ಬೆಂಗಳೂರು : ರಾಹು ಮತ್ತು ಕೇತು ಗ್ರಹಗಳು ಒಂದೂವರೆ ವರ್ಷ ಅಥವಾ 18 ತಿಂಗಳುಗಳಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಇದಲ್ಲದೆ, ನವಗ್ರಹಗಳ ಪೈಕಿ ರಾಹು-ಕೇತು ಮಾತ್ರ ಹಿಮ್ಮುಖವಾಗಿ ಚಲಿಸುತ್ತಿರುತ್ತವೆ. 2023ರ ವರ್ಷವು ಗ್ರಹಗಳ ಸಂಕ್ರಮಣದ ವಿಷಯದಲ್ಲಿ ಬಹಳ ವಿಶೇಷವಾಗಿದೆ. ವರ್ಷದ ಆರಂಭದಲ್ಲಿಯೇ ಶನಿಯು ಸಂಕ್ರಮಿಸಿದೆ. ರಾಹು ಮತ್ತು ಕೇತು ಗ್ರಹಗಳು ಕೂಡಾ 2023 ರಲ್ಲಿ ತಮ್ಮ ರಾಶಿಯನ್ನು ಬದಲಿಸಲಿವೆ. ರಾಹು-ಕೇತು ತನ್ನ ರಾಶಿಯನ್ನು ಅಕ್ಟೋಬರ್ 30 ರಂದು ಬದಲಾಯಿಸುತ್ತದೆ. ರಾಹು ಮೀನ ರಾಶಿಯಿಂದ ಹೊರಬಂದು ಮೇಷ ರಾಶಿಯನ್ನು ಪ್ರವೇಶಿಸಿದರೆ, ಕೇತು ತುಲಾ ರಾಶಿಯಿಂದ ಹೊರ ಬಂದು ಕನ್ಯಾರಾಶಿಯನ್ನು ಪ್ರವೇಶಿಸಲಿದ್ದಾನೆ. ರಾಹು-ಕೇತುಗಳ ರಾಶಿಯ ಬದಲಾವಣೆಯಿಂದ ಮೂರು ರಾಶಿಯವರ ಜೀವನದಲ್ಲಿ ಸಮಸ್ಯೆಗಳು ಹೆಚ್ಚಲಿವೆ.
ಮೇಷ ರಾಶಿ : ಮೇಷ ರಾಶಿಯ ಜನರು ಅಕ್ಟೋಬರ್ 30 ರ ನಂತರ ಜಾಗರೂಕರಾಗಿರಬೇಕು. ಇವರ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಮಾನಸಿಕ ಒತ್ತಡ ಉಂಟಾಗಬಹುದು. ವಿವಾದಗಳು ಸುತ್ತಿಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈ ಸಮಯವನ್ನು ತಾಳ್ಮೆಯಿಂದ ಕಳೆಯುವುದು ಉತ್ತಮ.
ಇದನ್ನೂ ಓದಿ : Guru Uday 2023: ಗುರು ಗ್ರಹದ ಉದಯದಿಂದ ಈ ರಾಶಿಯವರ ಭಾಗ್ಯದ ಬಾಗಿಲು ತೆರೆಯಲಿದೆ
ವೃಷಭ ರಾಶಿ : ವೃಷಭ ರಾಶಿಯವರಿಗೆ ರಾಹು-ಕೇತು ಸಂಕ್ರಮಣ ಮಂಗಳಕರವಾಗಿರುವುದಿಲ್ಲ. ಈ ಜನರು ಒಂದೇ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಣಕಾಸಿನ ಸಮಸ್ಯೆಗಳು ಹೆಚ್ಚಾಗಬಹುದು. ಬುದ್ಧಿವಂತಿಕೆ ಮತ್ತು ವಿವೇಚನೆಯನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೂಡಾ ತೊಂದರೆ ಉಂಟಾಗುತ್ತದೆ.
ಮಕರ ರಾಶಿ : ರಾಹು-ಕೇತು ಸಂಕ್ರಮಣದ ಕಾರಣದಿಂದ ಮಕರ ರಾಶಿಯವರ ಜೀವನದಲ್ಲಿ ಸಮಸ್ಯೆಗಳು ಎದುರಾಗಲಿವೆ. ಅನಗತ್ಯ ಚರ್ಚೆಗಳು ನಡೆಯಲಿವೆ. ರೋಗಗಳು ಮಕರ ರಾಶಿಯವರನ್ನು ಕಾಡಲಿವೆ. ಕೆಲಸದಲ್ಲಿ ಆಸಕ್ತಿಯ ಕೊರತೆಯಿಂದ ತೊಂದರೆಯಾಗಲಿದೆ. ಶ್ರಮಕ್ಕೆ ತಕ್ಕ ಫಲ ಸಿಗದೇ ಇರುವುದರಿಂದ ಮನಸ್ಸು ಖಿನ್ನತೆಗೆ ಒಳಗಾಗಬಹುದು.
ಇದನ್ನೂ ಓದಿ : ಭೂಮಿ, ವಾಹನ ಇತ್ಯಾದಿಗಳ ಖರೀದಿಗೆ ಅತ್ಯಂತ ಶುಭ ಯೋಗ ಇದು, ಕೇವಲ 7 ದಿನ ನಿರೀಕ್ಷಿಸಿ
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.