿಯ ಅಧಿಪತಿ ಗ್ರಹವೂ ಆಗಿರುವ ಶನಿದೇವ ಈ ರಾಶಿಯವರಿಗೆ ಸದಾ ತನ್ನ ವಿಶೇಷ ಆಶೀರ್ವಾದವನ್ನು ನೀಡುತ್ತಾನೆ. ಸ್ವಭಾವತಃ ತುಂಬಾ ಧರ್ಮನಿಷ್ಠರು, ಪ್ರಾಮಾಣಿಕರು ಮತ್ತು ತಾಳ್ಮೆಯುಳ್ಳವರು ಆಗಿರುವ ಈ ರಾಶಿಯವರಿಗೆ ಶನಿ ಕೃಪೆಯಿಂದಾಗಿ ಎಂದಿಗೂ ಹಣಕಾಸಿನ ಸಮಸ್ಯೆಗಳು ಇರುವುದಿಲ್ಲ. ಮಾತ್ರವಲ್ಲ, ಇವರ ಜೀವನದಲ್ಲಿ ಶನಿಯ ಅಶುಭ ಪರಿಣಾಮಗಳು ಕಡಿಮೆ ಎಂತಲೇ ಹೇಳಲಾಗುತ್ತದೆ. ಈ ರಾಶಿಯವರು ಶನಿಯ ವಿಶೇಷ ಅನುಗ್ರಹದಿಂದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು, ಗೌರವವನ್ನು ಪಡೆಯುತ್ತಾರೆ. 

ಸೂಚನೆ:  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News