ಎಲ್ಲಾ ಸಸ್ಯಗಳು ಚೆನ್ನಾಗಿಯೇ ಅರಳಿ ನಿಂತಿದ್ದರೂ ತುಳಸಿ ಮಾತ್ರ ಒಣಗುತ್ತಿದ್ದರೆ ಸ್ವಯಂ ಲಕ್ಷ್ಮೀ ನೀಡುವ ಮುನ್ಸೂಚನೆ ಇದು !

ಬೆಳಿಗ್ಗೆ ತುಳಸಿ ಗಿಡಕ್ಕೆ ನೀರು ಅರ್ಪಿಸಿ, ದೀಪ ಬೆಳಗಿಸಿ ಪೂಜೆ ಮಾಡಲಾಗುತ್ತದೆ. ಪ್ರತಿ ನಿತ್ಯ ಶೃದ್ದಾ ಭಕ್ತಿಯಿಂದ ತುಳಸಿ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.  

Written by - Ranjitha R K | Last Updated : Jan 22, 2025, 06:28 PM IST
  • ತುಳಸಿ ಗಿಡಕ್ಕೆ ನೀರು ಅರ್ಪಿಸಿ, ದೀಪ ಬೆಳಗಿಸಿ ಪೂಜೆ ಮಾಡಲಾಗುತ್ತದೆ.
  • ಪ್ರತಿ ನಿತ್ಯ ಶೃದ್ದಾ ಭಕ್ತಿಯಿಂದ ತುಳಸಿ ಪೂಜೆ ಮಾಡುವುದು ಪದ್ಧತಿ
  • ತುಳಸಿ ಒಣಗುತ್ತಿದ್ದರೆ ಏನರ್ಥ
ಎಲ್ಲಾ ಸಸ್ಯಗಳು ಚೆನ್ನಾಗಿಯೇ ಅರಳಿ ನಿಂತಿದ್ದರೂ ತುಳಸಿ ಮಾತ್ರ ಒಣಗುತ್ತಿದ್ದರೆ  ಸ್ವಯಂ ಲಕ್ಷ್ಮೀ ನೀಡುವ ಮುನ್ಸೂಚನೆ ಇದು ! title=

ಬೆಂಗಳೂರು : ತುಳಸಿ ಹಿಂದೂಗಳ ಮನೆಯ ಮುಂದೆ  ಇದ್ದೇ ಇರುತ್ತದೆ. ತುಳಸಿ ಕಟ್ಟೆಯಲ್ಲಿಯಾದರೂ ಸರಿ ಅಥವಾ ಮನೆಯ ಮುಂದೆಯಾದರೂ ಸರಿ ಮನೆ  ತುಳಸಿ ಇರುವುದು ಪದ್ಧತಿ ಅಥವಾ ಸಂಪ್ರದಾಯ. ತುಳಸಿಯನ್ನು ಲಕ್ಷ್ಮೀಯ ರೂಪವೆಂದೇ ಕರೆಯಲಾಗುತ್ತದೆ. ಹಾಗಾಗಿಯೇ ನಮ್ಮ ಜೀವನದಲ್ಲಿ ತುಳಸಿಗೆ ವಿಶೇಷ ಸ್ಥಾನ. ಸಾಮಾನ್ಯವಾಗಿ ದಿನಕ್ಕೆರಡು ಬಾರಿ ತುಳಸಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಲಾಗುತ್ತದೆ.  

ಬೆಳಿಗ್ಗೆ ತುಳಸಿ ಗಿಡಕ್ಕೆ ನೀರು ಅರ್ಪಿಸಿ, ದೀಪ ಬೆಳಗಿಸಿ ಪೂಜೆ ಮಾಡಲಾಗುತ್ತದೆ. ಪ್ರತಿ ನಿತ್ಯ ಶೃದ್ದಾ ಭಕ್ತಿಯಿಂದ ತುಳಸಿ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ನಿತ್ಯ ತುಳಸಿಗೆ ನೀರು ಹಾಕಿದರೂ ಮನೆಯಂಗಳದ ತುಳಸಿ ಇದ್ದಕ್ಕಿದ್ದಂತೆ ಬಾಡುವುದೂ ಇದೆ.  ಪ್ರತಿ ನಿತ್ಯ ನೀರು ಹಾಕಿದರೂ ತುಳಸಿ ಸಸಿ ಹೀಗೆ ಯಾಕೆ ಒಣಗುತ್ತಿದೆ ಎನ್ನುವುದು ಅರ್ಥವಾಗುವುದಿಲ್ಲ.  ಇನ್ನು ಮನೆ ಮುಂದೆ ಇರುವ ಎಲ್ಲಾ ಸಸ್ಯಗಳು ಚೆನ್ನಾಗಿಯೇ ಅರಳಿ ನಿಂತಿದ್ದರೂ ತುಳಸಿ ಮಾತ್ರ ಒಣಗುತ್ತಿದ್ದರೆ ಇದು ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಗಳ ಮುನ್ಸೂಚನೆ ಎಂದು ಹೇಳಲಾಗುತ್ತದೆ.   

ಇದನ್ನೂ ಓದಿ : ಜನವರಿ 29 ರಂದು ಸಂಭವಿಸುವ ಈ ಮಹಾ ಯೋಗದಿಂದ ಈ ರಾಶಿಯವರಿಗೆ ಒಲಿಯುತ್ತಾಳೆ ಧನಲಕ್ಷಿ..!

ತುಳಸಿ ಒಣಗುವುದು ಅಶುಭ : 
ಹಿಂದೂ ಧರ್ಮದ ಗ್ರಂಥಗಳ ಪ್ರಕಾರ, ತುಳಸಿ ಸಸ್ಯ ಒಣಗುವುದು ಮತ್ತು ಸೊರಗುವುದು ಶುಭ ಸೂಚಕವಲ್ಲ. ನಾವಿರುವ ಮನೆಗೆ ಏನಾದರೂ ಸಮಸ್ಯೆಗಳು ಎದುರಾದರೆ, ಆ ಸಮಸ್ಯೆಯ ತಾಪವನ್ನು ಮೊದಲು ತುಳಸಿ ತನ್ನತ್ತ ಸೆಳೆದುಕೊಳ್ಳುತ್ತಾಳಂತೆ. ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಿ ಹೋಗುತ್ತದೆ ಎನ್ನಲಾಗಿದೆ.ಇನ್ನೊಂದು ನಂಬಿಕೆಯ ಪ್ರಕಾರ,ಮನೆಗೆ ಸಮಸ್ಯೆಗಳು ಎದುರಾಗುವುದಾದರೆ ಮೊದಲು ಲಕ್ಷ್ಮೀ ಸಮಾನಳಾಗಿರುವ ತುಳಸಿ ಎದ್ದು ಹೊರ ನಡೆಯುತ್ತಾಳೆ ಎನ್ನುವುದು. ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಲು ಆರಂಭಿಸಿದರೆ ಏನೋ ಅಶುಭ ಸಂಭವಿಸಲಿದೆ ಎಂದೇ ಅರ್ಥ. 

ಇದಲ್ಲದೆ, ತುಳಸಿ ಸಸಿ ಒಣಗುವುದಕ್ಕೂ ಬುಧ ಗ್ರಹಕ್ಕೂ ಸಂಬಂಧವಿದೆ.  ಜ್ಯೋತಿಷ್ಯದ ಪ್ರಕಾರ, ಬುಧನ ಬಣ್ಣವು ಹಸಿರು.ಇದನ್ನು ಮರ ಮತ್ತು ಸಸ್ಯಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಮಾತ್ರವಲ್ಲ, ಬುಧ ಇತರ ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಫಲಗಳನ್ನು ವ್ಯಕ್ತಿಗೆ ರವಾನಿಸುತ್ತದೆ. ಒಂದು ಗ್ರಹವು ಅಶುಭ ಫಲಗಳನ್ನು ನೀಡುವುದಾದರೆ, ಇದರ ಪ್ರಭಾವ ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಮೊದಲು ಆಗುತ್ತದೆ. ತುಳಸಿ ಕೂಡಾ ಬುಧ ಗ್ರಹಕ್ಕೆ ಸಂಬಂಧಿಸಿದ್ದು  ಎನ್ನುವುದನ್ನು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶ.  

ಇದನ್ನೂ ಓದಿ :ಸಂಜೆ ವೇಳೆಗೆ ಮನೆಯ ಈ ದಿಕ್ಕಿಗೆ ದೀಪ ಹಚ್ಚಿದರೆ ಮನೆ ಪ್ರವೇಶಿಸುತ್ತಾಳೆ ಮಹಾ ಲಕ್ಷ್ಮೀ !ಕುಬೇರನ ಖಜಾನೆಯೇ ನಿಮ್ಮ ಕೈ ಸೇರುವುದು !ಸಾಲ ಮುಕ್ತ ಜೀವನ ನಿಮ್ಮದಾಗುವುದು

ಇನ್ನು ಒಣಗಿದ ತುಳಸಿ ಗಿಡವನ್ನು ಅಂಗಳದಲ್ಲಿ ಇಡುವುದು ಕೂಡಾ ಅಶುಭವೇ. ಒಂದು ವೇಳೆ ಮನೆಯಂಗಳದ ತುಳಸಿ ಗಿಡ ಒಣಗಿ ಹೋಗಿರುವುದು  ಗಮನಕ್ಕೆ ಬಂದ ಕೂಡಲೇ ಅದನ್ನು ತೆಗೆದು ನೀರಿನಲ್ಲಿ ಬಿಡಬೇಕು. ಹೊಸ ತುಳಸಿ ಸಸ್ಯವನ್ನು ಆ ಜಾಗದಲ್ಲಿ ನೆಟ್ಟು ನಿತ್ಯ ಪೂಜೆ ಪುನಸ್ಕಾರ ಆರಂಭಿಸಬೇಕು. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News