ಈ ರಾಶಿಯವರ ಮೇಲೆ ಶನಿದೇವನ ವಿಶೇಷ ಕೃಪೆ; ಶ್ರಾವಣದ 3ನೇ ಶನಿವಾರ ವಿಶೇಷ ಪೂಜೆ ಮಾಡಿ

ಶ್ರಾವಣ ಮಾಸದಲ್ಲಿ ಶಿವನ ಜೊತೆಗೆ ಶನಿ ದೇವನನ್ನು ಪೂಜಿಸುವುದರಿಂದ ಬಹಳಷ್ಟು ಪ್ರಯೋಜನ ಸಿಗುತ್ತದೆ. ಶನಿ ದೇವನನ್ನು ಶ್ರಾವಣದಲ್ಲಿ ಪೂಜಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಗಳ ಮೇಲೆ ಶನಿದೇವ ವಿಶೇಷ ಅನುಗ್ರಹ ನೀಡುತ್ತಾನೆ.

Written by - Puttaraj K Alur | Last Updated : Jul 28, 2022, 07:36 PM IST
  • ಶನಿದೇವನ ಕೃಪೆಯಿಂದ ಮಕರ ರಾಶಿಯವರು ಎಲ್ಲಾ ರೀತಿಯ ಯಶಸ್ಸು ಪಡೆಯುತ್ತಾರೆ
  • ಶನಿದೇವನ ಆಶೀರ್ವಾದದಿಂದ ತುಲಾ ರಾಶಿಯ ಜನರ ಜೀವನದಲ್ಲಿ ಸೌಕರ್ಯಗಳ ಕೊರತೆ ಇರಲ್ಲ
  • ಶನಿದೇವನ ಅನುಗ್ರಹದಿಂದ ಕುಂಬ ರಾಶಿಯವರ ಜೀವನವು ಸಂತಸದಿಂದ ಕೂಡಿರುತ್ತದೆ
ಈ ರಾಶಿಯವರ ಮೇಲೆ ಶನಿದೇವನ ವಿಶೇಷ ಕೃಪೆ; ಶ್ರಾವಣದ 3ನೇ ಶನಿವಾರ ವಿಶೇಷ ಪೂಜೆ ಮಾಡಿ title=
ಈ ರಾಶಿಯವರ ಮೇಲೆ ಶನಿದೇವನ ವಿಶೇಷ ಕೃಪೆ

ನವದೆಹಲಿ: ಶನಿವಾರವನ್ನು ಶನಿದೇವನ ದಿನವೆಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಶನಿವಾರ ಬಂದರೆ ಅದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಶ್ರಾವಣ ಮಾಸದ ಶನಿವಾರದಂದು ಪೂಜಿಸುವುದರಿಂದ ಶನಿದೇವನ ವಿಶೇಷ ಕೃಪೆ ನಿಮಗೆ ಸಿಗುತ್ತದೆ. ಇದರಿಂದ ಶನಿ ದೋಷದ ಪ್ರಭಾವವೂ ಕಡಿಮೆಯಾಗುತ್ತದೆ.

ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳು ಶನಿ ದೇವನಿಗೆ ತುಂಬಾ ಪ್ರಿಯವಾಗಿವೆ. ಈ ರಾಶಿಯ ಜನರ ಮೇಲೆ ಶನಿದೇವನ ವಿಶೇಷ ಪ್ರೀತಿ ಇರುತ್ತದೆ. ಈ ಬಾರಿ ಶ್ರಾವಣದ 3ನೇ ಶನಿವಾರವು ಜುಲೈ 30ರಂದು ಬರುತ್ತಿದೆ. ಇಂತಹ ಸಮಯದಲ್ಲಿ ಶನಿವಾರ ಈ ರಾಶಿಯವರು ವಿಶೇಷ ಪೂಜೆ ಮಾಡುವುದರಿಂದ ಬಹಳಷ್ಟು ಲಾಭ ದೊರೆಯುತ್ತದೆ.

ಇದನ್ನೂ ಓದಿ: Astro Tips: ಖರ್ಚು ಮತ್ತು ಸಾಲ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಇಲ್ಲಿದೆ ನೋಡಿ ಪರಿಹಾರ

ಮಕರ ರಾಶಿ: ಶನಿದೇವ ಮಕರ ರಾಶಿಯ ಅಧಿಪತಿ. ಈ ರಾಶಿಯ ಜನರು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇವರ ಮೇಲೆ ಶನಿದೇವನ ವಿಶೇಷ ಕೃಪೆ ಇರುತ್ತದೆ. ಇದರೊಂದಿಗೆ ಮಕರ ರಾಶಿಯವರು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಅವರ ವೈವಾಹಿಕ ಜೀವನವೂ ತುಂಬಾ ಸಂತೋಷವಾಗಿರುತ್ತದೆ.

ತುಲಾ ರಾಶಿ: ಶನಿದೇವನು ತುಲಾ ರಾಶಿಯವರ ಮೇಲೆ ವಿಶೇಷ ಪ್ರೀತಿಯನ್ನು ಹೊಂದಿರುತ್ತಾನೆ. ತುಲಾ ರಾಶಿಯಲ್ಲಿ ಶನಿ ದೇವನನ್ನು ಶ್ರೇಷ್ಠನೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಇವರ ಜೀವನವು ತುಂಬಾ ಸಂತೋಷಮಯವಾಗಿರುತ್ತದೆ ಶನಿದೇವನ ಆಶೀರ್ವಾದದಿಂದ ಈ ರಾಶಿಯ ಜನರ ಜೀವನದಲ್ಲಿ ಎಂದಿಗೂ ಸೌಕರ್ಯಗಳ ಕೊರತೆ ಇರುವುದಿಲ್ಲ.

ಇದನ್ನೂ ಓದಿ: Pearl Benefits: ಈ ರಾಶಿಯವರು ಮುತ್ತು ಧರಿಸುವುದರಿಂದ ಲಕ್ಷ್ಮಿ ಕೃಪೆಗೆ ಪಾತ್ರರಾಗುತ್ತಾರೆ 

ಕುಂಭ ರಾಶಿ: ಶನಿದೇವನ ಋಣಾತ್ಮಕ ದೃಷ್ಟಿಯಿಂದ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಶನಿದೇವನ ಅನುಗ್ರಹದಿಂದ ಈ ರಾಶಿಯವರ ಜೀವನವು ಸಂತೋಷವಾಗುತ್ತದೆ. ಶನಿದೇವನ 2ನೇ ರಾಶಿ ಕುಂಭ. ಈ ರಾಶಿಯವರಿಗೆ ಶನಿದೇವನ ಆಶೀರ್ವಾದ ಸದಾ ಇರುತ್ತದೆ. ಈ ಜನರು ಎಂದಿಗೂ ಯಾವುದೇ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ. ಹಣದ ಕೊರತೆ ಇರುವುದಿಲ್ಲ ಮತ್ತು ಸಮಾಜದಲ್ಲಿ ಗೌರವ ಸದಾ ಇರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News