Saturn Transit Effect: ಮಕರ ರಾಶಿಗೆ ಶನಿ ಪ್ರವೇಶ- ಈ ರಾಶಿಯವರಿಗೆ ಹೊಸ ಉದ್ಯೋಗ-ಬಡ್ತಿ ಸಾಧ್ಯತೆ

Saturn Transit Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿ ಶನಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಶನಿಯು ಕರ್ಮಗಳಿಗೆ ತಕ್ಕ ಫಲ ನೀಡುವ ಕರ್ಮಫಲ ದಾತ ಹಾಗಾಗಿಯೇ ಶನಿಯ ರಾಶಿ ಪರಿವರ್ತನೆ ಬಗ್ಗೆ ಪ್ರತಿಯೊಬ್ಬರೂ ಸ್ವಲ್ಪ ಎಚ್ಚರಿಕೆಯಿಂದ ಇರುತ್ತಾರೆ. ಇದೀಗ ಜುಲೈ ತಿಂಗಳಿನಲ್ಲಿ ಶನಿ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶನಿಯ ಈ ರಾಶಿ ಬದಲಾವಣೆಯು ಮೂರು ರಾಶಿಯವರ ಜೀವನದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Jul 4, 2022, 07:24 PM IST
  • ಜುಲೈ 12 ರಂದು ಶನಿಯು ಕುಂಭ ರಾಶಿಯಿಂದ ಹಿಮ್ಮೆಟ್ಟುವ ಮೂಲಕ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.
  • ಶನಿಯ ಬದಲಾವಣೆಯು 3 ರಾಶಿಯ ಜನರ ಜೀವನದಲ್ಲಿ ಅದೃಷ್ಟವನ್ನು ಬೆಳಗಿಸುತ್ತದೆ ಎಂದು ನಂಬಲಾಗಿದೆ
  • ಶನಿಯ ರಾಶಿ ಬದಲಾವಣೆಯಿಂದ ಯಾರಿಗೆ ಲಾಭ ತಿಳಿಯಿರಿ.
Saturn Transit Effect: ಮಕರ ರಾಶಿಗೆ ಶನಿ ಪ್ರವೇಶ- ಈ ರಾಶಿಯವರಿಗೆ ಹೊಸ ಉದ್ಯೋಗ-ಬಡ್ತಿ ಸಾಧ್ಯತೆ  title=
Saturn Transit in Capricorn effect

ಜುಲೈನಲ್ಲಿ ಶನಿ ರಾಶಿ ಬದಲಾವಣೆ ಪರಿಣಾಮ:  ನವಗ್ರಹಗಳೂ ಸಹ ತಮ್ಮ ನಿರ್ದಿಷ್ಟ ಅವಧಿಯಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಅಂತೆಯೇ ನಿಧಾನವಾಗಿ ಚಲಿಸುವ ಗ್ರಹ ಎಂದೇ ಖ್ಯಾತಿ ಪಡೆದಿರುವ ಶನಿದೇವನು ಜುಲೈ ಮಾಸದಲ್ಲಿ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶನಿಯು ರಾಶಿಚಕ್ರವನ್ನು ಬದಲಾಯಿಸಿದಾಗ ಅಥವಾ ಹಿಮ್ಮುಖ (ಶನಿ ವಕ್ರಿ) ಸ್ಥಿತಿಯಲ್ಲಿದ್ದಾಗ, ಅದರ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಬೀಳುತ್ತದೆ. ಶನಿಯು ಈ ಬಾರಿ  ಕುಂಭ ರಾಶಿಯಲ್ಲಿ ಹಿಮ್ಮೆಟ್ಟುವ ಮೂಲಕ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿಯ ಈ ಹಿಮ್ಮುಖ ಚಲನೆಯು ಮೂರು ರಾಶಿಯವರಿಗೆ ಅದೃಷ್ಟವನ್ನೇ ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ. 

ವಾಸ್ತವವಾಗಿ, ಜುಲೈ 12ರದ್ನು ಶನಿಯು ಮಕರ ರಾಶಿಯಲ್ಲಿ ಸಾಗಲಿದ್ದಾನೆ. ಶನಿಯ ಈ ಹಿಮ್ಮುಖ ಚಲನೆಯಿಂದಾಗಿ ಕರ್ಕಾಟಕ ರಾಶಿ ಹಾಗೂ ವೃಶ್ಚಿಕ ರಾಶಿಯವರು ಶನಿಯ ಧೈಯಾ ಪ್ರಭಾವದಿಂದ ಮುಕ್ತಿ ಪಡೆಯಲಿದ್ದಾರೆ. ಇದಲ್ಲದೆ, ಶನಿಯ ಈ ರಾಶಿ ಪರಿವರ್ತನೆಯು ಮೂರು ರಾಶಿಯ ಜನರಿಗೆ ಸುವರ್ಣ ದಿನಗಳನ್ನು ತರಲಿದೆ. ಅವರು ತಮ್ಮ ಉದ್ಯೋಗ-ವ್ಯವಹಾರದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಶನಿಯ ಈ ರಾಶಿ ಪರಿವರ್ತನೆ ಯಾವ ರಾಶಿಯವರಿಗೆ ಶುಭ ಎಂದು ತಿಳಿಯೋಣ...

ಇದನ್ನೂ ಓದಿ- ಶನಿ ಕೋಪದಿಂದ ಪಾರಾಗಲು ಈ ಕೆಲಸಗಳಿಂದ ದೂರವಿರಿ; ಇಲ್ಲದಿದ್ರೆ ಸಮಸ್ಯೆ ತಪ್ಪಿದ್ದಲ್ಲ!

ಶನಿ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ತುಂಬಾ ಮಂಗಳಕರ:-
ಮೇಷ ರಾಶಿ- 

ಮಕರ ರಾಶಿಗೆ ಶನಿಯ ಹಿಮ್ಮೆಟ್ಟುವಿಕೆಯು ಮೇಷ ರಾಶಿಯ ಜನರಿಗೆ ಉತ್ತಮ ಸಮಯ ಎಂದೆ ಹೇಳಬಹುದು.  ಈ ಸಮಯವು ನಿಮ್ಮ ಜೀವನದಲ್ಲಿ ಸುವರ್ಣ ದಿನಗಳ ಆರಂಭವನ್ನು ಸೂಚಿಸುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಸಾಕಷ್ಟು ಯಶಸ್ಸು ಪ್ರಾಪ್ತಿಯಾಗಲಿದೆ. ಬಡ್ತಿ ಸಾಧ್ಯತೆಯೂ ಇದೆ. ವ್ಯಾಪಾರಿಗಳು ದೊಡ್ಡ ಆರ್ಡರ್‌ಗಳನ್ನು ಪಡೆಯುವ ಸಾಧ್ಯತೆಗಳಿವೆ.  ಅಗತ್ಯ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗಾಕಾಂಕ್ಷಿಗಳು ಲಾಭ ಪಡೆಯಬಹುದು. ಯಾವುದೇ ಆಸ್ತಿಯಿಂದ ನೀವು ಲಾಭ ಪಡೆಯಬಹುದು.  

ಕನ್ಯಾ ರಾಶಿ - 
ಮಕರ ರಾಶಿಯಲ್ಲಿ ಹಿಮ್ಮೆಟ್ಟುವ ಶನಿಯ ಸಂಚಾರವು ಕನ್ಯಾ ರಾಶಿಯವರ ವ್ಯವಹಾರದಲ್ಲಿ ಆರ್ಥಿಕ ಪ್ರಗತಿಯನ್ನು ತರಲಿದೆ. ಉದ್ಯೋಗದಲ್ಲಿ ಎಷ್ಟೇ ಸವಾಲುಗಳು ಎದುರಾಗಬಹುದು. ಆದರೆ, ನಿಮ್ಮ ಕಠಿಣ ಪರಿಶ್ರಮದಿಂದ ಎಲ್ಲವೂ ಒಳ್ಳೆಯದೇ ಆಗಲಿದೆ. ಕೌಟುಂಬಿಕ ವಿಷಯಗಳಲ್ಲಿ ತೊಂದರೆ ಉಂಟಾಗಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸರಿ-ತಪ್ಪುಗಳ ಬಗ್ಗೆ ಯೋಚಿಸಿ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆದರೆ, ಈ ಸಮಯದಲ್ಲಿ ನಿಮ್ಮ ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಇದನ್ನೂ ಓದಿ- Shani Dosh Indications: ನಿಮ್ಮ ಮೇಲೆ ಶನಿಯ ಭಾರಿ ದೆಸೆ ನಡೆಯುತ್ತಿದೆ ಎನ್ನುತ್ತವೆ ಈ ಸಂಕೇತಗಳು

ಧನು ರಾಶಿ- 
ಮಕರ ರಾಶಿಯಲ್ಲಿ ಹಿಮ್ಮುಖ ಶನಿಯ ಪ್ರವೇಶದಿಂದ ಧನು ರಾಶಿಯವರು ಆರ್ಥಿಕವಾಗಿ ಬಲಗೊಳ್ಳಳಿದ್ದಾರೆ.  ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಇದು ಸರಿಯಾದ ಸಮಯ. ಆದರೆ, ನಿಮ್ಮ ಹಿರಿಯರಿಂದ ಸಲಹೆ ಪಡೆದು ಮುನ್ನಡೆಯುವುದು ಸೂಕ್ತ. ನೀವು ತಂದೆಯಿಂದ ಹಣಕಾಸಿನ ನೆರವು ಪಡೆಯಬಹುದು. ಆಸ್ತಿಯ ವಿಷಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗ ಹುಡುಕಾಟದಲ್ಲಿ ವಿಳಂಬವಾಗಬಹುದು. ಆದರೆ, ಪ್ರಾಮಾಣಿಕ ಪ್ರಯತ್ನಕ್ಕೆ ಎಂದಿಗೂ ಸೋಲಾಗುವುದಿಲ್ಲ. ಹಾಗಾಗಿ ನಿಮ್ಮ ಪ್ರಯತ್ನವನ್ನು ಮುಂದುವರಿಸಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News