Maha Shivratri 2023 : ಶಿವರಾತ್ರಿಯಂದು ಶಂಕರನನ್ನು ಒಲಿಸಿಕೊಳ್ಳಲು ಈ ಪವರ್‌ ಫುಲ್‌ ಮಂತ್ರ ಜಪಿಸಿ..!

ಮಹಾಶಿವರಾತ್ರಿ ಹಬ್ಬವನ್ನು ಭಾರತದಾದ್ಯಂತ ಭಕ್ತ ಪೂರ್ವಕವಾಗಿ ಆಚರಿಸಲಾಗುತ್ತದೆ. ಅಂದು ಉಪವಾಸ ಇದ್ದು, ಮಹಾಶಿವ ಮಂತ್ರಗಳನ್ನು ಪಠಿಸುತ್ತಾರೆ. ಜನರು ಶಂಕರನನ್ನು ಮೆಚ್ಚಿಸಲು ತಮ್ಮ ನಂಬಿಕೆಗಳ ಪ್ರಕಾರ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡುತ್ತಾರೆ. ಭಗವಾನ್ ಶಿವ ದೃಷ್ಟ ಶಕ್ತಿಯನ್ನು ನಾಶ ಮಾಡಿ ಒಳಿತನ್ನು ಕರುಣಿಸುವ ಕರುಣಾಮಯಿ ಎಂದು ನಂಬಲಾಗುತ್ತದೆ. ಅದ್ದರಿಂದ ಪವಿತ್ರ ಶಿವರಾತ್ರಿಯಂದು ಶಿವನನ್ನು ಒಲಿಸಿಕೊಳ್ಳಲು ಕೆಲವು ಮಂತ್ರಗಳು ಇಲ್ಲಿವೆ ನೋಡಿ..

Written by - Krishna N K | Last Updated : Feb 17, 2023, 04:01 PM IST
  • ಮಹಾಶಿವರಾತ್ರಿ ಹಬ್ಬವನ್ನು ಭಾರತದಾದ್ಯಂತ ಭಕ್ತ ಪೂರ್ವಕವಾಗಿ ಆಚರಿಸಲಾಗುತ್ತದೆ.
  • ಜನರು ಶಂಕರನನ್ನು ಮೆಚ್ಚಿಸಲು ತಮ್ಮ ನಂಬಿಕೆಗಳ ಪ್ರಕಾರ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡುತ್ತಾರೆ.
  • ಪವಿತ್ರ ಶಿವರಾತ್ರಿಯಂದು ಶಿವನನ್ನು ಒಲಿಸಿಕೊಳ್ಳಲು ಕೆಲವು ಮಂತ್ರಗಳು ಇಲ್ಲಿವೆ ನೋಡಿ.
Maha Shivratri 2023 : ಶಿವರಾತ್ರಿಯಂದು ಶಂಕರನನ್ನು ಒಲಿಸಿಕೊಳ್ಳಲು ಈ ಪವರ್‌ ಫುಲ್‌ ಮಂತ್ರ ಜಪಿಸಿ..! title=

Maha Shivratri 2023 : ಮಹಾಶಿವರಾತ್ರಿ ಹಬ್ಬವನ್ನು ಭಾರತದಾದ್ಯಂತ ಭಕ್ತ ಪೂರ್ವಕವಾಗಿ ಆಚರಿಸಲಾಗುತ್ತದೆ. ಅಂದು ಉಪವಾಸ ಇದ್ದು, ಮಹಾಶಿವ ಮಂತ್ರಗಳನ್ನು ಪಠಿಸುತ್ತಾರೆ. ಜನರು ಶಂಕರನನ್ನು ಮೆಚ್ಚಿಸಲು ತಮ್ಮ ನಂಬಿಕೆಗಳ ಪ್ರಕಾರ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡುತ್ತಾರೆ. ಭಗವಾನ್ ಶಿವ ದೃಷ್ಟ ಶಕ್ತಿಯನ್ನು ನಾಶ ಮಾಡಿ ಒಳಿತನ್ನು ಕರುಣಿಸುವ ಕರುಣಾಮಯಿ ಎಂದು ನಂಬಲಾಗುತ್ತದೆ. ಅದ್ದರಿಂದ ಪವಿತ್ರ ಶಿವರಾತ್ರಿಯಂದು ಶಿವನನ್ನು ಒಲಿಸಿಕೊಳ್ಳಲು ಕೆಲವು ಮಂತ್ರಗಳು ಇಲ್ಲಿವೆ ನೋಡಿ..

ಮಹಾಶಿವರಾತ್ರಿಯ ದಿನದಂದು, ಜನರು ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೀಡುವಂತೆ ಶಿವನನ್ನು ಪ್ರಾರ್ಥಿಸುತ್ತಾರೆ. ಹಲವು ಮಂತ್ರಗಳನ್ನು ಪಠಿಸುತ್ತಾರೆ. ಈ ಮಹಾಶಿವರಾತ್ರಿಯಂದು ನಿಮ್ಮ ಜೀವನದಲ್ಲಿ ಬಯಸುವ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಿಕೆಗಾಗಿ ಈ ಕೆಳಗಿನ ಶಿವ ಮಂತ್ರಗಳನ್ನು ಪಠಿಸಿ.

ಓಂ ನಮಃ ಶಿವಾಯ : ಇದು ಪಂಚಾಕ್ಷರಿ ಶಿವ ಮಂತ್ರವಾಗಿದ್ದು ಅತ್ಯಂತ ಜನಪ್ರಿಯ ಶಿವ ಮಂತ್ರಗಳಲ್ಲಿ ಒಂದಾಗಿದೆ. ಓಂ ನಮಃ ಶಿವಾಯ ಎಂದರೆ ನಾನು ಶಿವನಿಗೆ ನಮಸ್ಕರಿಸುತ್ತೇನೆ ಎಂದರ್ಥ. ಈ ಮಂತ್ರವನ್ನು ಶಿವರಾತ್ರಿಯಂದು 108 ಬಾರಿ ಪಠಿಸಿದರೆ ಎಲ್ಲಾ ಪಾಪಗಳು ಪರಿಹಾರವಾಗುತ್ತವೆ ಎಂದು ನಂಬಲಾಗಿದೆ. ಈ ಮಂತ್ರವು ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ.

ಮಹಾ ಮೃತ್ಯುಂಜಯ ಮಂತ್ರ 

ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ-ವರ್ಧನಂ|
ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್||

ಭಯವನ್ನು ಹೋಗಲಾಡಿಸಲು ಈ ಮಂತ್ರವನ್ನು ಜಪಿಸಿ. ಅಕಾಲಿಕ ಮರಣವನ್ನು ತಡೆಗಟ್ಟುವ ಶಕ್ತಿಯನ್ನು ಈ ಮಂತ್ರ ಹೊಂದಿದೆ ಎಂದು ಹೇಳಲಾಗುತ್ತದೆ. ಈ ಮಂತ್ರವು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ಬಹಳಷ್ಟು ಅಧ್ಯಯನಗಳು ಸೂಚಿಸುತ್ತವೆ. ಈ ಮಂತ್ರವನ್ನು ಜಪಿಸುವುದರಿಂದ ಸುಖ, ಶಾಂತಿಯ ಜೀವನ ನಿಮ್ಮದಾಗುತ್ತದೆ. ಅಲ್ಲದೆ, ದುಷ್ಟ ಶಕ್ತಿಗಳ ವಿನಾಶಕ್ಕೆ ಈ ಮಂತ್ರ ರಾಮಬಾಣವಿದ್ದಂತೆ.

ಓಂ ನಮೋ ಭಗವತೇ ರುದ್ರಾಯ : ಈ ಪಠಣವು ರುದ್ರ ಮಂತ್ರವಾಗಿದೆ ಅಂದರೆ ನಾನು ಪವಿತ್ರನಿಗೆ, ಭಗವಾನ್ ಶಿವನಾದ ರುದ್ರನಿಗೆ ನಮಸ್ಕರಿಸುತ್ತೇನೆ. ಶಿವನ ಆಶೀರ್ವಾದ ಪಡೆಯಲು ನೀವು ಇದನ್ನು ಪಠಿಸಬೇಕು. ಈ ಮಂತ್ರವು ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News