ಈ ಸಸ್ಯವನ್ನು ಮನೆ ಮುಂದೆ ನೆಡುತ್ತಿದ್ದಂತೆಯೇ ಆಗುವುದು ಧನವೃಷ್ಠಿ

ತುಳಸಿ, ಶಮಿ ಗಿಡ ಮತ್ತು ಮನಿ ಪ್ಲಾಂಟ್ ನಂತೆಯೇ ಕ್ರಾಸ್ಸುಲಾ ಸಸ್ಯವನ್ನು ನೆಡುವುದರಿಂದ ವ್ಯಕ್ತಿಯ ಜೀವನವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.  

Written by - Ranjitha R K | Last Updated : Dec 7, 2022, 03:35 PM IST
  • ಕೆಲವು ಸಸ್ಯಗಳನ್ನು ನೆಡುವುದರಿಂದ ಬದಲಾಗುವುದು ಅದೃಷ್ಟ
  • ಸದಾ ಇರುವುದು ಲಕ್ಷ್ಮೀ ದೇವಿಯ ಅನುಗ್ರಹ
  • ಪ್ರತಿ ಕೆಲಸದಲ್ಲಿಯೂ ಸಿಗುವುದು ಯಶಸ್ಸು
ಈ ಸಸ್ಯವನ್ನು ಮನೆ ಮುಂದೆ ನೆಡುತ್ತಿದ್ದಂತೆಯೇ ಆಗುವುದು ಧನವೃಷ್ಠಿ  title=
Vastu Shastra Tips

ಬೆಂಗಳೂರು : ಹಿಂದೂ ಧರ್ಮದ ಜೊತೆಗೆ, ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಸಸ್ಯಗಳ ಬಗ್ಗೆ ಹೇಳಲಾಗಿದೆ. ಈ ಸಸ್ಯಗಳನ್ನು  ಮನೆಯಲ್ಲಿ ನೆಡುವ ಮೂಲಕ ಲಕ್ಷ್ಮೀ ದೇವಿಯ ಅನುಗ್ರಹವನ್ನು ಪಡೆಯುವುದು ಸಾಧ್ಯವಾಗುತ್ತದೆ. ತುಳಸಿ, ಶಮಿ ಗಿಡ ಮತ್ತು ಮನಿ ಪ್ಲಾಂಟ್ ನೆಡುವುದನ್ನು ಮಂಗಳಕರವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.  ಈ ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಈ ಗಿಡಗಳಂತೆಯೇ ಕ್ರಾಸ್ಸುಲಾ ಸಸ್ಯವನ್ನು ಕೂಡಾ ನೆಡುವುದರಿಂದ   ವ್ಯಕ್ತಿಯ ಜೀವನವೇ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.  

ವಾಸ್ತು ಶಾಸ್ತ್ರದ ಪ್ರಕಾರ, ಕ್ರಾಸ್ಸುಲಾ ಸಸ್ಯವನ್ನು ಮನೆಯಲ್ಲಿ ನೆಟ್ಟರೆ ಅದು ಅದ್ಬುತ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.  ಬಹಳ ಸಮಯದಿಂದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆ, ಮನೆಯಲ್ಲಿ ಈ ಸಸ್ಯವನ್ನು ನೆಡುವಂತೆ ವಾಸ್ತುವಿನಲ್ಲಿ ಸೂಚಿಸಲಾಗುತ್ತದೆ. ಈ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ  ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುವುದಲ್ಲದೆ, ಮನೆಯಲ್ಲಿ ಮುಂದೆ ಎಂದಿಗೂ ಹಣಕಾಸಿನ ಸಮಸ್ಯೆ ಎದುರಾಗುವುದೇ ಇಲ್ಲ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : Ashubh Yog : ಈ ಯೋಗದಲ್ಲಿ ಹುಟ್ಟಿದವರ ಕೈಯಲ್ಲಿ ನಿಲ್ಲುವುದಿಲ್ಲ ಹಣ : ಅದಕ್ಕೆ ಇಲ್ಲಿದೆ ಪರಿಹಾರ

ಅದೃಷ್ಟವನ್ನೇ ಬದಲಾಯಿಸುತ್ತದೆ ಈ ಸಸ್ಯ :
ಕ್ರಾಸ್ಸುಲಾ ಸಸ್ಯದ ಅನೇಕ ಅದ್ಭುತ ಗುಣಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವ ಮನೆಯಲ್ಲಿ ಈ ಗಿಡವನ್ನು ನೆಡಲಾಗುತ್ತದೆಯೋ ಆ ಮನೆಯಲ್ಲಿ ಧನ-ಧಾನ್ಯಗಳಿಗೆ ಎಂದಿಗೂ ಕೊರತೆಯಾಗುವುದಿಲ್ಲ. ಅಲ್ಲದೆ ಆ ಮನೆಯವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಾರೆ.  ಮನೆಯಲ್ಲಿ ಹಣ, ಸಂತೋಷ, ಶಾಂತಿ ಮತ್ತು ಧನಾತ್ಮಕ ಶಕ್ತಿ ನೆಲೆಯಾಗುತ್ತದೆ. ಕ್ರಾಸ್ಸುಲಾ ಸಸ್ಯವನ್ನು ಮನೆ, ಕಚೇರಿ ಅಥವಾ ಅಂಗಡಿಯಲ್ಲಿ ಎಲ್ಲಿ ಬೇಕಾದರೂ ನೆಡಬಹುದು. ಈ ಗಿಡ ನೆಟ್ಟ ಮನೆಗಳಲ್ಲಿ ಕುಟುಂಬದ ಸದಸ್ಯರು ಪ್ರಗತಿಯನ್ನು ಪಡೆಯುತ್ತಾರೆ. ಆದರೆ ಅದನ್ನು ನೆಡುವಾಗ ಕೆಲವು ನಿಯಮಗಳ ಬಗ್ಗೆ ಕಾಳಜಿ ವಹಿಸಬೇಕು. 

ಈ ದಿಕ್ಕಿನಲ್ಲಿ ಕ್ರಾಸ್ಸುಲಾ ಸಸ್ಯವನ್ನು ನೆಡಬೇಕು :
ಕ್ರಾಸ್ಸುಲಾ ಸಸ್ಯವನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ. ಈ ಸಸ್ಯವನ್ನು ಮನೆಯ ಒಳಗೆ ಅಥವಾ ಮನೆಯ ಹೊರಗೆ ಎಲ್ಲಿ ಬೇಕಾದರೂ ನೆಡಬಹುದು. ಈ ಸಸ್ಯವನ್ನು  ಮನೆಯ ಮುಖ್ಯ ದ್ವಾರದಲ್ಲಿ ನೆಡುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಮನೆಯ ಬಾಲ್ಕನಿಯಲ್ಲಿಯೂ ಇದನ್ನೂ ನೆಡಬಹುದು. ಆದರೆ ಈ ಸಸ್ಯವನ್ನು ಅಪ್ಪಿತಪ್ಪಿಯೂ ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ದಕ್ಷಿಣ ದಿಕ್ಕಿನಲ್ಲಿ ಈ ಸಸ್ಯವನ್ನು ನೆಟ್ಟರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳೆ  ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : Swapna Shastra : ನಿಮ್ಮ ಕನಸಿನಲ್ಲಿ ಸಾವು ಅಥವಾ ಮೃತ ದೇಹ ಕಂಡರೆ ಏನು ಅರ್ಥ ಗೊತ್ತಾ? ಇಲ್ಲಿದೆ ನೋಡಿ

ಕ್ರಾಸ್ಸುಲಾವನ್ನು ಮನಿ ಟ್ರೀ ಮತ್ತು ಲಕ್ಕಿ ಟ್ರೀ ಎಂಡು ಕೂಡಾ ಕರೆಯುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ಈ ಗಿಡವನ್ನು ನೆಡುವುದರಿಂದ ವ್ಯಕ್ತಿಯ ಬಡತನ ನಿವಾರಣೆಯಾಗುತ್ತದೆ. ಮತ್ತು ಕುಟುಂಬದಲ್ಲಿ ಸಮೃದ್ಧಿ ನೆಲೆಯಾಗುತ್ತದೆ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News