ಮುಂದಿನ ವಾರ ಈ ಐದು ರಾಶಿಯವರಿಗೆ ಭಾರೀ ಶುಭ! ಎಲ್ಲಾ ಮೂಲಗಳಿಂದ ಹರಿದು ಬರುವುದು ಧನ

Weekly Horoscope :ಈ ರಾಶಿಯವರ ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಅದೃಷ್ಟದ ಸಹಾಯದಿಂದ ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ದೊಡ್ಡ ಮಟ್ಟದ ಪ್ರಗತಿ ಸಿಗಲಿದೆ.

Written by - Ranjitha R K | Last Updated : Feb 10, 2023, 04:29 PM IST
  • ಫೆಬ್ರವರಿ ಮೂರನೇ ವಾರ ಈ ರಾಶಿಯವರಿಗೆ ಶುಭ
  • ಜೊತೆಗಿರುತ್ತದೆ ಅದೃಷ್ಟ
  • ಸರ್ವ ವಿಷಯಗಳಲ್ಲಿಯೂ ಶುಭ
ಮುಂದಿನ ವಾರ ಈ ಐದು ರಾಶಿಯವರಿಗೆ ಭಾರೀ ಶುಭ! ಎಲ್ಲಾ ಮೂಲಗಳಿಂದ ಹರಿದು ಬರುವುದು ಧನ  title=

Weekly Horoscope : ಸಾಪ್ತಾಹಿಕ ಜಾತಕ ಫಲದ ಪ್ರಕಾರ, ಫೆಬ್ರವರಿ ಮೂರನೇ ವಾರವು ಕೆಲವು ರಾಶಿಯವರಿಗೆ ಜನರಿಗೆ ಅಪೇಕ್ಷಿತ ಯಶಸ್ಸು ನೀಡುತ್ತದೆ. ಈ ರಾಶಿಯವರ ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಅದೃಷ್ಟದ ಸಹಾಯದಿಂದ ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ದೊಡ್ಡ ಮಟ್ಟದ ಪ್ರಗತಿ ಸಿಗಲಿದೆ. ಮುಂದಿನ ವಾರ ಅದೃಷ್ಟದ ರಾಶಿಗಳು ಯಾವುವು ನೋಡೋಣ. 

ಮೇಷ ರಾಶಿ : ಈ ರಾಶಿಯ ಜನರು ಈ ವಾರ ತಮ್ಮ ಕೆಲಸದಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯಲಿದ್ದಾರೆ. ಸೌಜನ್ಯದಿಂದ ಮಾತನಾಡಿದರೆ ಪ್ರತಿಯೊಂದು ಕೆಲಸವೂ ಸುಲಭವಾಗಿ ಮುಗಿದು ಹೋಗುತ್ತದೆ. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು. 

ಇದನ್ನೂ ಓದಿ : Money Line in Palm : ನಿಮ್ಮ ಕೈಯಲ್ಲಿ 'ಮನಿ ಲೈನ್' ಇದ್ದರೆ ಕೈತುಂಬಾ ಹಣ : ಐಷಾರಾಮಿ ಜೀವನ ನಡೆಸುತ್ತೀರಿ

ವೃಷಭ ರಾಶಿ : ವೃಷಭ ರಾಶಿಯವರಿಗೆ ವಾರವು ಅತ್ಯಂತ ಶುಭಕರವಾಗಿದ್ದು, ಅದೃಷ್ಟ ಹೆಚ್ಚಲಿದೆ. ಈ ರಾಶಿಯವರು ತಮ್ಮ ವೃತ್ತಿಗೆ ಸಂಬಂಧಿಸಿದ ಕೆಲವು ಮಂಗಳಕರ ಮಾಹಿತಿಯನ್ನು ಪಡೆಯಬಹುದು. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭವಾಗಬಹುದು.  ಆದಾಯವನ್ನು ಹೆಚ್ಚಿಸುವ ಬಲವಾದ ಅವಕಾಶಗಳಿವೆ. ಉದ್ಯೋಗಸ್ಥ ಮಹಿಳೆಯರು ಹೆಚ್ಚಿನ ಗೌರವವನ್ನು ಪಡೆಯಲಿದ್ದಾರೆ.

ಕನ್ಯಾ ರಾಶಿ : ಈ ವಾರ ಕನ್ಯಾ ರಾಶಿಯವರಿಗೆ ಹಲವು ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದರೆ,  ತೀರ್ಪು ನಿಮ್ಮ ಪರ ಬರಲಿದೆ. ಹೂಡಿಕೆಯಿಂದ ಲಾಭವಾಗಲಿದೆ.  ನೀವು ಇಷ್ಟ ಪಡುವ ಹುಡುಗ ಅಥವಾ ಹುಡುಗಿಗೆ ಮನದ ಮಾತು ಹೇಳಲು ಇದು ಶುಭ ಸಮಯ. 

ಇದನ್ನೂ ಓದಿ : Vastu Plants: ಮನಿಪ್ಲಾಂಟ್ ಬದಲು ಈ ಎಲೆಯನ್ನು ಮನೆಯ ಈ ಭಾಗದಲ್ಲಿಡಿ: ಚಿನ್ನ-ಹಣ ಬೀರುವಿನಲ್ಲಿ ತುಂಬಿ ತುಳುಕುವಂತೆ ಮಾಡುತ್ತೆ!

ತುಲಾ ರಾಶಿ : ತುಲಾ ರಾಶಿಯವರಿಗೆ ಈ ವಾರ ತುಂಬಾ ಒಳ್ಳೆಯದು.  ಉದ್ಯೋಗ ವೃತ್ತಿಯಲ್ಲಿ ಇರುವವರಿಗೆ ಈ ವಾರ ಇನ್ನೂ ಹೆಚ್ಚು ಪ್ರಯೋಜನವಾಗಲಿದೆ. ದೊಡ್ಡ ಸ್ಥಾನ ಮತ್ತು ಜವಾಬ್ದಾರಿಯನ್ನು ಪಡೆಯುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವುದು ಸಾಧ್ಯವಾಗುತ್ತದೆ.  

 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News